ಮದುವೆ ಮಂಟಪಕ್ಕೆ ಜೀವಂತವಿದ್ದೂ ಶವಪೆಟ್ಟಿಗೆಯಲ್ಲಿ ಬಂದ ವಧು
ಮದುವೆಯನ್ನು ಈ ರೀತಿಯಾಗಬೇಕು, ಆ ರೀತಿಯಾಗಬೇಕು ಒಟ್ಟಿನಲ್ಲಿ ಜನರು ನೆನಪಿಟ್ಟುಕೊಳ್ಳುವ ಮದುವೆಯಾಗಬೇಕೆಂದು ಎಲ್ಲಾ ಜೋಡಿಗಳಿಗೂ ಆಸೆ ಇರುವುದು ಸಹಜ.
ಹಾಗೆಯೇ ಹತ್ತಾರು ಮಂದಿಯಿಂದ ಸಲಹೆ ಪಡೆಯುತ್ತಾರೆ, ಆದರೆ ಇಲ್ಲೊಂದು ವಧು ಮದುವೆ ಮಂಟಪಕ್ಕೆ ಶವದ ಪೆಟ್ಟಿಗೆಯಲ್ಲಿ ಬಂದು ಅಚ್ಚರಿ ಮೂಡಿಸಿದ್ದಾರೆ.
ಝೆನ್ ಕಥೆ: ಶವಪೆಟ್ಟಿಗೆ ನಿನ್ನ ಮಕ್ಕಳಿಗೂ ಬೇಕಾಗಬಹುದು!
ಇದು ಮದುವೆಯೋ ಅಥವಾ ಅಂತ್ಯಸಂಸ್ಕಾರದ ಸಂದರ್ಭವೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೆ ಟ್ರೋಲ್ ಆಗುತ್ತಿದೆ.
ಮದುವೆ ಹಾಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಶವಪೆಟ್ಟಿಗೆ ಮೇಲೆ ಹೊದಿಸಿದ್ದ ಕಪ್ಪು ಬಟ್ಟೆ ತೆಗೆಯುತ್ತಾನೆ. ಬಳಿಕ ಶವಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ಗೋಲ್ಡನ್ ಗೌನ್ ಧರಿಸಿ ಮಲಗಿದ್ದ ವಧು ಡ್ಯಾನ್ಸ್ ಮಾಡುತ್ತಾ ಮೇಲೇಳುತ್ತಾಳೆ.
ಈ ವೇಳೆ ಹಾಲ್ ನಲ್ಲಿ ಸೇರಿದ್ದ ಜನರು ವಧುವನ್ನ ಹುರಿದುಂಬಿಸುತ್ತಾರೆ. ನಗುತ್ತಲೇ ಶವಪೆಟ್ಟಿಗೆಯಿಂದ ವಧು ಹೊರ ಬಂದ ದೃಶ್ಯವನ್ನು ಕೆಲವರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಈ ವಿಚಿತ್ರ ಪ್ರಸಂಗ ಎಲ್ಲಿ ಹಾಗೂ ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಕೆಲ ನೆಟ್ಟಿಗರು ದಿಗ್ಭ್ರಮೆಗೊಂಡರೆ, ಇತರರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ವಿಡಿಯೋ ನೋಡಿದ ಕೆಲವರು ಇದು ಅವಳ ಮದುವೆಯೋ? ಅಂತ್ಯಸಂಸ್ಕಾರವೋ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮತ್ತೊಬ್ಬರು ವಿಡಿಯೋ ರಿಟ್ವೀಟ್ ಮಾಡಿ, ಒಂದು ವೇಳೆ ನಾನು ಮದುವೆ ಹಾಲಿನಲ್ಲಿ ಇದ್ದಿದ್ದರೆ ಅಥವಾ ನಾನೇ ವರನಾಗಿದ್ದರೆ ಅಲ್ಲಿಂದ ಓಡಿ ಹೋಗುತ್ತಿದ್ದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ಹೊಸ ಐಡಿಯಾಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.