ಬಾಂಗ್ಲಾದೇಶ ಮಾಜಿ ಪ್ರಧಾನಿಗೆ ಗೇಟ್ ಪಾಸ್ ಕೊಡುತ್ತಾ ಭಾರತ?
ಭಾರತ & ಬಾಂಗ್ಲಾದೇಶ ಸಂಬಂಧ ಹಳಸುತ್ತಿದೆ, ಇದಕ್ಕೆಲ್ಲಾ ಕಾರಣ ಆಗಿದ್ದು ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು. ಹೇಗೆ ಅಂದ್ರೆ ಬಾಂಗ್ಲಾದೇಶ ಹಿಂಸಾಚಾರದ ನಂತರ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶೇಖ್ ಹಸೀನಾ ಜೀವ ಉಳಿಸಿಕೊಳ್ಳಲು ಈಗ ಭಾರತಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯಕ್ಕೆ ಬಾಂಗ್ಲಾದೇಶ ಕೂಡ ಈ ವಿಚಾರದಲ್ಲಿ ರೊಚ್ಚಿಗೆದ್ದು, ಹಸೀನಾ ಅವರನ್ನು ಗಡಿಪಾರು ಮಾಡಿ ಅಂತಾ ಆಗ್ರಹಿಸುತ್ತಿದೆ.
ಸಂಕಷ್ಟ ಬಂದ ಯಾವುದೇ ದೇಶವೇ ಆಗಿರಲಿ ಭಾರತ ಸಹಾಯ ಮಾಡುತ್ತದೆ. ಅದರಲ್ಲೂ ಭಾರತ ಜಗತ್ತಿನಲ್ಲಿ ಈ ವಿಚಾರಕ್ಕೆ ಉತ್ತಮ ಹೆಸರು ಕೂಡ ಪಡೆದಿದೆ. ಈ ಹಿಂದೆ ಟಿಬೆಟ್‌ನ ವಿಚಾರದಲ್ಲಿ ಕೂಡ ಭಾರತ ಹಲವು ಜನರಿಗೆ ರಕ್ಷಣೆ ನೀಡಿತ್ತು. ಇದೀಗ ಬಾಂಗ್ಲಾ ವಿಚಾರಕ್ಕೆ ಕೂಡ ಭಾರತ ಮಧ್ಯ ಪ್ರವೇಶ ಮಾಡಿದೆ. ಇಂತಹ ಸಮಯದಲ್ಲೇ ಬಾಂಗ್ಲಾ ನಾಯಕರಿಂದ ಕಿರಿಕಿರಿ ಎದುರಾಗಿದೆ. ಅದು ಯಾವ ಕಾರಣಕ್ಕೆ ಅಂದ್ರೆ, ಬಾಂಗ್ಲಾದೇಶ ಹಿಂಸಾಚಾರ ಹಿನ್ನೆಲೆ ಹೆದರಿ ದೇಶಬಿಟ್ಟು ಓಡಿ ಬಂದಿರುವ, ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿಚಾರಕ್ಕೆ.

ಶೇಖ್ ಹಸೀನಾ ಬಾಂಗ್ಲಾಗೆ ಗಡಿಪಾರು?
ಹೌದು ಈಗ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಸುರಕ್ಷಿತವಾಗಿದ್ದಾರೆ. ದೆಹಲಿಯಲ್ಲಿ ಇರುವ ಭಾರತೀಯ ಸೇನಾ ಪ್ರದೇಶ ಅಂದ್ರೆ ವಾಯು ನೆಲೆಯಲ್ಲಿ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಜಾಗ ನೀಡಲಾಗಿದೆ. ಈ ಮೂಲಕ ಬಾಂಗ್ಲಾದೇಶದ ಹಿಂಸಾಚಾರದ ನಂತರ ಭಾರತಕ್ಕೆ ಓಡಿ ಬಂದಿರುವ ಶೇಖ್ ಹಸೀನಾ ಅವರಿಗೆ ಭಾರತ ಕೂಡ ರಕ್ಷಣೆ ನೀಡುತ್ತಿದೆ. ಆದರೆ ಇದೇ ವಿಚಾರಕ್ಕೆ ಇದೀಗ ಕಿರಿಕ್ ಶುರುವಾಗಿದ್ದು, ಅವರನ್ನ ಈಗ ತಕ್ಷಣ ಬಾಂಗ್ಲಾಗೆ ಗಡಿಪಾರು ಮಾಡಿ ಅಂತಾ ಆಗ್ರಹಿಸುತ್ತಿದೆ ಬಾಂಗ್ಲಾದೇಶ. ಇದು ಸಂಚಲನ ಸೃಷ್ಟಿ ಮಾಡಿದೆ.
ಮಾಜಿ ಪ್ರಧಾನಿ ವಿರುದ್ಧ ಕೇಸ್!
ಬಾಂಗ್ಲಾದೇಶ ಹಿಂಸಾಚಾರದ ಬೆಂಕಿಗೆ ಬಿದ್ದು ನರಳುವ ಸಮಯದಲ್ಲೇ, ಬಾಂಗ್ಲಾ ಪ್ರಧಾನಿ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಇದೇ ಕಾರಣಕ್ಕೆ ತಮ್ಮ ಸ್ಥಾನಕ್ಕೂ ಇದೇ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಓಡಿ ಬಂದು ಜೀವವನ್ನ ರಕ್ಷಿಸಿಕೊಂಡರು. ಹೀಗಿದ್ದಾಗ ಭಾರತ & ಬಾಂಗ್ಲಾದೇಶ ಗಡಿ ಭಾಗದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಇಷ್ಟೆಲ್ಲದರ ನಡುವೆ ಬಾಂಗ್ಲಾದೇಶ ಕೂಡ ಹಸೀನಾ ಅವರನ್ನು ವಾಪಸ್ ಕಳುಹಿಸಿ ಅಂತಿದೆ. ಯಾಕಂದ್ರೆ ಹಸೀನಾ ಅವರ ವಿರುದ್ಧ ಬಾಂಗ್ಲಾದೇಶದಲ್ಲಿ ಹಲವು ಪ್ರಕರಣಗಳನ್ನ ದಾಖಲಿಸಿ ಅರೆಸ್ಟ್ ಮಾಡಲು ಕಾಯುತ್ತಿದ್ದಾರೆ ಬಾಂಗ್ಲಾ ಪೊಲೀಸರು. ಹೀಗಾಗಿ ಎರಡೂ ದೇಶಗಳ ನಡುವೆ ತಿಕ್ಕಾಟ ಕೂಡ ಜೋರಾಗುತ್ತಿದ್ದು, ಮುಂದೆ ಏನಾಗುತ್ತೋ? ಎಂಬ ಆತಂಕ ಮೂಡಿದೆ.












Click it and Unblock the Notifications