• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಜಿಲೆಂಡ್ ನಲ್ಲಿ ಕರಾಳ ಶುಕ್ರವಾರ : ಮಸೀದಿಯಲ್ಲಿ ರಕ್ತದೋಕುಳಿ

|

ಕ್ರೈಸ್ಟ್ ಚರ್ಚ್, ಮಾರ್ಚ್ 15 : ತನ್ನನ್ನು ತಾನು 'ಹೋರಾಟಗಾರ' ಎಂದು ಕರೆದುಕೊಂಡಿರುವ ಕೊಲೆಗಾರ, ನ್ಯೂಜಿಲೆಂಡ್ ನಲ್ಲಿ ಮಷೀನ್ ಗನ್ ಬಳಸಿ, ಶುಕ್ರವಾರ ಮಸೀದಿಗೆ ಪ್ರಾರ್ಥನೆಗೆಂದು ಬಂದಿದ್ದ ಇಪ್ಪತ್ತೈದಕ್ಕೂ ಹೆಚ್ಚು ಜನರನ್ನು ನಿರ್ದಯವಾಗಿ ಹತ್ಯೆಗೈದಿದ್ದಾನೆ.

ಡೀನ್ಸ್ ಅವೆನ್ಯೂನಲ್ಲಿರುವ ಅಲ್ ನೂರ್ ಮಸೀಗೆಯೊಳಗೆ ಹೊಕ್ಕ ಹತ್ಯೆಗಾರ ಮನಬಂದಂತೆ ಗುಂಡು ಹಾರಿಸಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಮಲಗಿದವರನ್ನೂ ಬಿಟ್ಟಿಲ್ಲ ಮತ್ತು ಓಡಲು ಯತ್ನಿಸಿದವರನ್ನು ಕೂಡ ಹತ್ಯೆ ಮಾಡಿದ್ದಾನೆ. ಹತ್ಯೆಯಾದವರ ಸಂಖ್ಯೆ ನಿಖರವಾಗಿ ತಿಳಿದಿಲ್ಲವಾದರೂ ಕನಿಷ್ಠ ಇಪ್ಪತ್ತೈದು ಜನರು ಸತ್ತಿರಬಹುದು ಎಂದು ಅಂದಾಜು ಮಾಡಲಾಗಿದೆ.

ನ್ಯೂಜಿಲ್ಯಾಂಡ್‌ನ ಮಸೀದಿಯಲ್ಲಿ ಶೂಟೌಟ್, ಮೃತರ ಸಂಖ್ಯೆ 27ಕ್ಕೆ ಏರಿಕೆ

ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, ಅವರಿಗೆ ಗುಂಡುಗಳ ಮೊರೆತ ಕೇಳಿಬಂದಿದೆ. ಸ್ವಲ್ಪ ಹೊತ್ತಿನಲ್ಲಿ ಹೋಗಿ ನೋಡುವಷ್ಟರಲ್ಲಿ ಅವರ ಪತ್ನಿಯೇ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಹಿನ್ನೆಲೆಯಲ್ಲಿ, ನ್ಯೂಜಿಲೆಂಡ್ ನಲ್ಲಿರುವ ಎಲ್ಲ ಮಸೀದಿಗಳನ್ನು ಬಂದ್ ಮಾಡಲು ಹೇಳಲಾಗಿದೆ ಮತ್ತು ಯಾರೂ ಮಸೀದಿಗೆ ಹೋಗಬಾರದೆಂದು ಆದೇಶಿಸಲಾಗಿದೆ.

ನ್ಯೂಜಿಲೆಂಡ್ ನ ಪ್ರಧಾನಿ ಜಸಿಂಡಾ ಅರ್ಡರ್ನ್ ಅವರು, ಇದು ನ್ಯೂಜಿಲೆಂಡ್ ಪಾಲಿಗೆ ಅತ್ಯಂತ ಕರಾಳ ದಿನ. ಹಿಂದೆಂದೂ ನಡೆದಿರದಂಥ ಭೀಕರ ಹಿಂಸಾಕೃತ್ಯ ಜರುಗಿಹೋಗಿದೆ. ಪೊಲೀಸರು ಹತ್ಯೆ ಮಾಡಿದವನನ್ನು ಬಂಧಿಸಿದ್ದಾರೆ. ಹತ್ಯೆಯಾದ ಹೆಚ್ಚಿನವರು ಹೊರದೇಶದಿಂದ ಬಂದವರು ಇರಬಹುದು ಎಂದು ಹೇಳಿಕೆ ನೀಡಿದ್ದಾರೆ.

ನ್ಯೂಜಿಲೆಂಡ್ ನಲ್ಲಿ ರಕ್ತದೋಕುಳಿ : ಮಹಿಳೆ ಸೇರಿ ನಾಲ್ವರು ವಶಕ್ಕೆ

ಹೀನ ಕೃತ್ಯವೆಸಗಿದ ಇಂಥ ವ್ಯಕ್ತಿಗಳಿಗೆ ನ್ಯೂಜಿಲೆಂಡ್ ನಲ್ಲಿ ಸ್ಥಳವಿಲ್ಲ. ಕ್ರೈಸ್ಟ್ ಚರ್ಚ್ ನಲ್ಲಿರುವವರು ಮನೆಯಿಂದ ಹೊರಬರಬಾರದು ಮತ್ತು ನ್ಯೂಜಿಲೆಂಡ್ ಪೊಲೀಸರ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ. ಸದ್ಯದಲ್ಲೇ ಪೊಲೀಸ್ ಆಯುಕ್ತರು ಹೇಳಿಕೆ ನೀಡಲಿದ್ದಾರೆ. ಇಂದು ಸಂಜೆ ನಾನು ಮತ್ತಷ್ಟು ಮಾಹಿತಿ ನೀಡಲಿದ್ದೇನೆ ಎಂದು ಜಸಿಂಡಾ ಅರ್ಡರ್ನ್ ಅವರು ಟ್ವೀಟ್ ಮಾಡಿದ್ದಾರೆ.

ಕಪ್ಪು ಬಟ್ಟೆ ಮತ್ತು ಹೆಲ್ಮೆಟ್ ಧರಿಸಿದ ಕೊಲೆಗಡುಕ, ಮಸೀದಿಯ ಹಿಂಬಾಲಿನಿಂದ ಬಂದು ಆಟೋಮ್ಯಾಟಿಕ್ ಮಷೀನ್ ಗನ್ ಬಳಸಿ ಹದಿನೈದು ನಿಮಿಷಗಳ ಕಾಲ ಗುಂಡಿನ ಸುರಿಮಳೆಗೈದಿದ್ದಾನೆ. ಆತ ಯಾರು, ಯಾಕೆ ಈ ರೀತಿ ಹತ್ಯೆ ಮಾಡಿದ್ದಾನೆ ಎಂಬುದರ ಮಾಹಿತಿ ಇನ್ನೂ ಬರಬೇಕಿದೆ. ಆದರೆ, ಈ ಮಾರಣಹೋಮದಿಂದ ನ್ಯೂಜಿಲೆಂಡ್ ತತ್ತರಿಸಿಹೋಗಿದೆ.

'1992ರ ಬಳಿಕ ಮೊದಲ ಶೂಟೌಟ್ ನ್ಯೂಜಿಲೆಂಡ್‌ಗೆ ಇಂದು ಕರಾಳದಿನ'

ಇದು ಒಂದು ಮಸೀದಿಯಲ್ಲಿ ಮಾತ್ರವಲ್ಲ ಎರಡು ಕಡೆಗಳಲ್ಲಿ ನಡೆದಿದೆ ಎಂದು ಕ್ರೈಸ್ಟ್ ಚರ್ಚ್ ಪೊಲೀಸರು ತಿಳಿಸಿದ್ದಾರೆ. ಯಾರೂ ಮಸೀದಿಗೆ ಹೋಗುವ ಸಾಹಸ ಮಾಡಬಾರದು. ರಸ್ತೆಯಲ್ಲಿ ಸಂಚರಿಸಬಾರದು ಮತ್ತು ಸಂಶಯಾತ್ಮಕ ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡಬೇಕು ಎಂದು ಆದೇಶಿಸಿದ್ದಾರೆ. ನಗರದಲ್ಲಿರುವ ಎಲ್ಲ ಶಾಲೆಗಳು ಕೂಡ ಬಂದ್ ಆಗಿವೆ.

English summary
Black Friday in Christchurch, New Zealand on 15th March : Bloodbath in Mosque. More than two dozen worshippers have been killed in one of the worst shoot out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X