ಬ್ಯಾಂಕಾಕಿನಲ್ಲಿ ಬಾಂಬ್ ಸ್ಫೋಟ: ಹಲವಾರು ಮಂದಿ ಸಾವು
ಬ್ಯಾಂಕಾಕ್, ಆಗಸ್ಟ್ 17: ಇಲ್ಲಿನ ಎರ್ವಾನ್ ದೇಗುಲದ ಸಮೀಪದಲ್ಲೇ ಸೋಮವಾರ ಸಂಜೆ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ 12 ಜನ ಸಾವನ್ನಪ್ಪಿದ್ದು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
ಸೆಂಟ್ರಲ್ ಬ್ಯಾಂಕಾಕ್‌ನ ಧಾರ್ಮಿಕ ಕೇಂದ್ರವೊಂದರ ಹೊರಗೆ ಸೋಮವಾರ ಸಂಜೆ ಭಾರಿ ಬಾಂಬ್ ಸ್ಫೋಟದಿಂದ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೇರಿದೆ. ಗಾಯಗೊಂಡವರ ಸಂಖ್ಯೆ 120 ದಾಟಿದೆ.
ಥೈಲಾಂಡಿನ ರಾಜಧಾನಿಯಲ್ಲಿ ಭಾರಿ ಪ್ರಮಾಣದ ಗೊಂದಲ ಉಂಟಾಗಿದ್ದು, ಜನರು ಗಾಬರಿಯಿಂದ ಓಡಾಡುತ್ತಿದ್ದಾರೆ ಚಿಡ್ಲೊಮ್ ಜಿಲ್ಲೆಯ ಎರ್ವಾನ್ ದೇಗುಲದ ಬಳಿ ಸ್ಫೋಟ ಸಂಭವಿಸಿದ್ದು, ಸಮೀಪದಲ್ಲೇ ಫೈವ್ ಸ್ಟಾರ್ ಹೋಟೆಲ್ ಕೂಡಾ ಇದೆ.

ಸಮೀಪದಲ್ಲಿ ಮೂರ್ನಾಲ್ಕು ದೊಡ್ಡ ದೊಡ್ಡ ಮಳಿಗೆಗಳಿವೆ. ಘಟನಾ ಸ್ಥಳದ ಬಳಿ ಸುಟ್ಟಿರುವ ಮೋಟರ್ ಬೈಕ್ ಗಳು, ಗಾಯಗೊಂಡು ನರಳುವ ಜನರು ಕಂಡು ಬಂದಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
Horrific pictures seconds after Central Bangkok blast. 12 dead, many injured. Another live bomb found on the scene. pic.twitter.com/u1tl3s0F4e
— Gautam Trivedi (@Gotham3) August 17, 2015 ಎರ್ವಾನ್ ದೇಗುಲದಲ್ಲಿ ನಾಲ್ಕು ಮುಖವುಳ್ಳ ಬ್ರಹ್ಮ(Phra Phrom) ನನ್ನು ಪೂಜಿಸಲಾಗುತ್ತದೆ. ಥಾಯ್ ಶೈಲಿಯ ಬ್ರಹ್ಮ ಸೃಷ್ಟಿಕರ್ತನಾಗಿ ಇಲ್ಲಿ ಪೂಜಿಸಪಡುತ್ತಿದ್ದಾನೆ. ಈ ಹಿಂದೆ 2006ರಲ್ಲಿ ಈ ದೇಗುಲದ ಮೇಲೆ ದುಷ್ಕರ್ಮಿಗಳ ದಾಳಿ ನಡೆದಿತ್ತು.
Video shows moment deadly explosion rocks Bangkok http://t.co/xkMxiajmDO pic.twitter.com/NvO3cPjJfr
— The Independent (@Independent) August 17, 2015 











Click it and Unblock the Notifications