ಕ್ಯಾಲಿಫೋರ್ನಿಯಾದ ತೆಹಮಾ ಶಾಲೆಯಲ್ಲಿ ಗುಂಡಿನ ದಾಳಿ
ತೆಹಮಾ ಕೌಂಟಿ(ಕ್ಯಾಲಿಫೋರ್ನಿಯಾ), ನವೆಂಬರ್ 15: ಉತ್ತರ ಕ್ಯಾಲಿಫೋರ್ನಿಯಾದ ತೆಹಮಾ ಕೌಂಟಿಯ ಶಾಲೆಯೊಂದರ ಮೇಲೆ ದುಷ್ಕರ್ಮಿಯೊಬ್ಬ ದಾಳಿ ನಡೆಸಿದ್ದಾನೆ. ಈ ದುರ್ಘಟನೆಯಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿರುವ ಸುದ್ದಿ ಬಂದಿದೆ.
ಸಾಕ್ರಮೆಂಟೋವಿನಿಂದ ವಾಯುವ್ಯಕ್ಕೆ 120 ಮೈಲಿಗಳ ದೂರದಲ್ಲಿರುವ ರಾಂಚೋ ತೆಹಮಾದ ಶಾಲೆಯೊಂದರ ಮೇಲೆ ಮಂಗಳವಾರ ನಡೆದ ಗುಂಡಿನ ದಾಳಿ ನಡೆದಿದೆ.

ಸುಮಾರು 45 ನಿಮಿಷಗಳ ಕಾಲ ನಡೆಸಿದ ದುಷ್ಕರ್ಮಿಯು ಟ್ರಕ್ ವಾಹನ ಚಲಾಯಿಸುತ್ತಾ ಶಾಲೆಯ ಗೇಟಿಗೆ ಗುದ್ದಿದ್ದಲ್ಲದೆ ನಂತರ ಪೊಲೀಸ್ ವಾಹನಕ್ಕೂ ಡಿಕ್ಕಿ ಹೊಡೆದಿದ್ದಾನೆ.
ಈ ದುರ್ಘಟನೆಯಲ್ಲಿ 10ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ದುಷ್ಕರ್ಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.












Click it and Unblock the Notifications