ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಕ್ಯಾಲಿಪೋರ್ನಿಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

|
Google Oneindia Kannada News

ಕ್ಯಾಲಿಪೋರ್ನಿಯಾ, ಆಗಸ್ಟ್ 2: ಜಾಗತಿಕ ಮಟ್ಟದಲ್ಲಿ ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳು ಆತಂಕವನ್ನು ಹುಟ್ಟು ಹಾಕುತ್ತಿದೆ. ಈ ಹಿನ್ನೆಲೆ ಅಪಾಯವನ್ನು ನಿಯಂತ್ರಿಸುವ ದೃಷ್ಟಿಯಿಂದ ಕ್ಯಾಲಿಪೋರ್ನಿಯಾದ ಗವರ್ನರ್ ಗೇವಿನ್ ನ್ಯೂಸಮ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ ವರದಿಯಾದ ಸುಮಾರು 800 ಸೋಂಕಿತ ಪ್ರಕರಣಗಳೂ ಸೇರಿದಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 5,800ಕ್ಕೂ ಹೆಚ್ಚು ಮಂಕಿಪಾಕ್ಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಭಯವೇಕೆ ಭಾರತೀಯರೇ; ಮಂಕಿಪಾಕ್ಸ್ ಬಗ್ಗೆ ಓದಿ, ತಿಳಿದು ಜಾಗೃತರಾಗಿರಿಭಯವೇಕೆ ಭಾರತೀಯರೇ; ಮಂಕಿಪಾಕ್ಸ್ ಬಗ್ಗೆ ಓದಿ, ತಿಳಿದು ಜಾಗೃತರಾಗಿರಿ

ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಭೀತಿ ಹಿನ್ನೆಲೆ ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಅದಾಗ್ಯೂ, ಯುಎಸ್ ಅಧ್ಯಕ್ಷ ಜೋ ಬೈಡನ್ ದೇಶಾದ್ಯಂತ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಘೋಷಿಸಿಲ್ಲ.

ತುರ್ತು ಪರಿಸ್ಥಿತಿ ಘೋಷಿಸಿದ್ದು ಏಕೆ ಕ್ಯಾಲಿಪೋರ್ನಿಯಾ ಗವರ್ನರ್?

ತುರ್ತು ಪರಿಸ್ಥಿತಿ ಘೋಷಿಸಿದ್ದು ಏಕೆ ಕ್ಯಾಲಿಪೋರ್ನಿಯಾ ಗವರ್ನರ್?

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಂಕಿಪಾಕ್ಸ್ ಭೀತಿ ಹಿನ್ನೆಲೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ರಾಜ್ಯಗಳಲ್ಲಿ ಕ್ಯಾಲಿಪೋರ್ನಿಯಾ ಮೂರನೇ ರಾಜ್ಯವಾಗಿದೆ. ಏಕೆಂದರೆ ಈಗಾಗಲೇ ನ್ಯೂಯಾರ್ಕ್ ಮತ್ತು ಇಲಿನಾಯ್ಸ್ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದೀಗ ಕ್ಯಾಲಿಪೋರ್ನಿಯಾ ಕೂಡ ಆ ನಿಟ್ಟಿನಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ರಾಜ್ಯವ್ಯಾಪಿ ತುರ್ತು ಸ್ಥಿತಿ ಘೋಷಿಸಿದ ಯುನೈಟೆಡ್ ಸ್ಟೇಟ್ಸ್‌ನ ಅತಿದೊಡ್ಡ ರಾಜ್ಯವಾಗಿದೆ.

ಕ್ಯಾಲಿಪೋರ್ನಿಯಾದಲ್ಲಿ ಮಂಕಿಪಾಕ್ಸ್ ಲಸಿಕೆ ವಿತರಣೆಗೆ ಅನುಮತಿ

ಕ್ಯಾಲಿಪೋರ್ನಿಯಾದಲ್ಲಿ ಮಂಕಿಪಾಕ್ಸ್ ಲಸಿಕೆ ವಿತರಣೆಗೆ ಅನುಮತಿ

ಮಂಕಿಪಾಕ್ಸ್ ಸೋಂಕಿನ ಅಪಾಯದಲ್ಲಿ ಕಾರ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಕ್ಯಾಲಿಫೋರ್ನಿಯಾದಲ್ಲಿ ಎಫ್‌ಡಿಎ-ಅನುಮೋದಿತ ಮಂಕಿಪಾಕ್ಸ್ ಲಸಿಕೆಗಳನ್ನು ನೀಡಲು ಅನುಮತಿ ನೀಡಲಾಗಿದೆ. ತುರ್ತು ಪರಿಸ್ಥಿತಿ ಘೋಷಣೆಯು "ಅರ್ಹ ವ್ಯಾಕ್ಸಿನೇಟರ್‌ಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಪ್ರಸ್ತುತ ಪ್ರಯತ್ನಗಳಿಗೆ ಲಸಿಕೆಯು ಗಣನೀಯವಾಗಿ ಸಹಾಯ ಮಾಡುತ್ತದೆ. ಫೆಡರಲ್ ಸರ್ಕಾರದಿಂದ ಹೆಚ್ಚುವರಿ ಡೋಸ್‌ಗಳನ್ನು ಸ್ವೀಕರಿಸಿದ ನಂತರ ಲಸಿಕೆ ವಿತರಣೆಯನ್ನು ಹೆಚ್ಚಿಸಲಾಗುತ್ತದೆ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಂಕಿಪಾಕ್ಸ್ ಬಗ್ಗೆ ಗವರ್ನರ್ ನ್ಯೂಸಮ್ ಹೇಳಿದ್ದೇನು?

ಮಂಕಿಪಾಕ್ಸ್ ಬಗ್ಗೆ ಗವರ್ನರ್ ನ್ಯೂಸಮ್ ಹೇಳಿದ್ದೇನು?

"ಕ್ಯಾಲಿಫೋರ್ನಿಯಾದಲ್ಲಿ ಮಂಕಿಪಾಕ್ಸ್ ಹರಡುವುದನ್ನು ತಡೆಯಲು ಸರ್ಕಾರವು ಎಲ್ಲಾ ಹಂತಗಳಲ್ಲಿ ತುರ್ತಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ದೃಢವಾದ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಸಮುದಾಯ ಪಾಲುದಾರಿಕೆಗಳನ್ನು ಸಾಂಕ್ರಾಮಿಕ ಸಮಯದಲ್ಲಿ ಬಲಪಡಿಸಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಹೆಚ್ಚು ಅಪಾಯದಲ್ಲಿರುವವರು ಲಸಿಕೆಗಳು, ಚಿಕಿತ್ಸೆ ಮತ್ತು ಪ್ರಭಾವಕ್ಕಾಗಿ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಾಗುತ್ತಿದೆ," ಎಂದು ಕ್ಯಾಲಿಪೋರ್ನಿಯಾ ಗವರ್ನರ್ ನ್ಯೂಸಮ್ ತಿಳಿಸಿದ್ದಾರೆ.

ಮಂಕಿಪಾಕ್ಸ್ ಕುರಿತು ಸಿಡಿಸಿ ನೀಡಿದ ಮಾಹಿತಿ

ಮಂಕಿಪಾಕ್ಸ್ ಕುರಿತು ಸಿಡಿಸಿ ನೀಡಿದ ಮಾಹಿತಿ

ಮಂಕಿಪಾಕ್ಸ್ ಸಿಡುಬಿಗೆ ಸಂಬಂಧಿಸಿದ ಒಂದು ಪಾಕ್ಸ್‌ವೈರಸ್ ಆಗಿದ್ದು, ಸಾಮಾನ್ಯವಾಗಿ ಮೊಡವೆ ಅಥವಾ ಗುಳ್ಳೆಗಳಂತಹ ಗಾಯಗಳನ್ನು ಉಂಟು ಮಾಡುತ್ತದೆ, ಜೊತೆಗೆ ಜ್ವರ, ತಲೆನೋವು, ಸ್ನಾಯು ನೋವು, ಶೀತ ಮತ್ತು ಉಸಿರಾಟದ ಲಕ್ಷಣಗಳಂತಹ ಜ್ವರ ತರಹದ ಲಕ್ಷಣಗಳು ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತಿಳಿಸಿದೆ. CDC ಪ್ರಕಾರ, ವೈರಸ್ ನಿಕಟ ಮತ್ತು ಆಗಾಗ್ಗೆ ಚರ್ಮದಿಂದ ಚರ್ಮಕ್ಕೆ ಸಂಪರ್ಕ ಹೊಂದುವುದರಿಂದ ಯಾರಿಗಾದರೂ ಸೋಂಕು ಹರಡಬಹುದು. ಸೋಂಕಿತ ಪ್ರಾಣಿಗಳಿಂದ ಜನರು ಮಂಕಿಪಾಕ್ಸ್ ಸೋಂಕಿಗೆ ತುತ್ತಾಗುವ ಅಪಾಯವಿರುತ್ತದೆ ಎಂದು ತಿಳಿಸಿದೆ.

ಮಂಕಿಪಾಕ್ಸ್ ನಿವಾರಣೆಗೆ ಲಸಿಕೆಯ ಪ್ರಯೋಗ

ಮಂಕಿಪಾಕ್ಸ್ ನಿವಾರಣೆಗೆ ಲಸಿಕೆಯ ಪ್ರಯೋಗ

ಕ್ಯಾಲಿಫೋರ್ನಿಯಾದಲ್ಲಿ ಇದುವರೆಗೆ 61,000ಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ 25,000ಕ್ಕಿಂತ ಹೆಚ್ಚು ಡೋಸ್ ಲಸಿಕೆಯನ್ನು ವಿತರಿಸಲಾಗಿದೆ ಎಂದು ಗವರ್ನರ್ ನೀಡಿರುವ ಅಂಕಿ-ಅಂಶಗಳಿಂದ ಗೊತ್ತಾಗಿದೆ. ಲಾಸ್ ಏಂಜಲೀಸ್ ಕೌಂಟಿ ತನ್ನದೇ ಆದ ಲಸಿಕೆ ವಿತರಣೆಯನ್ನು ನಡೆಸಿದ್ದು, ಮುಂಬರುವ ವಾರಗಳಲ್ಲಿ ಕ್ಯಾಲಿಫೋರ್ನಿಯಾ ಹೆಚ್ಚುವರಿ ಲಸಿಕೆ ನೀಡಲಾಗುವುದು ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ, ಮಂಕಿಪಾಕ್ಸ್‌ನಲ್ಲಿ ಸ್ಥಳೀಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಮೊದಲ ಪ್ರಮುಖ US ನಗರ ಸ್ಯಾನ್ ಫ್ರಾನ್ಸಿಸ್ಕೋ ಆಗಿತ್ತು.

"ಹೆಚ್ಚಿನ ಲಸಿಕೆಗಳನ್ನು ಪಡೆಯುವುದಕ್ಕಾಗಿ ಮತ್ತು ಅಪಾಯವನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಕಳಂಕದ ವಿರುದ್ಧ ಹೋರಾಡುವ LGBTQ ಸಮುದಾಯದೊಂದಿಗೆ ನಿಲ್ಲಲು ನಾವು ಫೆಡರಲ್ ಸರ್ಕಾರದೊಂದಿಗೆ ಕೆಲಸ ಮಾಡುತ್ತೇವೆ," ಎಂದು ಕ್ಯಾಲಿಫೋರ್ನಿಯಾ ಗವರ್ನರ್ ನ್ಯೂಸಮ್ ಹೇಳಿದ್ದಾರೆ. ಸಿಡಿಸಿಯು ತೀವ್ರವಾದ ಕಾಯಿಲೆಯ ಅಪಾಯದಲ್ಲಿರುವ ಮಂಕಿಪಾಕ್ಸ್ ರೋಗಿಗಳಿಗೆ ಆಂಟಿವೈರಲ್ ಪ್ರಿಸ್ಕ್ರಿಪ್ಷನ್ ಡ್ರಗ್ ಟೆಕೊವಿರಿಮಾಟ್ ಲಭ್ಯವಾಗುವಂತೆ ಮಾಡಿದೆ. ಆದರೆ ಕ್ಯಾಲಿಫೋರ್ನಿಯಾದಲ್ಲಿ ಪ್ರವೇಶವನ್ನು ಸೀಮಿತಗೊಳಿಸಲಾಗಿದೆ. ಈಗ, ರಾಜ್ಯದಾದ್ಯಂತ 30 ಕ್ಕೂ ಹೆಚ್ಚು ಸೌಲಭ್ಯಗಳು ಮತ್ತು ಪೂರೈಕೆದಾರರಲ್ಲಿ ಚಿಕಿತ್ಸೆಯನ್ನು ನಿರ್ವಹಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಕಿಪಾಕ್ಸ್ ಸೋಂಕಿನ ಪರೀಕ್ಷೆ ಹಾಗೂ ಲಸಿಕೆಯ ವಿತರಣೆ

ಮಂಕಿಪಾಕ್ಸ್ ಸೋಂಕಿನ ಪರೀಕ್ಷೆ ಹಾಗೂ ಲಸಿಕೆಯ ವಿತರಣೆ

ನ್ಯೂಸಮ್ ಪ್ರಕಾರ, ಕ್ಯಾಲಿಫೋರ್ನಿಯಾದಲ್ಲಿ ಮಂಕಿಪಾಕ್ಸ್ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗಿದ್ದು, ಒಂದು ವಾರಕ್ಕೆ 1,000ಕ್ಕೂ ಹೆಚ್ಚು ಪರೀಕ್ಷೆಗಳನ್ನು ಪ್ರಕ್ರಿಯೆಗೊಳಿಸಬಹುದು ಎಂದಿದ್ದಾರೆ. ರಾಜ್ಯದ ಮೊದಲ ಮಂಕಿಪಾಕ್ಸ್ ಪ್ರಕರಣವು ಮೇ 21ರಂದು ವರದಿಯಾಗಿದೆ. ಈ ಸೋಂಕಿತನು ವಿದೇಶಕ್ಕೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದನು ಎಂದು ಗೊತ್ತಾಗಿದೆ. ಈಗ ವಿವಿಧ ಸ್ಥಳೀಯ ಆರೋಗ್ಯ ವ್ಯಾಪ್ತಿಗಳಲ್ಲಿ ಸಂಭವನೀಯ ಅಥವಾ ದೃಢಪಡಿಸಿದ 27 ಮಂಕಿಪಾಕ್ಸ್ ಪ್ರಕರಣಗಳಿವೆ. ಕಳೆದ ಜುಲೈ ಮಧ್ಯದಲ್ಲಿ, ಕ್ಯಾಲಿಫೋರ್ನಿಯಾದ ಆರೋಗ್ಯ ಇಲಾಖೆಯು 600,000 ರಿಂದ 800,000 ಹೆಚ್ಚುವರಿ ಮಂಕಿಪಾಕ್ಸ್ ಲಸಿಕೆ ಡೋಸ್‌ಗಳನ್ನು ದೃಢೀಕರಿಸಿದ ಮತ್ತು ಸಂಭವನೀಯ ಮಾನ್ಯತೆಗಳಿಗೆ ಮತ್ತು ಹೆಚ್ಚಿನ ಅಪಾಯದ ವ್ಯಕ್ತಿಗಳಿಗೆ ಅರ್ಹತೆಯನ್ನು ವಿಸ್ತರಿಸಲು ಸಹಾಯ ಮಾಡಿತು.

ಜಾಗತಿಕ ತುರ್ತು ಸ್ಥಿತಿ ಘೋಷಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ

ಜಾಗತಿಕ ತುರ್ತು ಸ್ಥಿತಿ ಘೋಷಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಜಗತ್ತಿನ 78 ರಾಷ್ಟ್ರಗಳಲ್ಲಿ ಸೇರಿ 18,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. "ತಮಗೆ ಸೋಂಕು ತಗುಲಿರುವ ಬಗ್ಗೆ ದೇಶಗಳು, ಸಮುದಾಯಗಳು ಮತ್ತು ಜನರು ಸ್ವಯಂಪ್ರೇರಿತರಾಗಿ ಮಾಹಿತಿ ನೀಡಿದರೆ ಹಾಗೂ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ, ಮಂಕಿಪಾಕ್ಸ್ ಸೋಂಕು ಹರಡುವಿಕೆಯನ್ನು ತಕ್ಷಣಕ್ಕೆ ತಡೆಯುವುದಕ್ಕೆ ಸಾಧ್ಯವಿದೆ," ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ ಟೆಡ್ರೊಸ್ ಗೆಬ್ರೆಯೆಸಸ್ ಹೇಳಿದ್ದಾರೆ.

ಮಂಕಿಪಾಕ್ಸ್ ಒಂದು ಝೂನೋಟಿಕ್ ಕಾಯಿಲೆಯಾಗಿದ್ದು, ಸಿಡುಬುಗೆ ಕಾರಣವಾಗುವ ವೈರಸ್‌ಗಳ ಒಂದೇ ಕುಟುಂಬಕ್ಕೆ ಸೇರಿದೆ. ಈ ರೋಗವು ಪಶ್ಚಿಮ ಮತ್ತು ಮಧ್ಯ ಆಫ್ರಿಕಾದಂತಹ ಪ್ರದೇಶಗಳಲ್ಲಿ ಸ್ಥಳೀಯವಾಗಿದೆ. ಆದರೆ ಇತ್ತೀಚೆಗೆ, ಆಸ್ಟ್ರೇಲಿಯಾ, ಯುಕೆ ಮತ್ತು ಯುಎಸ್ ಸೇರಿದಂತೆ ಇತರೆ ರಾಷ್ಟ್ರಗಳಲ್ಲೂ ಹೆಚ್ಚಾಗುತ್ತಿದೆ.

Recommended Video

ಪಠಾನ್ ಮನೆ ಮುಂದೆ ಹಾವು ಪ್ರತ್ಯಕ್ಷ: ಹಾವಿನ ಜೊತೆ ಪಠಾಣ್ ಮಕ್ಕಳ ಆಟ | Oneindia Kannada

English summary
California governor Gavin Newsom declares state of emergency over monkeypox rising. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X