ಬಾಗ್ದಾದ್ ನ ತರಕಾರಿ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟಕ್ಕೆ ಎಂಟು ಮಂದಿ ಸಾವು

Posted By:
Subscribe to Oneindia Kannada

ಇರಾಕ್ ದೇಶದ ಬಾಗ್ದಾದ್ ನ ಶಿಯಾ ಮುಸ್ಲಿಮರ ಜಿಲ್ಲೆಯ ಜನನಿಬಿಡ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಬಾಂಬ್ ಸ್ಫೋಟವಾಗಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ. ಯಾವುದೇ ಉಗ್ರಗಾಮಿ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.

ಸುನ್ನಿ ಉಗ್ರಗಾಮಿ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ನ ಉಗ್ರಗಾಮಿಗಳು ಇತ್ತೀಚೆಗೆ ಬಾಗ್ದಾದ್ ನಲ್ಲಿ ನಡೆದಿದ್ದ ದಾಳಿಗೆ ತಾವೇ ಹೊಣೆ ಎಂದು ಹೇಳಿಕೊಂಡಿದ್ದರು.

ಕ್ವೆಟ್ಟಾದಲ್ಲಿ ಭೀಕರ ಬಾಂಬ್ ಸ್ಪೋಟಕ್ಕೆ 15 ಬಲಿ

ಕಾರಿನಲ್ಲಿ ಬಾಂಬ್ ಅನ್ನು ಸ್ಫೋಟಿಸಲಾಗಿದೆ. ಜಮೀಲಾದ ಶಿಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಈ ಕೃತ್ಯ ಎಸಗಲಾಗಿದೆ. ಇದು ಆತ್ಮಹತ್ಯಾ ದಾಳಿಯೋ ಅಥವಾ ಕಾರಿನಲ್ಲಿ ಬಾಂಬ್ ಇರಿಸಿ, ಸ್ಫೋಟ ಮಾಡಲಾಗಿದೆಯೇ ಎಂಬುದು ಖಚಿತವಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Bomb blast

ವೈದ್ಯರು ಹಾಗೂ ಪೊಲೀಸರ ಮಾಹಿತಿ ಪ್ರಕಾರ ಎಂಟು ಮಂದಿ ಮೃತಪಟ್ಟು, ಇಪ್ಪತ್ತೈದು ಮಂದಿಗೆ ಗಾಯಗಳಾಗಿವೆ.

ಇರಾಕ್ ನ ಆಂತರಿಕ ಸಚಿವಾಲಯದ ವಕ್ತಾರ ಬ್ರಿಗೇಡಿಯರ್ ಜನರಲ್ ಸಾದ್ ಮಾನ್ ಮಾತನಾಡಿ, ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಪೊಲೀಸರು ಸೇರಿದಂತೆ ಹನ್ನೆರಡು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A car bomb killed at least eight people in a crowded vegetable market in a Shia Muslim district of Baghdad on Monday, police and medics said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ