ಬಲೂಚಿಸ್ತಾನ ನೆಲ ಮತ್ತಷ್ಟು ಕೆಂಪು, ಈವರೆಗೂ 216 ಬಂಡುಕೋರರ ಕಥೆ ಮುಕ್ತಾಯ | Baloch Rebels
ಪಾಕಿಸ್ತಾನ ತಾನು ಮಾಡಿದ ಪಾಪ ತಾನೇ ಅನುಭವಿಸುವ ಪರಿಸ್ಥಿತಿ ಬಂದಿದ್ದು, ಬಲೂಚಿಸ್ತಾನದ ನೆಲದಲ್ಲಿ ಭುಗಿಲೆದ್ದ ಹಿಂಸಾಚಾರ ಕೈಮೀರಿ ಹೋಗಿದ್ದು ನೂರಾರು ಜನರ ಜೀವವೇ ಹೋಗಿದೆ. ಒಂದು ಕಡೆ ಪಾಕಿಸ್ತಾನ ಉಗ್ರರನ್ನು ಸಾಕುತ್ತಾ ಬೇರೆ ಬೇರೆ ದೇಶಗಳ ಮೇಲೆ ದ್ವೇಷ ಕಾರುತ್ತಿದ್ದು, ಇದರಿಂದ ಪಾಕಿಸ್ತಾನ ಅಕ್ಕಪಕ್ಕದ ದೇಶಗಳು ನೆಮ್ಮದಿ ಇಲ್ಲದೆ ನರಳುತ್ತಿವೆ. ಹೀಗೆಲ್ಲಾ ಪಾಕಿಸ್ತಾನ ತಾನು ಮಾಡಿದ ಪಾಪದ ಕೆಲಸಕ್ಕೆ ಇದೀಗ ತನ್ನದೇ ನೆಲದಲ್ಲಿ ಶಿಕ್ಷೆ ಅನುಭವಿಸುವ ವಾತಾವರಣ ನಿರ್ಮಾಣ ಆಗಿದೆ. ಬಲೂಚಿಸ್ತಾನ ನೆಲ ನೆತ್ತರಲ್ಲಿ ಮುಳುಗಿ ಹೋಗಿದ್ದು, ಸಾಮಾನ್ಯರ ಜೀವವೂ ಸಂಕಷ್ಟಕ್ಕೆ ಸಿಲುಕಿದೆ.
ಬಲೂಚಿಸ್ತಾನ ಭಾಗದಲ್ಲಿ ಪದೇ ಪದೇ ಕಿರಿಕ್ ಆಗುತ್ತಲೇ ಇರುತ್ತದೆ, ಇದಕ್ಕೆ ಪಾಕಿಸ್ತಾನ ಸರ್ಕಾರವೇ ಕಾರಣ ಎಂಬ ಆರೋಪ ಕೂಡ ಇದೆ. ಬಲೂಚ್ ಲಿಬರೇಶನ್ ಆರ್ಮಿ ಬಂಡುಕೋರರು ದೊಡ್ಡ ತಲೆನೋವು ತಂದಿದ್ದಾರೆ ಪಾಕಿಸ್ತಾನಕ್ಕೆ. ಪಾಕ್ ಸೇನೆ ಈಗಾಗಲೇ ಬಲೂಚಿಸ್ತಾನಕ್ಕೆ ನುಗ್ಗಿ ಅಟ್ಯಾಕ್ ಮಾಡಿ, ಈವರೆಗೂ 216 ಬಂಡುಕೋರರ ಹತ್ಯೆ ಮಾಡಿದೆಯಂತೆ. 36 ಸಾಮಾನ್ಯ ಜನರ ಜೀವವೂ ಹೋಗಿದ್ದು, ಇದರ ಜೊತೆಗೆ ಪಾಕಿಸ್ತಾನ ಸೇನೆಯ 22 ಸಿಬ್ಬಂದಿ ಕೂಡ ಜೀವ ಬಿಟ್ಟಿದ್ದಾರೆ. ಹೀಗೆ ಸಾವಿನ ಸೂತಕ ಬಲೂಚಿಸ್ತಾನ ಭಾಗದಲ್ಲಿ ಸಂಚಲನ ಸೃಷ್ಟಿಮಾಡಿದೆ.

ಒಟ್ಟು 216 ಬಂಡುಕೋರರ ಹತ್ಯೆ
ಪಾಕಿಸ್ತಾನ ಸರ್ಕಾರ ತಮ್ಮ ಪ್ರದೇಶದ ಬಗ್ಗೆ ತಾತ್ಸಾರ ಮಾಡುತ್ತಿದ್ದು, ಇದರಿಂದ ಅಭಿವೃದ್ಧಿ ಕೂಡ ಆಗುತ್ತಿಲ್ಲ ಎಂಬ ಆರೋಪ ಬಲೂಚಿಸ್ತಾನ ಜನರದ್ದು. ಹಾಗೇ ತಮ್ಮ ಮೇಲೆ ಬೇಕು ಅಂತಾ ಪಾಕ್ ಸರ್ಕಾರ ಶೋಷಣೆ ಮಾಡುತ್ತಿದೆ ಎಂಬ ಆರೋಪವನ್ನು ಕೂಡ ಮಾಡುತ್ತಾರೆ. ಇಷ್ಟೆಲ್ಲದರ ನಡುವೆ, ದಿಢೀರ್ ಬಲೂಚಿಸ್ತಾನ ಬಂಡುಕೋರರು ಪಾಕ್ ಸೇನೆ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದಲ್ಲಿ ತಿಕ್ಕಾಟಕ್ಕೆ ಇಳಿದ್ದರು. ಹೀಗಾಗಿ ಬಲೂಚಿಸ್ತಾನದಲ್ಲಿ ಗುಪ್ತಚರ ಕಾರ್ಯಾಚರಣೆ ಮೂಲಕ ಪಾಕ್ ಸೇನೆ ಬಂಡುಕೋರರ ಹತ್ಯೆಗೆ ಇಳಿದಿದೆ.
ಗಡಿ ಭಾಗದಲ್ಲಿ ಸೇನೆ ನಿಯೋಜನೆ
ಮತ್ತೊಂದು ಕಡೆ ಪಾಕಿಸ್ತಾನ ಸೇನೆಯ ಈ ಕ್ರಮವನ್ನು ಬಲೂಚಿಸ್ತಾನ ಬಂಡುಕೋರರ ನಾಯಕರು ಹಾಗೂ ಬಲೂಚಿಸ್ತಾನ ನಿವಾಸಿಗಳು ಖಂಡಿಸಿದ್ದಾರೆ. ಹೀಗೆ ಎಲ್ಲಾ ತಿಕ್ಕಾಟದ ನಡುವೆ ಈವರೆಗೂ 216 ಬಂಡುಕೋರರ ಹತ್ಯೆ ಮಾಡಿದೆಯಂತೆ ಪಾಕ್. ಗಡಿ ಭಾಗದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ತಲೆನೋವು ಶುರುವಾದ ಹಿನ್ನೆಲೆ ಈಗಾಗಲೇ ಸೇನಾ ಪರಿಕರಗಳನ್ನು ನಿಯೋಜನೆ ಮಾಡಿದೆ. ಆದರೆ ಇದನ್ನೆಲ್ಲಾ ಬಿಟ್ಟು ಪಾಕ್ ಸರ್ಕಾರ ಬಲೂಚ್ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದರೆ ಸ್ವತಃ ಅಲ್ಲಿನ ಜನರೇ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದರು ಎಂಬುದು ಸ್ಥಳೀಯರ ಮಾತಾಗಿದೆ.
ಆದರೆ ಅದನ್ನೆಲ್ಲಾ ಬಿಟ್ಟು ಉಗ್ರರಿಗೆ ಬೆಂಬಲ ನೀಡುತ್ತಾ, ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿರುವ ಪಾಪಿ ಪಾಕಿಸ್ತಾನಕ್ಕೆ ಇದೀಗ ಬಲೂಚ್ ಭಾಗದ ಬಂಡುಕೋರರನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಹಾಗೇ ಈ ದಾಳಿ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದ್ದು, ಸಾಮಾನ್ಯ ಜನರು ಕೂಡ ಹಿಂಸಾಚಾರಕ್ಕೆ ಬಲಿ ಆಗಿದ್ದು ಜಾಗತಿಕ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications