Donald Trump: ಸೇಡಿಗೆ ಸೇಡು ತೀರಿಸಿಕೊಂಡ ಕೆನಡಾ, ಅಮೆರಿಕಗೆ ಭಾರಿ ನಷ್ಟ?

ಅಮೆರಿಕ & ಕೆನಡಾ ನಡುವೆ ತೆರಿಗೆ ಯುದ್ಧ ಜೋರಾಗಿದ್ದು, ಒಬ್ಬರು ಮತ್ತೊಬ್ಬರ ವಿರುದ್ಧ ಗುಡುಗುವ ಪರಿಸ್ಥಿತಿ ಇದೀಗ ನಿರ್ಮಾಣ ಆಗಿದೆ. ಮೊದಲಿಗೆ ಡೊನಾಲ್ಡ್ ಟ್ರಂಪ್ ಅವರು ಕೆನಡಾ ವಿರುದ್ಧ ಶೇಕಡಾ 25 ರಷ್ಟು ತೆರಿಗೆ ಅಸ್ತ್ರ ಪ್ರಯೋಗ ಮಾಡಿದರು, ಆ ನಂತರ ಮೆಕ್ಸಿಕೋ ವಿರುದ್ಧ ಕೂಡ ಇದೇ ರೀತಿಯ ತೆರಿಗೆ ಬಾಣ ಬಿಟ್ಟಿದ್ದಾರೆ ಡೊನಾಲ್ಡ್ ಟ್ರಂಪ್. ಇದಕ್ಕೆ ಸರಿಯಾಗಿ ತಿರುಗೇಟು ನೀಡಿರುವ ಕೆನಡಾ ಪ್ರಧಾನಿ ಟ್ರುಡೋ ಏನ್ ಮಾಡಿದ್ದಾರೆ ಗೊತ್ತಾ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು ಅರ್ಧ ತಿಂಗಳು ಕಳೆಯುವ ಮೊದಲೇ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದಾರೆ. ತಮ್ಮ ನಿರ್ಧಾರಗಳ ಮೂಲಕವೇ ಸಂಚಲನ ಸೃಷ್ಟಿ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಅವರು, ಇದೀಗ ತಮ್ಮ ಅಕ್ಕಪಕ್ಕದ ದೇಶಗಳ ವಿರುದ್ಧ ಭೀಕರವಾಗಿ ತೆರಿಗೆ ಹೇರುವ ಮೂಲಕ ತೆರಿಗೆ ಯುದ್ಧ ಸಾರಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಟ್ರಂಪ್ ಅವರ ಈ ವರ್ತನೆಗೆ ಕೆನಡಾ ಪ್ರಧಾನಿ ಟ್ರುಡೋ ಉತ್ತರ ಕೊಟ್ಟಿದ್ದು, ತಮ್ಮ ಕಡೆಯಿಂದ ಕೂಡ ಬೃಹತ್ ತರಿಗೆ ಘೋಷಣೆ ಮಾಡಿದ್ದಾರೆ!

Canada Tariffs Trudeau s 25 Response to Donald Trump

ಅಮೆರಿಕ ವಿರುದ್ಧ ಸಿಡಿದೆದ್ದ ಕೆನಡಾ!

ಇಷ್ಟು ದಿನ ಸುಮ್ಮನೆ ಕೂತು ಆಟ ನೋಡುತ್ತಿದ್ದ ಕೆನಡಾ ಹಂಗಾಮಿ ಪ್ರಧಾನಿ ಜಸ್ಟಿನ್ ಟ್ರುಡೋ ಇದೀಗ ಡೊನಾಲ್ಡ್ ಟ್ರಂಪ್ ವಿರುದ್ಧ ಸೇಡಿಗೆ ಸೇಡು ಅಂತಾ ನಿಂತಿದ್ದಾರೆ. ಅಮೆರಿಕ ಇದೀಗ ಕೆನಡಾ ವಿರುದ್ಧ ಹೇರಿಕೆ ಮಾಡಿರುವ ಶೇಕಡಾ 25 ರಷ್ಟು ತೆರಿಗೆ ಅಸ್ತ್ರಕ್ಕೆ ಪ್ರತಿಯಾಗಿ, ಮತ್ತೆ ಕೆನಡಾ ಕೂಡ ಅಮೆರಿಕದಿಂದ ಆಮದು ಆಗುವ ವಸ್ತುಗಳಿಗೆ ಶೇಕಡಾ 25 ರಷ್ಟು ತೆರಿಗೆ ಹಾಕುವ ಘೋಷಣೆ ಮಾಡಿದೆ. ಈ ಮೂಲಕ ಪಾಶ್ಚಿಮಾತ್ಯ ದೇಶಗಳ ಸ್ನೇಹದಲ್ಲಿ ಬೆಂಕಿ ಹೊತ್ತಿದೆ.

ಮೆಕ್ಸಿಕೋ ಕಡೆಯಿಂದಲೂ ಸೇಮ್ ನಿರ್ಧಾರ!

ಇನ್ನೊಂದು ಕಡೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ ರೀತಿ ಮೆಕ್ಸಿಕೋ ವಿರುದ್ಧ ಕೂಡ ಇದೇ ರೀತಿ ಶೇಕಡಾ 25 ರಷ್ಟು ತೆರಿಗೆ ಹಾಕುವ ನಿರ್ಧಾರ ಪ್ರಕಟಿಸಿದ್ದರು. ಅದಕ್ಕೂ ತಕ್ಕ ಉತ್ತರ ನೀಡಿರುವ ಮೆಕ್ಸಿಕೋ ಸರ್ಕಾರ, ಅಮೆರಿಕದಿಂದ ಮೆಕ್ಸಿಕೋ ದೇಶಕ್ಕೆ ಬರುವ ಎಲ್ಲ ವಸ್ತುಗಳ ಮೇಲೆ ಶೇಕಡಾ 25 ರಷ್ಟು ತೆರಿಗೆ ಘೋಷಣೆ ಮಾಡಿದೆ. ಇದು ಭಾರಿ ಸಂಚಲನಕ್ಕೆ ಕೂಡ ಕಾರಣವಾಗುತ್ತಿದ್ದು, ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಇದು ಹೊಸ ರೀತಿ ಯುದ್ಧವಾಗಿದೆ ಎನ್ನಲಾಗುತ್ತಿದೆ.

ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳು ಕೂಡ ಆಗಿಲ್ಲ, ಅದಾಗಲೇ ಇಷ್ಟೊಂದು ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯ ಕಿರಿಕ್ ಮತ್ತಷ್ಟು ಹೆಚ್ಚಾಗುವ ಆತಂಕ ಕೂಡ ಇದೀಗ ಆವರಿಸಿದೆ. ಅಲ್ಲದೆ ಈ ವಿಚಾರದಲ್ಲಿ ಅಮೆರಿಕದ ಮಿತ್ರ ರಾಷ್ಟ್ರಗಳಿಗೂ ಭಾರಿ ಚಿಂತೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+