• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆನಡಾದಲ್ಲಿ ಇಬ್ಬರಿಗೆ ಬ್ರಿಟನ್ ಮಾದರಿಯ ಕೊರೊನಾ ಸೋಂಕು

|

ಮಾಸ್ಕೋ, ಡಿಸೆಂಬರ್ 27: ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನ ಹೊಸ ಪ್ರಬೇಧ ಇದೀಗ ಕೆನಡಾದಲ್ಲೂ ಪತ್ತೆಯಾಗಿದೆ.

ಬ್ರಿಟನ್ ನಲ್ಲಿ ಕಾಣಿಸಿಕೊಂಡ ಹೊಸ ಕೊರೋನ ಪ್ರಬೇಧದ ನಂತರ ನಿಧಾನ ವಾಗಿ ಅದು ಇತರೆ ದೇಶಗಳಿಗೂ ಹಬ್ಬತ್ತಿದ್ದು ಕೆನಡಾದಲ್ಲಿ ಹೊಸ , ರೂಪಾಂತರದ ಎರಡು ಹೊಸ ಕೊರೋನ ಸೋಂಕು ಪ್ರಕರಣ ದಾಖಲಾಗಿದೆ.

ಚಿಕ್ಕಮಗಳೂರು: ಬ್ರಿಟನ್ ನಿಂದ ಆಗಮಿಸಿದ ಇಬ್ಬರಿಗೆ ಕೊರೊನಾ ಸೋಂಕು

ಎರಡು ಪ್ರಕರಣಗಳು ಕೆನಡಾದಲ್ಲಿ ದೃಡಪಟ್ಟಿದೆ ಎಂದು ಒಂಟಾರಿಯೊ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದು, ಡರ್ಹಾಮ್ನ ದಂಪತಿಗಳಲ್ಲಿ ಇದು ಕಾಣಿಸಿಕೊಂಡಿದ್ದು, ಯಾವುದೇ ಪ್ರಯಾಣದ ಇತಿಹಾಸ, ಮಾನ್ಯತೆ ಅಥವಾ ಹೆಚ್ಚಿನ-ಅಪಾಯದ ಸಂಪರ್ಕಗಳಿಲ್ಲ. ಆದರೂ ಇಬ್ಬರಿಗೂ ಎಚ್ಚರಿಕೆ ಮಾಹಿತಿ ನೀಡಲಾಗಿದೆ.

ಹೊಸ ಮಾಹಿತಿ ಬಿಡುಗಡೆಯ ಪ್ರಕಾರ, ಕೆನಡಾದಲ್ಲಿ ಹೊಸ ಕೊರೊನಾಸೋಂಕು ರೂಪಾಂತರದ ಮೊದಲ ಎರಡು ಪ್ರಕರಣಗಳನ್ನು ಒಂಟಾರಿಯೊದ ಆರೋಗ್ಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಬಾರ್ಬರಾ ಯಾಫೆ ಘೋಷಿಸಿದ್ದಾರೆ. ಯುಕೆ ಆರೋಗ್ಯ ಅಧಿಕಾರಿಗಳು ದೇಶವು ಇತರ ಸಾರ್ಸ್-ಕೋವ್ -2 ವೈರಸ್ ತಳಿಗಳಿಗಿಂತ ವೇಗವಾಗಿ ಹರಡುವ ಕರೋನ ಸೋಂಕಿನ ಹೊಸ ರೂಪಾಂತರವನ್ನು ಗುರುತಿಸಲಾಗಿದೆ ಕಳೆದವಾರ ಎಂದು ಘೋಷಿಸಿದ್ದರು.

ಯುಕೆಯಲ್ಲಿ ಬೆಳಕಿಗೆ ಬಂದಿರುವ ಹೊಸ ಬಗೆಯ ಕೊರೊನಾ ವೈರಸ್‌ನಿಂದಾಗಿ ಇಡೀ ಜಗತ್ತು ಆತಂಕದಲ್ಲಿ ಮುಳುಗಿದೆ. ಈಗಾಗಲೇ ಉತ್ತರ ಐರ್ಲೆಂಡ್ , ಆಸ್ಟ್ರೇಲಿಯಾ, ಇಟಲಿ, ಜಪಾನ್, ಸಿಂಗಾಪುರದಲ್ಲಿ ಇದು ಕಾಲಿಟ್ಟಿದೆ. ಭಾರತಕ್ಕೂ ಹರಡಬಹುದು ಎಂಬ ಆತಂಕ ಎಲ್ಲರಲ್ಲಿ ಮೂಡಿದೆ.

ತೆಲಂಗಾಣದಲ್ಲಿ ಲಂಡನ್‌ನಿಂದ ಬಂದ 16 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ 8, ಶಿವಮೊಗ್ಗ 5, ಚಿಕ್ಕಮಗಳೂರಿನಲ್ಲಿ ಕೊರೊನಾ ತಗುಲಿದೆ. ಬ್ರಿಟನ್‌ನಿಂದ ಹಿಂದಿರುಗುವವರನ್ನು ಪತ್ತೆ ಹಚ್ಚಿಯೇ ನಾಲ್ಕೈದು ದಿನ ಕಳೆದಿವೆ. ಈವರೆಗೂ ಎಸ್‌ ಜೀನ್ ಟೆಸ್ಟ್ ಪರೀಕ್ಷೆ ಫಲಿತಾಂಶ ಬಂದಿಲ್ಲ.

ಬ್ರಿಟನ್ ವೈರಸ್ ಖಚಿತವಾದಲ್ಲಿ ಮತ್ತೆ 12 ಪ್ರಬೇಧ ವೈರಸ್ ಪತ್ತೆ ಪರೀಕ್ಷೆ ನಡೆಯಬೇಕು. ಬ್ರಿಟನ್‌ನಿಂದ ವಾಪಸಾದ 2,127 ಜನರನ್ನು ಜೆನೆಟಿಕ್ ಸೀಕ್ವೆನ್ಸ್ ಟೆಸ್ಟ್‌ಗೆ ಒಳಪಡಿಸಬೇಕು. ನೆಗೆಟಿಕ್ ಪರೀಕ್ಷೆಯಲ್ಲಿ ಹೊಸ ವೈರಸ್ ಪತ್ತೆಯಾದರೆ, ಅವರ ಏರಿಯಾ ಸೀಲ್‌ಡೌನ್ ಮಾಡುವುದು ಅನಿವಾರ್ಯವಾಗಲಿದೆ.

English summary
The first two cases of a new coronavirus variant that recently emerged in the United Kingdom have been confirmed in Canada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X