ಲಕ್ಕಿ ನಂಬರ್ ಗಾಗಿ 60 ಕೋಟಿ ರು ಖರ್ಚು ಮಾಡಿದ ಉದ್ಯಮಿ

Posted By:
Subscribe to Oneindia Kannada

ದುಬೈ, ಅಕ್ಟೋಬರ್ 10: ಭಾರತೀಯ ಮೂಲದ ಉದ್ಯಮಿ ಬಲವಿಂದರ್ ಸಹಾನಿ ಎಂಬುವವರು 60 33 ಮಿಲಿಯನ್ ದಿರಾಮ್ (60 ಕೋಟಿ ರು) ಖರ್ಚು ಮಾಡಿ ತಮ್ಮ ಕಾರಿಗೆ ನೋಂದಣಿ ಸಂಖ್ಯೆ ಹಾಕಿಸಿಕೊಂಡಿದ್ದಾರೆ. 'ಡಿ 5' ಸಂಖ್ಯೆಯ ಕಾರಿನ ನಂಬರ್ ಪ್ಲೇಟ್ ಗಾಗಿ ನಡೆದ ಹರಾಜಿನಲ್ಲಿ ಭಾರಿ ಮೊತ್ತ ಕೊಟ್ಟು ಸಂಯೆಯನ್ನು ಖರೀದಿಸಿದ್ದಾರೆ.

ಬಲವಿಂದರ್ ಸಹಾನಿ, ಅವರು ತಮ್ಮ ರೊಲ್ಸ್ ರಾಯ್ಸ್ ಕಾರಿಗಾಗಿ ಈ ಸಂಖ್ಯೆ ಯನ್ನು 60 ಕೋಟಿ ರು (9 ಮಿಲಿಯನ್ ಡಾಲರ್) ಬಿಡ್ ಮಾಡಿ ಕೊಂಡುಕೊಂಡಿದ್ದಾರೆ.

Balwinder Sahani Dubai license plate for Rolls Royce

ದುಬೈನಲ್ಲಿ ಪ್ರಾಪರ್ಟಿ ಮ್ಯಾನೇಜ್​ವೆುಂಟ್ ಕಂಪನಿಯೊಂದನ್ನು ಸಹಾನಿ ನಡೆಸುತ್ತಿದ್ದಾರೆ. ಕಳೆದ ವರ್ಷ ಅವರು 45 ಕೋಟಿ ರೂ.ಗಳನ್ನು ನೀಡಿ 09 ಎಂಬ ಸಂಖ್ಯೆಯನ್ನು ಖರೀದಿಸಿದ್ದರು. 2008ರಲ್ಲಿ ದುಬೈನ ಉದ್ಯಮಿ ಸಹ
ದ್ ಅಲ್ ಕೌರಿ 1 ಸಂಖ್ಯೆಯ ನೋಂದಣಿಗೆ 94 ಕೋಟಿ ರೂ. ನೀಡಿದ್ದರು.

ದುಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಡಿ5 ಪ್ಲೇಟ್ ಗಾಗಿ 20 ಮಿಲಿಯನ್ ದಿರಾಮ್ ನಿಂದ ಬಿಡ್ಡಿಂಗ್ ಆರಂಭವಾಯಿತು. ದುಬೈ ರಸ್ತೆ ಹಾಗೂ ಸಾರಿಗೆ ಅಥಾರಿಟಿ ಬಿಡ್ಡಿಂಗ್ ನಡೆಸಿತ್ತು. (ಎಎಫ್ಪಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian businessman Balwinder Sahani paid 33 million dirhams ($9 million) for a Dubai license plate for one of his Rolls Royces. Plate ‘D5’ was sold at a government auction on Saturday, according to local media reports
Please Wait while comments are loading...