ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣ: ಮಾಹಿತಿ ಹಂಚಿಕೆಗೆ ಸ್ವಿಸ್ ಕೊನೆಗೂ ಒಪ್ಪಿಗೆ

By Mahesh
|
Google Oneindia Kannada News

ನವದೆಹಲಿ, ಅ.16: ವಿದೇಶದ ಬ್ಯಾಂಕ್ ಗಳಲ್ಲಿ ಇಟ್ಟಿರುವ ಕಪ್ಪು ಹಣ ವಾಪಸ್ ತರುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ. ತನ್ನ ದೇಶದ ಬ್ಯಾಂಕ್ ಗಳಲ್ಲಿರುವ ಭಾರತೀಯ ಖಾತೆಗಳ ವಿವರವನ್ನು ನೀಡಲು ಸ್ವಿಸ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಅದರೆ, ನಿಗದಿತ ಅವಧಿಯೊಳಗೆ ಖಾತೆದಾರರ ಹೆಸರು ಬಹಿರಂಗಪಡಿಸುವುದು ಹಾಗೂ ಸ್ವದೇಶಕ್ಕೆ ಹಣ ವಾಪಸ್ ನೀಡುವ ಬಗ್ಗೆ ಕಾನೂನು ಪ್ರಕ್ರಿಯೆ ತೆಗೆದುಕೊಳ್ಳುವುದಾಗಿ ಬ್ಯಾಂಕ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೇಂದ್ರದ ಕಂದಾಯ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತದಾಸ್ ಹಾಗೂ ಸ್ವಿಸ್ವ್ ಸಹೋದ್ಯೋಗಿ ನಡೆಸಿರುವ ಮಾತುಕತೆ ಫಲಪ್ರದವಾಗಿದ್ದು, ಸದ್ಯದಲ್ಲೇ ಬ್ಯಾಂಕ್ ಖಾತೆದಾರರ ಮಾಹಿತಿ ನೀಡುವ ಭರವಸೆ ನೀಡಿದ್ದಾರೆ.

ಸ್ವಿಸ್ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಅಧಿಕಾರಿ ಜಾಕ್ವಿಸ್ ಡೇ ವಟ್ಟೆವಿಲ್ಲಿಯವರು ಇದೊಂದು ಸೂಕ್ಷ್ಮವಾದ ವಿಷಯವಾಗಿದ್ದು, ನವದೆಹಲಿ ಮತ್ತು ಬರ್ಲಿನ್ ನಡುವೆ ಇನ್ನೂ ಹಲವಾರು ಸುತ್ತಿನ ಮಾತುಕತೆ ನಡೆಯಬೇಕಾಗಿದೆ ಎಂದಿದ್ದಾರೆ.

Black money: Switzerland to provide information to India in a time-bound manner

ಭಾರತದ ಸರ್ಕಾರ ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣದ ಮಾಹಿತಿ ಹಾಗೂ ಖಾತೆದಾರರ ಹೆಸರನ್ನು ಬಹಿರಂಗಪಡಿಸುವಂತೆ ಕೋರಿದೆ. ನಮ್ಮ ಬ್ಯಾಂಕಿನ ನಿಯಮದ ಪ್ರಕಾರ, ಯಾವುದೇ ಒಬ್ಬ ಖಾತೆದಾರನ ಹೆಸರನ್ನು ಬಹಿರಂಗಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಸರ್ಕಾರದ ಕೋರಿಕೆ ಮೇರೆಗೆ ಕಾನೂನಿಗೆ ತಿದ್ದುಪಡಿ ಮಾಡಲಾಗುವುದು. ಅಲ್ಲದೆ, ಉಭಯ ರಾಷ್ಟ್ರಗಳ ಹಿರಿಯ ಅಧಿಕಾರಿಗಳ ನಡುವೆ ಶೀಘ್ರದಲ್ಲೇ ಮಾತುಕತೆ ನಡೆಸಿ ಭಾರತಕ್ಕೆ ಎಲ್ಲ ರೀತಿಯ ನೆರವು ಒದಗಿಸುವ ಆಶ್ವಾಸನೆ ಕೊಟ್ಟಿದ್ದಾರೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ತಂಡಕ್ಕೆ 100 ಕಪ್ಪುಹಣ ಠೇವಣಿದಾರರ ಪಟ್ಟಿ ಸಿಕ್ಕಿದೆಯಂತೆ. ಈ ಎಲ್ಲರ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಇದರಿಂದ, ಬೊಕ್ಕಸಕ್ಕೆ ರು.50-80 ಕೋಟಿ ತೆರಿಗೆ ಸಂಗ್ರಹ ನಿರೀಕ್ಷೆಯಿದೆ ಎಂಬ ಸುದ್ದಿ ಹಬ್ಬಿತ್ತು. ಬೆಂಗಳೂರು ಸೇರಿದಂತೆ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಚಂದೀಗಢ ಮುಂತಾದ ಕಡೆ ನೆಲೆಸಿರುವ ವ್ಯಕ್ತಿಗಳಿಗೆ ಸೇರಿದ ಖಾತೆ ವಿವರ ಈಗ ಸಿಬಿಡಿಟಿ ಕೈ ಸೇರಿದೆ. ಈ ವಿವರಗಳನ್ನು ವಿಶೇಷ ತನಿಖಾ ದಳ(SIT) ಜೊತೆ ಸಿಬಿಡಿಟಿ ಹಂಚಿಕೊಂಡಿದೆ ಎನ್ನಲಾಗಿತ್ತು. ಅದರೆ, ಇದರ ಬಗ್ಗೆ ಸರ್ಕಾರ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಸ್ವಿಸ್ ಸರ್ಕಾರ ಮಾಹಿತಿ ನೀಡಲು ಹಿಂದೇಟು ಹಾಕಿತ್ತು. (ಪಿಟಿಐ)

English summary
In a major breakthrough in India's fight against black money allegedly stashed abroad, Switzerland said it will examine Indian requests for banking information on a priority basis and provide requested details in a time-bound manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X