ಕ್ಯಾನ್ಸರ್ ಪೀಡಿತ ಸೋನಾಲಿ ಬೇಂದ್ರೆಯವರ ಭಾವುಕ ಸಾಲು ಮತ್ತು ಹೊಸ ವಿಡಿಯೋ
ಮುಂಬೈ, ಸೆಪ್ಟೆಂಬರ್ 05: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ತಮ್ಮ ಹೊಸ ಫೋಟೊದ ಜೊತೆಯಲ್ಲಿ ವಿಡಿಯೋವೊಂದರನ್ನು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರೊಟ್ಟಿಗೆ ಅವರು ಬರೆದ ಭಾವುಕ ಸಾಲುಗಳು ಅವರ ಅಭಿಮಾನಿಗಳಲ್ಲಿ ಕಣ್ಣೀರುಕ್ಕಿಸುವುದು ಖಂಡಿತ.
1990 ರ ದಶಕದಲ್ಲಿ ಬಾಲಿವುಡ್ ಸಿನಿಮಾ ಲೋಕದಲ್ಲಿ ಖ್ಯಾತ ನಟಿಯಾಗಿ ಮೆರೆದ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್ ನಿಂದ ಬಳಲುತ್ತಿರುವುದು ಇತ್ತೀಚೆಗೆ ಪತ್ತೆಯಾಗಿತ್ತು.
ಕ್ಯಾನ್ಸರ್ ಪತ್ತೆಯಾಗುತ್ತಿದ್ದಂತೆಯೇ ನ್ಯೂಯಾರ್ಕ್ ಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಸೋನಾಲಿ ಬೇಂದ್ರೆ ಅವರು ಸದ್ಯಕ್ಕೆ ವಿಗ್ ಧರಿಸಿದ ತಮ್ಮ ಹೊಸ ಫೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಹಾಕಿದ್ದಾರೆ. ಜೊತೆಗೆ ತಮ್ಮ ಹೊಸ ಲುಕ್ಕಿಗೆ ಶಾಯ ಮಾಡಿದ್ದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
|
ಸೋನಾಲಿ ಬರೆದ ಭಾವುಕ ಸಾಲುಗಳು
'ವಯ್ಯಾರ ನನಗಿಷ್ಟ. ಸುಂದರವಾಗಿ ಕಾಣುವುದು ಯಾರಿಗೆ ಇಷ್ಟವಿಲ್ಲ? ನಾವು ಹೇಗೆ ಕಾಣುತ್ತೇವೆ ಎಂಬುದು ನಮ್ಮ ಮನಸ್ಸನ್ನು ತೋರಿಸಿಕೊಡುತ್ತದೆ. ನಮ್ಮ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಇದರಿಂದ ಬೇರೆ ಯಾರಿಗೂ ನೋವಾಗುವುದೂ ಇಲ್ಲ. ನಮ್ಮನ್ನು ಯಾವುದು ಖುಷಿಯಾಗಿಡುತ್ತದೋ ಅದನ್ನು ಮಾಡುವುದು ಬಹಳ ಮುಖ್ಯ. ನಾನು ಹಿಗ್ ಧರಿಸಿ, ಲಿಪ್ ಸ್ಟಿಕ್ ಹಚ್ಚಿಕೊಂಡು, ಹೈ ಹೀಲ್ಸ್ ಧರಿಸಿದರೆ ಯಾರು ಏನೂ ಹೇಳುವುದಿಲ್ಲ. ಇದರಲ್ಲಿ ತಪ್ಪು ಯಾವುದು, ಸರಿಯಾವುದು ಯಾರಿಗೂ ಗೊತ್ತಿಲ್ಲ.' ಎಂದು ಸೋನಾಲಿ ಪತ್ರದಲ್ಲಿ ಬರೆದಿದ್ದಾರೆ.

'ಸುಂದರವಾಗಿ ಕಾಣುವ ದುರಾಸೆಗೆ ಬಿದ್ದೆನೇ?!'
'ಕಿಮೋಥೆರಪಿಯಿಂದ ಕೂದಲು ಉದುರಿ ವಿಗ್ ಗಾಘಿ ಹುಡುಕುವಾಗ ನನಗೆ ಅನುಮಾನವಾಯ್ತು. ನಾನು ಸುಂದರವಾಗಿ ಕಾಣಬೇಕೆಂಬ ದುರಾಸೆಗೆ ಬಿದ್ದೆನೇ ಎಂದು. ನಾನು ಎಂಟರ್ಟೇನ್ ಮೆಂಟ್ ಇಂಡಸ್ಟ್ರಿಯಲ್ಲಿದ್ದಿದ್ದುದರಿಂದ ಸುಂದರವಾಗಿ ಕಾಣುವುದು ನನಗೆ ತುಂಬಾ ಮುಖ್ಯವೆನ್ನಿಸಿತು. ನಂತರ ಅನ್ನಿಸಿತು, ನಾನು ನನಗಾಗಿ ಸುಂದರವಾಗಿ ಕಾಣಬೇಕು, ಇನ್ನ್ಯಾರಿಗಾಗೋ ಅಲ್ಲ ಎಂದು. ನಮಗೆ ಯಾವುದು ಸರಿ ಕಾಣುತ್ತದೆಯೋ ಅದನ್ನೇ ಮಾಡಬೇಕು ಎಂದು ನನಗನ್ನಿಸುತ್ತಿದೆ' ಹೀಗೇ ಸಾಗುತ್ತದೆ ಸೋನಾಲಿ ಅವರ ಸಾಲುಗಳು.

ಪ್ರಿಯಾಂಕಾ ಚೋಪ್ರಾ ಅವರಿಗೆ ಧನ್ಯವಾದಗಳು
ಅಷ್ಟೇ ಅಲ್ಲ, ಸೋನಾಲಿ ಬೇಂದ್ರೆ ಅವರ ಹೊಸ ಲುಕ್ಕಿಗೆ ಕಾರಣ ನಟಿ ಪ್ರಿಯಾಂಕಾ ಚೋಪ್ರಾ ಅಂತೆ. ಆದ್ದರಿಂದ ಅವರಿಗೆ ಈ ಸಾಲುಗಳ ಮೂಲಕ ಧನ್ಯವಾದ ಅರ್ಪಿಸಿದ್ದಾರೆ ಸೋನಾಲಿ ಬೇಂದ್ರೆ.
|
ಮಗನಿಗೆ ಕಣ್ಣೀರುಕ್ಕಿಸುವ ಪತ್ರ
ಇತ್ತೀಚೆಗಷ್ಟೇ ತಮ್ಮ ಮಗ ರಣ್ವೀರ್ ಅವರ ಹುಟ್ಟು ಹಬ್ಬದ ಸಮಯದಲ್ಲಿ ಸೋನಾಲಿ ಬೇಂದ್ರೆ ಅವರು ಮಗನಿಗೆ ಬರೆದ ಪತ್ರ ವೈರಲ್ ಆಗಿತ್ತು. ಕಣ್ನೀರುಕ್ಕಿಸುವಷ್ಟು ಭಾವುಕವಾಗಿದ್ದ ಈ ಪತ್ರದಲ್ಲಿ ಅವರು ತಮ್ಮ ಮಗನನ್ನು ತಾವು ಎಶಶ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬುದನ್ನು ಬರೆದಿದ್ದರು. ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಅವರು ತಮ್ಮ ಕುಟುಂಬದಿಂದ ದೂರವಿದ್ದಾರೆ.












Click it and Unblock the Notifications