ಚೀನಾದಲ್ಲಿ ಮರಳು ಚಂಡಮಾರುತ, ಕಂದು ಧೂಳು ಹೊದ್ದ ಬೀಜಿಂಗ್
ಬೀಜಿಂಗ್, ಮಾರ್ಚ್ 15: ಚೀನಾದ ಗೋಬಿ ಮರುಭೂಮಿ ಹಾಗೂ ವಾಯುವ್ಯ ಚೀನಾದ ಕೆಲವು ಭಾಗಗಳಿಂದ ಭಾರೀ ಗಾಳಿ ಬೀಸಿದ ಪರಿಣಾಮ ಚೀನಾದ ರಾಜಧಾನಿ ಬೀಜಿಂಗ್ ಕಂದು ಬಣ್ಣದ ಧೂಳಿನಿಂದ ಆವೃತವಾಗಿತ್ತು.
ಹವಾಮಾನ ಇಲಾಖೆಯು ಒಂದು ದಶಕದಲ್ಲಿ ಅತಿದೊಡ್ಡ ಮರಳು ಮಿಶ್ರಿತ ಚಂಡಮಾರುತ ಇದಾಗಿದೆ ಎಂದು ಹೇಳಿದೆ.
ಚೀನಾದ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಗನ್ಸು, ಮಂಗೋಲಿಯಾ, ಹಾಗೆಯೇ ಬೀಜಿಂಗ್ ಸುತ್ತಮುತ್ತಲ ಪ್ರದೇಶಗಳಲ್ಲಿ ಮರಗಳು ಮಿಶ್ರಿತ ಚಂಡಮಾರುತ ಬೀಸಿದೆ.

ಪಕ್ಕದ ಮಂಗೋಲಿಯಾದಲ್ಲಿ ಮರಳು ಚಂಡಮಾರುತ ಬೀಸಿದ ಪರಿಣಾಮವಾಗಿ 341 ಮಂದಿ ನಾಪತ್ತೆಯಾಗಿದ್ದಾರೆ. ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ. ಬೀಜಿಂಗ್‌ನ ಅಧಿಕೃತ ವಾಯು ಗುಣಮಟ್ಟದ ಸೂಚ್ಯಂಕ ಬೆಳಗ್ಗೆ ಗರಿಷ್ಠ 500ಕ್ಕೆ ತಲುಪಿತ್ತು.
ಬೃಹತ್ ಗೋಬಿ ಮರುಭೂಮಿಯ ಸಮೀಪ ಹಾಗೂ ಉತ್ತರ ಚೀನಾದಾದ್ಯಂತ ಅರಣ್ಯನಾಶ ಮತ್ತು ಮಣ್ಣಿನ ಸವೆತದಿಂದಾಗಿ ಬೀಜಿಂಗ್ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮರಳ ಬಿರುಗಾಳಿಯನ್ನು ಎದುರಿಸುತ್ತದೆ.
ಮರಳು ಚಂಡಮಾರುತವನ್ನು ತಡೆಯಲು ಚೀನಾವು ಮರಗಳನ್ನು ನೆಡುವ ಪ್ರಯತ್ನದಲ್ಲಿದೆ. ಬರುವ ಧೂಳನ್ನು ತಡೆಯಲು, ದೊಡ್ಡ ಹಸಿರು ಗೋಡೆಯನ್ನು ನಿರ್ಮಿಸಲಾಗಿದೆ. ಇದು ಗಾಳಿ, ಮಲಿನಕಾರಕಗಳು ಹೆಚ್ಚು ವೇಗವಾಗಿ ಹಾದುಹೋಗದಂತೆ ತಡೆಯುತ್ತದೆ.












Click it and Unblock the Notifications