ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೃತ ವ್ಯಕ್ತಿಯ ದೇಹದಲ್ಲಿ 6 ವಾರಗಳ ಕಾಲ ಇತ್ತು ಕೊರೊನಾ ಸೋಂಕು

|
Google Oneindia Kannada News

ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯಲ್ಲಿ 6 ವಾರಗಳ ಕಾಲ ಕೊರೊನಾ ಸೋಂಕು ಇದ್ದ ಮಾಹಿತಿ ಲಭ್ಯವಾಗಿದೆ.

ಕೊರೊನಾ ಸೋಂಕು ಮೃತವ್ಯಕ್ತಿಯ ದೇಶಹದಲ್ಲಿ ಎಷ್ಟು ದಿನಗಳ ಕಾಲ ಇರಲಿದೆ ಎನ್ನುವುದಕ್ಕೆ ಸರಿಯಾದ ಮಾಹಿತಿ ಇನ್ನೂ ಲಭ್ಯವಿಲ್ಲ, ಆದರೆ ಉಕ್ರೇನ್‌ನಲ್ಲಿ ಮೃತಪಟ್ಟ ವ್ಯಕ್ತಿಯ ದೇಹದಲ್ಲಿ 6 ವಾರಗಳ ಕಾಲ ಸೋಂಕು ಕಾಣಿಸಿಕೊಂಡಿದೆ.

ಸತತ 4 ವಾರ ಸೋಂಕು ಸ್ಥಿರವಾಗಿದ್ದರೆ ಕೊರೊನಾ ಎಂಡೆಮಿಕ್ ಎಂದು ಹೇಳಬಹುದುಸತತ 4 ವಾರ ಸೋಂಕು ಸ್ಥಿರವಾಗಿದ್ದರೆ ಕೊರೊನಾ ಎಂಡೆಮಿಕ್ ಎಂದು ಹೇಳಬಹುದು

ಉಕ್ರೇನ್​ನಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯ ಶವ ಪರೀಕ್ಷೆಯ ವೇಳೆ ಕೊರೊನಾ ಸೋಂಕು ದೃಢವಾಗಿದೆ. ಈ ವೇಳೆ ಮೃತ ದೇಹದಲ್ಲಿ ಎಷ್ಟು ದಿನಗಳವರೆಗೆ ಸೋಂಕು ಇರುತ್ತದೆ ಎಂದು ಅಧ್ಯಯನ ನಡೆಸಿದಾಗ, 6 ವಾರಗಳಲ್ಲಿ ನಡೆಸಿದ 28 ಪರೀಕ್ಷೆಯಲ್ಲೂ ಸೋಂಕು ಪತ್ತೆಯಾಗಿ ಅಚ್ಚರಿ ಮೂಡಿಸಿದೆ.

Body Of Drowned Ukrainian Man Tests Covid Positive 28 Times Over 6 Weeks

ವ್ಯಕ್ತಿಯ ಸಾವಿಗೂ ಮುನ್ನ ಕೊರೊನಾ ಸೋಂಕಿನ ಯಾವ ಲಕ್ಷಣವೂ ಇರಲಿಲ್ಲ. ಬಳಿಕ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಸೋಂಕು ಇರುವುದು ದೃಢವಾಗಿದೆ. ಬಳಿಕ 41 ದಿನಗಳಲ್ಲಿ ನಡೆಸಲಾದ 28 ಪರೀಕ್ಷೆಗಳಲ್ಲೂ ಸೋಂಕು ಪಾಸಿಟಿವ್​ ಬಂದಿದೆ ಎಂದು ಇಟಲಿಯ ಡಿಅನ್ನುಂಜಿಯೋ ವಿವಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿನ ಅಧ್ಯಯನದಂತೆ ವೈರಸ್​ ಮೃತದೇಹದಲ್ಲಿ 41 ದಿನಗಳವರೆಗೂ ಇರಬಲ್ಲದು ಎಂದು ಗೋಚರವಾಗಿದೆ. ಆದಾಗ್ಯೂ ಈ ಬಗ್ಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.

ಈ ಅಧ್ಯಯನ ವ್ಯಕ್ತಿ ಸತ್ತ ನಂತರವೂ ದೇಹದಲ್ಲಿ ಎಷ್ಟು ಅವಧಿಯವರೆಗೆ ವೈರಸ್​ ಇರುತ್ತದೆ ಎಂಬ ಬಗ್ಗೆ ಮಾಹಿತಿ ನೀಡುತ್ತದೆ. ಈ ಬಗ್ಗೆ ಯಾವುದೇ ನಿಖರ ಮಾಹಿತಿ ಈವರೆಗೂ ಇಲ್ಲವಾದ್ದರಿಂದ ಈ ಅಧ್ಯಯನ ಮಹತ್ವ ಪಡೆದುಕೊಂಡಿದೆ.

ಓಮಿಕ್ರಾನ್ ಸೋಂಕು ಮೇಲ್ಮೈ ಶ್ವಾಸಕೋಶ ಮಾತ್ರವಲ್ಲದೆ ಉದರದ ಮೇಲೂ ಪರಿಣಾಮ ಉಂಟು ಮಾಡಲಿದೆ. ಇತ್ತೀಚಿನ ದಿನಗಳಲ್ಲಿ ಈ ಹೊಸ ತಳಿಯ ಸೋಂಕಿಗೆ ಒಳಗಾದವರಲ್ಲಿ ಉದರ ಸಂಬಂಧಿ ರೋಗಲಕ್ಷಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತಿದೆ. ಲಸಿಕೆ ಪಡೆದವರು ಕೂಡಾ ಈ ಹೊಸ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ.

ಓಮಿಕ್ರಾನ್ ಸೋಂಕಿನ ಕೆಲವು ಹೊಸ ರೋಗಲಕ್ಷಣಗಳು ವಾಕರಿಕೆ, ಉದರ ಬೇನೆ, ವಾಂತಿ, ಹಸಿವಿನ ನಷ್ಟ ಹಾಗೂ ನಿರ್ಜಲೀಕರಣವನ್ನು ಒಳಗೊಂಡಿವೆ.

"ಜನರು ಆರಂಭದಲ್ಲಿ ಯಾವುದೇ ಉಸಿರಾಟ ತೊಂದರೆಯ ದೂರುಗಳಿಲ್ಲದೆಯೂ ಉದರ ಸಂಬಂಧಿ ರೋಗಲಕ್ಷಣಗಳನ್ನು ಹೊಂದಿರುವ ಸಾಧ್ಯತೆ ಇದೆ. ಈ ದೂರುಗಳ ಪೈಕಿ ಬೆನ್ನು ನೋವು, ಉದರ ಬೇನೆ, ವಾಕರಿಕೆ, ವಾಂತಿ, ಹಸಿವಿನ ನಷ್ಟ ಹಾಗೂ ನಿರ್ಜಲೀಕರಣ ಸೇರಿವೆ. ಈ ರೋಗಲಕ್ಷಣಗಳು ಓಮಿಕ್ರಾನ್‌ನಿಂದ ಕರುಳಿನ ಲೋಳೆಸರ ಸೋಂಕಿತಗೊಂಡು ಉರಿಯೂತ ಬರುವ ಕಾರಣಕ್ಕೆ ಕಾಣಿಸಿಕೊಳ್ಳುತ್ತವೆ" ಎಂದು ಗುರುಗ್ರಾಮದಲ್ಲಿರುವ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯಲ್ಲಿ ಶ್ವಾಸಕೋಶ ವಿಭಾಗದ ನಿರ್ದೇಶಕರಾಗಿರುವ ಡಾ. ಮನೋಜ್ ಗೋಯಲ್ ಅಭಿಪ್ರಾಯ ಪಡುತ್ತಾರೆ.

ಯಾರಿಗಾದರೂ ಉಸಿರಾಟ ತೊಂದರೆಯ ದೂರುಗಳಿಲ್ಲದೆಯೂ ಉದರ ಸಂಬಂಧಿ ರೋಗಲಕ್ಷಣಗಳು ಕಂಡು ಬಂದರೆ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾಕೆಂದರೆ, ಈ ರೋಗಲಕ್ಷಣಗಳು ಓಮಿಕ್ರಾನ್ ಸೋಂಕಿನಿಂದ ಉಂಟಾಗಿರುವ ಸಾಧ್ಯತೆ ಇರುತ್ತದೆ.

ಸಾಮಾನ್ಯ ಫ್ಲೂ ರೋಗಲಕ್ಷಣಗಳಾದ ಉದರ ಬೇನೆ, ವಾಕರಿಕೆ ಮತ್ತು ಹಸಿವಿನ ನಷ್ಟ ಕಾಣಿಸಿಕೊಂಡಾಗ ಅವನ್ನು ಉಪೇಕ್ಷಿಸುವ ಬದಲು ಪ್ರತ್ಯೇಕ ವಾಸಕ್ಕೆ ತೆರಳಿ. ಸುರಕ್ಷಿತ ಎಂದು ಹೇಳಲಾಗುವ ಆಯುರ್ವೇದ ಔಷಧಗಳು ಸೇರಿದಂತೆ ಯಾವುದೇ ಔಷಧಗಳನ್ನು ನಿಮ್ಮ ವೈದ್ಯರ ಸಕಹೆ ಪಡೆಯದೆ ಸ್ವಯಂ ಚಿಕಿತ್ಸೆಗೆ ಬಳಸಬೇಡಿ. ಈ ಸಂದರ್ಭದಲ್ಲಿ ಯಥೇಚ್ಛವಾಗಿ ನೀರು ಸೇವಿಸಿ, ನಟ್ಸ್‌ಗಳನ್ನು ಒಳಗೊಂಡಂತೆ ಸಣ್ಣ ಹಾಗೂ ಪರಿಪೂರ್ಣ ಆಹಾರವನ್ನು ನಿಯಮಿತವಾಗಿ ಸೇವಿಸುತ್ತಿರಿ. ಮಸಾಲೆಯುಕ್ತ ಪದಾರ್ಥಗಳು ಹಾಗೂ ಮದ್ಯ ಸೇವನೆಯನ್ನು ನಿರ್ಬಂಧಿಸಿ. ರೋಗ ಲಕ್ಷಣಗಳು ಸೌಮ್ಯವಾಗಿದ್ದರೆ ಕಳವಳಕ್ಕೀಡಾಗುವ ಅಗತ್ಯವಿಲ್ಲ.

English summary
The body of a Ukrainian man who died from drowning in Italy tested positive for Covid-19 as many as 28 times in the six weeks after his death, according to scientists who examined his corpse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X