ಬಾಂಗ್ಲಾದೇಶ್ ನಲ್ಲಿ ಭಾರೀ ಅಗ್ನಿ ಅವಘಡ ಹದಿನೇಳು ಮಂದಿ ಸಾವು
ಢಾಕಾ (ಬಾಂಗ್ಲಾದೇಶ್), ಮಾರ್ಚ್ 28: ಬಾಂಗ್ಲಾದೇಶ್ ರಾಜಧಾನಿ ಢಾಕಾದಲ್ಲಿ ಗಂಗನಚುಂಬಿ ಕಟ್ಟಡ ಕಚೇರಿಯಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡು, ಹದಿನೇಳು ಮಂದಿ ಸಾವನ್ನಪ್ಪಿದ್ದು, ಎಪ್ಪತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಲವರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಬಹಳ ಹೊತ್ತಿನ ಪ್ರಯತ್ನದ ನಂತರ ಒಳಗೆ ಸಿಲುಕಿದವರ ರಕ್ಷಣೆ ಮಾಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸದ್ಯಕ್ಕೆ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ನಾಗರಿಕ ರಕ್ಷಣೆ ಹಾಗೂ ಅಗ್ನಿ ಶಾಮಕ ಸೇವೆಯ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಕಿಯ ತೀವ್ರತೆ ಕಡಿಮೆ ಮಾದಲು ಸಾಧ್ಯವಾಯಿತು. ಆದರೆ ಪೂರ್ತಿಯಾಗಿ ಶಮನ ಮಾಡಲು ಆಗಿಲ್ಲ ಎಂದು ತಿಳಿಸಲಾಗಿದೆ. ವಿಷಾನಿಲ ಕಟ್ಟಡದ ಹೊರಗೆ ಬರಬೇಕು ಎಂದು ಗಾಜಿನ ಗೋಡೆಗಳನ್ನು ಒಡೆಯಲಾಗಿದೆ.
ಢಾಕಾದ ಬನಾನಿ ವಾಣಿಜ್ಯ ಜಿಲ್ಲೆಯ ಎಫ್ ಆರ್ ಟವರ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸೇನಾ ಹೆಲಿಕಾಪ್ಟರ್ ಗಳು ಕೂಡ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ. ಹನ್ನೆರಡಕ್ಕೂ ಹೆಚ್ಚು ಮಂದಿ ಕಟ್ಟಡದ ಥಾರಸಿಗೆ ಬಂದು, ಅವರನ್ನು ಅಲ್ಲಿಂದ ರಕ್ಷಿಸಲಾಗಿದೆ. ಅಂದಹಾಗೆ ಬನಾನಿಯಲ್ಲಿ ಅಪಾರ ಪ್ರಮಾಣದಲ್ಲಿ ಬಹು ಅಂತಸ್ತಿನ ಕಟ್ಟಡಗಳು ಇವೆ. ಕಚೇರಿಗಳು, ವಿ.ವಿ. ಹಾಗೂ ರೆಸ್ಟೋರೆಂಟ್ ಗಳಿವೆ.

ಬಾಂಗ್ಲಾದೇಶ್ ನಲ್ಲಿ ಬೆಂಕಿ ಅವಘಡ ಸಾಮಾನ್ಯ ಎಂಬಂತಾಗಿದೆ. ಕಳೆದ ತಿಂಗಳು ಢಾಕಾದ ಹಳೆ ಪ್ರದೇಶವೊಂದರಲ್ಲಿ ಅನಾಹುತ ಸಂಭವಿಸಿ, ಅಪಾರ್ಟ್ ಮೆಂಟ್, ಮಳಿಗೆ ಹಾಗೂ ಗೋದಾಮುಗಳಿಗೆ ಬೆಂಕಿ ತಗುಲಿ ಕನಿಷ್ಠ ಅರವತ್ತೇಳು ಮಂದಿ ಸಾವನ್ನಪ್ಪಿದ್ದರು.












Click it and Unblock the Notifications