ಬಾಲಿ ದ್ವೀಪದಲ್ಲಿ ಭಾರಿ ಜ್ವಾಲಾಮುಖಿ ಸ್ಫೋಟ: ಚಿತ್ರದಲ್ಲಿ ವೀಕ್ಷಿಸಿ

ಜಕಾರ್ತ, ಜು.3: ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸಿಗರ ದ್ವೀಪ ಬಾಲಿಯಲ್ಲಿ ಸೋಮವಾರ ಸಂಜೆ ಸುಮಾರು 2 ಸಾವಿರ ಮೀಟರ್‌ ಎತ್ತರಕ್ಕೆ ಜ್ವಾಲಾಮುಖಿಯ ಲಾವಾರಸ ಉಕ್ಕಿ ಹರಿದು ಅನಾಹುತ ಸೃಷ್ಟಿಸಿತ್ತು. ದಟ್ಟ ಬೂದಿ ಮತ್ತು ಹೊಗೆ ಆಕಾಶಕ್ಕೆ ಹಲವು ಕಿಲೋಮೀಟರ್‌ ಎತ್ತರಕ್ಕೆ ಚಿಮ್ಮಿತ್ತು.

ಇಂಡೋನೇಷಿಯಾ ಜಿಯೋಲಾಜಿಕಲ್‌ ಏಜೆನ್ಸೀಸ್‌ ಆಗುಂಗ್‌ ಶಿಖರದ ಜ್ವಾಲಾಮುಖಿ ಸ್ಫೋಟದ ಕುರಿತಂತೆ ಮಾಹಿತಿ ನೀಡಿದ್ದು ಕೇವಲ 7 ನಿಮಿಷಗಳ ಅಂತರದ ಅವಧಿಯಲ್ಲಿ 2 ಸಾವಿರ ಮೀಟರ್‌ಗೂ ಹೆಚ್ಚು ಎತ್ತರದ ಜ್ವಾಲಾಮುಖಿ ಸ್ಫೋಟಗೊಂಡಿದೆ ಎಂದು ವರದಿ ಮಾಡಿದೆ.

ನಂತರ ಸುಮಾರು ಎರಡು ಕಿಲೋಮೀಟರ್‌ ದೂರದಲ್ಲಿ ಹರಡಿ ಭಾರಿ ಪ್ರಮಾಣದ ಹೊಗೆ ಹಾಗೂ ಮೋಡ ಮುಸುಕಿದ ವಾತಾವರಣ ಸೃಷ್ಟಿಯಾಗಿತ್ತು. ಸುಮಾರು 700ಕ್ಕೂ ಹೆಚ್ಚು ಜನರನ್ನು ಜ್ವಾಲಾಮುಖಿ ಸ್ಫೋಟ ಹಿನ್ನೆಲೆಯಲ್ಲಿ 7 ಕಿ.ಮೀ ವ್ಯಾಪ್ತಿಯಲ್ಲಿನ ಬಂಜಾರ್ ಗಲಿ ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು.

ಕಳೆದ ಫೆಬ್ರವರಿಯಲ್ಲಿ ಉಂಟಾಗಿದ್ದ ಜ್ವಾಲಾಮುಖಿ ಸ್ಫೋಟದ ನಂತರ ಅತಿ ಎತ್ತರದ ಸ್ಫೋಟವಾಗಿದ್ದು, ಸರ್ಕಾರ ಈ ಕುರಿತು ಎಚ್ಚರಿಕೆಯ್ನೂ ನೀಡಿತ್ತು. ಆಗುಂಗ್‌ ಸುತ್ತಮುತ್ತಲಿನ ಪ್ರದೇಶದ 4 ಕಿ.ಮೀ ವ್ಯಾಪ್ತಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಈವರೆಗಿನ ಎರಡನೇ ಅತಿ ದೊಡ್ಡ ಜ್ವಾಲಾಮುಖಿ ಇದಾಗಿದೆ ಎಂದು ನ್ಯಾಷನಲ್‌ ಡಿಸಾಸ್ಟರ್‌ ಲಿಟಿಗೇಷನ್‌ ಏಜೆನ್ಸಿಯ ವಕ್ತಾರ ಸುತೋಪೊ ಪುರ್ವೋ ನುಗ್ರೊಹೊ ಹೇಳಿದ್ದಾರೆ.

ಸ್ಫೋಟದ ಜಾಗದಲ್ಲಿ ಕಲ್ಲುಗಳು ಕೂಡ ಹೊರ ಚಿಮ್ಮಿವೆ ಎಂದು ಅವರು ಹೇಳಿದ್ದಾರೆ. ಜ್ವಾಲಾಮುಖಿಯ ಬಳಿಕ ಬಾಲಿ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಬಾಲಿಯಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ

ಬಾಲಿಯಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ

ಇಂಡೋನೇಷ್ಯಾದ ದ್ವೀಪ ಬಾಲಿಯಲ್ಲಿ ಸೋಮವಾರ ಜ್ವಾಲಾಮುಖಿ ಮತ್ತೆ ಸ್ಫೋಟಗೊಂಡಿದೆ. ಈವರೆಗಿನ ಎರಡನೇ ಅತಿದೊಡ್ಡ ಜ್ವಾಲಾಮುಖಿ ಇದಾಗಿದೆ ಎಂದು ತಿಳಿದುಬಂದಿದೆ.

ಸ್ಫೋಟದ ಜಾಗದಲ್ಲಿ ಕಲ್ಲುಗಳು ಕೂಡ ಹೊರ ಚಿಮ್ಮಿವೆ ಎಂದು ಅವರು ಹೇಳಿದ್ದಾರೆ. ಜ್ವಾಲಾಮುಖಿಯ ಬಳಿಕ ಬಾಲಿ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಗ್ವಾಟೆಮಾಲಾದಲ್ಲಿ ಚಿಮ್ಮಿದ ಜ್ವಾಲಾಮುಖಿ: 6 ಮಂದಿ ಬಲಿ

ಸುಗ್ಗಿಹಬ್ಬದಲ್ಲಿ ಕೆಂಡದ ಮೇಲೆ ದೇವರ ಪಲ್ಲಕ್ಕಿ ಓಟ

ಸುಗ್ಗಿಹಬ್ಬದಲ್ಲಿ ಕೆಂಡದ ಮೇಲೆ ದೇವರ ಪಲ್ಲಕ್ಕಿ ಓಟ

ಚಿಕ್ಕಮಗಳೂರಿನಲ್ಲಿ ಸುಗ್ಗಿ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ದೇವರ ಪಲ್ಲಕ್ಕಿಯನ್ನು ಹೊತ್ತು ಕೆಂಡದೆ ಮೇಲೆ ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕುಟುಂಬದ 11 ಮಂದಿ ನಿಗೂಢ ಸಾವು, ಸಂಬಂಧಿಕರ ಆಕ್ರಂದನ

ಕುಟುಂಬದ 11 ಮಂದಿ ನಿಗೂಢ ಸಾವು, ಸಂಬಂಧಿಕರ ಆಕ್ರಂದನ

ದೆಹಲಿಯ ಬುರಾರಿ ಪ್ರದೇಶದ ಮನೆಯೊಂದರಲ್ಲಿ ನಿನ್ನೆ ಒಂದೇ ಕುಟುಂಬದ 11 ಶವಗಳು ಪತ್ತೆಯಾಗಿದ್ದವು, ಈ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದು ಕೊಲೆಯೋ, ಆತ್ಮಹತ್ಯೆಯೋ ಅನುಮಾನಗಳು ಮೂಡಿದ್ದವು, ಸಾವಿನ ನಂತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

9 ದಿನ ಗುಹೆಯಲ್ಲಿ ಸಿಲುಕಿದ್ದ ಫುಟ್ಬಾಲ್‌ ಆಟಗಾರರ ರಕ್ಷಣೆ

9 ದಿನ ಗುಹೆಯಲ್ಲಿ ಸಿಲುಕಿದ್ದ ಫುಟ್ಬಾಲ್‌ ಆಟಗಾರರ ರಕ್ಷಣೆ

ಥಾಯ್ಲೆಂಡ್‌ನ ಗುಹೆಯೊಂದರಲ್ಲಿ ಒಂಬತ್ತು ದಿನಗಳಿಂದ ಸಿಲುಕಿದ್ದ ಫುಟ್ಬಾಲ್ ತಂಡವೊಂದರ 12 ಬಾಲಕರು ಮತ್ತು ಅವರ ಕೋಚ್ ಅನ್ನು ರಕ್ಷಿಸಲಾಗಿದೆ. ಥಾಯ್ಲೆಂಡ್‌ನ ವೈಲ್ಡ್ ಬೋರ್ ಎಂಬ ಫುಟ್ಬಾಲ್ ತಂಡದ 11-16ರ ವಯಸ್ಸಿನ ಬಾಲಕರು ಪ್ರವಾಸಕ್ಕೆಂದು ಜೂನ್ 23ರಂದು ಥಾಮ್ ಲುವಾಂಗ್ ನಂಗ್ ನಾನ್ ಎಂಬ ಗುಹೆಯೊಳಗೆ ಹೋಗಿದ್ದರು. ಆದರೆ, ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಉಂಟಾದ ಪ್ರವಾಹದಿಂದಾಗಿ ಕತ್ತಲೆಯ ಗುಹೆಯಿಂದ ಹೊರಬರಲಾರದೆ ಸಿಲುಕಿಕೊಂಡಿದ್ದರು

ಮಳೆಯಲಿ ಅಪ್ಪನ ಜೊತೆಯಲಿ

ಮಳೆಯಲಿ ಅಪ್ಪನ ಜೊತೆಯಲಿ

ನವದೆಹಲಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ, ಸೋಮವಾರ ರಾತ್ರಿ ಸುರಿದ ಮಳೆಯಲ್ಲಿ ಮಗನ ಕೈಹಿಡಿದು ಮಳೆಯಲ್ಲಿ ನಡೆಯುತ್ತಿರುವ ದೃಶ್ಯ ಸೊಗಸಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+