ಹುಷಾರ್... ಅನ್ಯಗ್ರಹ ಜೀವಿ ಭೂಮಿಗೆ ಬಂದ್ರೆ ಅನಾಹುತ
ಜೀವಂತ ದಂತ ಕತೆಯಾಗಿರುವ ವಿಜ್ಞಾನಿ ಸ್ಟೀಫನ್ ಹಾಕಿನ್ಸ್ ಅವರು ದೇಹದ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಆದರೆ, ಬುದ್ಧಿಮತ್ತೆಯಲ್ಲಿ ಅವರಿಗವರೇ ಸಾಟಿ. ಹಲವು ವಿಷಯಗಳಲ್ಲಿ ಜಗತ್ತಿನಲ್ಲಿ ಎಲ್ಲರೂ ಮೈಮರೆತಿರುವಾಗ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಸ್ಫೀಫನ್ ಹಾಕಿನ್ಸ್ ನೀಡಿರುವ ಎಚ್ಚರಿಕೆ ಅನ್ಯಗ್ರಹ ಜೀವಿಗಳ ಕುರಿತು! ಭೂಮಿಯಲ್ಲದೆ ಬೇರೆ ಗ್ರಹಗಳಲ್ಲೂ ಜೀವಿಗಳಿವೆ ಎಂದು ವಿಜ್ಞಾನಿಗಳು ದೃಢವಾಗಿ ನಂಬಿದ್ದಾರೆ. ಈಗಾಗಲೇ ಹಲವು ಬಾರಿ ಅನ್ಯಗ್ರಹ ಜೀವಿಗಳಿಗೆ "ಭೂಮಿ ಎಂಬುದೊಂದಿದೆ. ಇಲ್ಲಿ ಜೀವಿಗಳಿದ್ದಾರೆ" ಎಂಬ ಸಂದೇಶವನ್ನು ರೇಡಿಯೋ ತರಂಗಗಳ ಮೂಲಕ ರವಾನಿಸಿದ್ದಾರೆ. ಆದರೆ, ಇಂತಹ ಪ್ರಯತ್ನಗಳು ಅಪಾಯ ತಂದೊಡ್ಡಬಹುದು ಎಂದು ಸ್ಟೀಫನ್ ಹಾಕಿಂಗ್ಸ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಬ್ರಿಟನ್‌ನ 'ಡೇಲಿ ಸ್ಟಾರ್' ವರದಿ ಮಾಡಿದೆ.

"ಒಂದು ವೇಳೆ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ನಮಗೆ ಒಳಿತಾಗುವುದಿಲ್ಲ. ಕೊಲಂಬಸ್ ಅಮೆರಿಕಕ್ಕೆ ಬಂದಿಳಿದ ನಂತರ ಸ್ಥಳೀಯರು ತೀವ್ರ ತೊಂದರೆ ಎದುರಿಸಬೇಕಾಯಿತು. ಅಂತಹದೇ ಪರಿಣಾಮ ಅನ್ಯಗ್ರಹ ಜೀವಿಗಳಿಂದ ಭೂ ವಾಸಿಗಳಿಗೂ ಉಂಟಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ 'ಎಕ್ಸ್ಟ್ರಾಟೆರಿಸ್ಟ್ರಿಯಲ್ ಇಂಟೆಲಿಜೆನ್ಸ್ ಇನ್‌ಸ್ಟಿಟ್ಯೂಟ್' ಮತ್ತೊಮ್ಮೆ ವಿವಿಧ ನಕ್ಷತ್ರಗಳು ಹಾಗೂ ಗ್ರಹಗಳಿಗೆ ರೇಡಿಯೋ ಟೆಲಿಸ್ಕೋಪ್ ಮೂಲಕ ಭೂಮಿಯ ಅಸ್ತಿತ್ವದ ಕುರಿತು ಅಂಕಿ ಅಂಶಗಳನ್ನು ಕಳುಹಿಸಲು ಸಿದ್ಧತೆ ನಡೆಸಿದೆ. ಆದರೆ, ಸ್ಟ್ಪೀಫನ್ ಹಾಕಿಂಗ್ಸ್ ಈಗ ನೀಡಿರುವ ಎಚ್ಚರಿಕೆಗೆ ವಿಜ್ಞಾನಿಗಳು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications