ಕೊರೊನಾ ಕೇಸ್ ಇಳಿಮುಖ: ಆಸ್ಟೇಲಿಯಾದಲ್ಲಿ ಶಾಲೆಗಳು ಓಪನ್
ಸಿಡ್ನಿ, ಏಪ್ರಿಲ್ 21: ಆಸ್ಟೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಇಳಿಮುಖ ಕಂಡಿದ್ದು, ಅಲ್ಲಿನ ಶಾಲೆಗಳನ್ನು ತರೆಯಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಅಲ್ಲಿನ ಪ್ರೀಮಿಯರ್ ಗ್ಲಾಡಿಸ್ ಬರ್ಜೆಕ್ಲಿಯನ್ ಮಾಹಿತಿ ನೀಡಿದ್ದಾರೆ.
ಕೊರೊನಾ ಭೀತಿ ಇರುವ ಕಾರಣ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆ ಹಾಗೂ ಕಾಲೇಜುಗಳಿಗೆ ಬೀಗ ಹಾಕಲಾಗಿದೆ. ಆದರೆ, ನ್ಯೂ ಸೌತ್ ವೇಲ್ಸ್‌ನಲ್ಲಿ ಕೊರೊನಾ ಕೇಸ್‌ಗಳು ಕಡಿಮೆ ಇರುವುದಿಂದ ಶಾಲೆಗಳನ್ನು ತೆರೆಯಲಾಗುತ್ತಿದೆ ಎಂದು ಪ್ರೀಮಿಯರ್ ಗ್ಲಾಡಿಸ್ ಬರ್ಜೆಕ್ಲಿಯನ್ ಹೇಳಿದ್ದಾರೆ.
ಆಸ್ಟೇಲಿಯಾದಲ್ಲಿ ಕಳೆದ ಒಂದು ತಿಂಗಳಿನಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಕೊರೊನಾ ಹರಡದಂತೆ ಮುನ್ನೆಚ್ಚರಿಕೆಯನ್ನು ಸರ್ಕಾರ ತೆಗೆದುಕೊಂಡಿತ್ತು. ಈಗ ಮೇ 11ರಿಂದ ಅಲ್ಲಿನ ಶಾಲೆಗಳು ಮತ್ತೆ ತೆರೆಯಲಿದೆ. ಕೊರೊನಾ ಕೇಸ್‌ಗಳು ಇದೇ ರೀತಿ ಕಡಿಮೆ ಇದ್ದರೆ ಇನ್ನಷ್ಟು ಶಾಲೆಗಳನ್ನು ತೆರೆಯಲು ಯೋಚನೆ ಹಾಕಿಕೊಳ್ಳಲಾಗಿದೆ.

ಮಾರ್ಚ್ ಮಧ್ಯದಲ್ಲಿ ಸೋಂಕಿನ ಪ್ರಮಾಣವು 25% ಇದ್ದು, ಈಗ ಅದು 1%ಗೆ ಬಂದಿದೆ. ಶಾಲೆಗಳನ್ನು ತೆರೆಯುವ ನಿರ್ಧಾರ ತೆಗೆದುಕೊಂಡ ವಿಶ್ವ ಕೆಲವೇ ರಾಷ್ಟ್ರಗಳಲ್ಲಿ ಆಸ್ಟ್ರೇಲಿಯಾ ಒಂದಾಗಿದೆ.
ನ್ಯೂ ಸೌತ್ ವೇಲ್ಸ್ 74 ಲಕ್ಷ ಜನ ಸಂಖ್ಯೆ ಹೊಂದಿದ್ದು, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಆಸ್ಟೇಲಿಯಾದ ಮೂರನೇ ರಾಜ್ಯವಾಗಿದೆ. ಆಸ್ಟೇಲಿಯಾದಲ್ಲಿ 14,782 ಕೊರೊನಾ ವೈರಸ್ ಸೋಂಕಿತರು ಇದ್ದಾರೆ. 470 ಜನರು ಇದರಿಂದ ಮರಣ ಹೊಂದಿದ್ದಾರೆ.












Click it and Unblock the Notifications