Breaking:ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ 100ಕ್ಕೂ ಅಧಿಕ ಮಂದಿ ಸಾವು

ಕಾಬೂಲ್, ಅಕ್ಟೋಬರ್ 08: ಉತ್ತರ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

At Least 100 Dead, Wounded In Northern Afghanistan Mosque Blast Targeted At Shiites

ಬಾಂಬ್ ಸ್ಪೋಟದಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಪೊಲೀಸರು ಮಾಹಿತಿ ನೀಡಿದ್ದಾರೆ.

ದೋಸ್ತ್ ಮೊಹಮ್ಮದ್ ಅವರು ಹೇಳಿರುವ ಪ್ರಕಾರ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ದಾಳಿಯಲ್ಲಿ ಬಹುತೇಕರು ಮೃತಪಟ್ಟಿದ್ದಾರೆ. ಕುಂದುಜ್ ಪ್ರದೇಶದಲ್ಲಿ ಸ್ಫೋಟ ನಡೆದಿದ್ದು, ಇಸ್ಲಾಮಿಕ್ ಸ್ಟೇಟ್‌ ಸೇನೆಯು ಮೊದಲಿನಿಂದಲೂ ಅಫ್ಘಾನಿಸ್ತಾನದ ಅಲ್ಪಸಂಖ್ಯಾತರಾಗಿರುವ ಶಿಯಾ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಲೇ ಇದೆ.

ಸ್ಫೋಟದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಕ್ಕೆ ಪಡೆದುಕೊಂಡ ಬಳಿಕ ಮತ್ತಷ್ಟು ದುರ್ಘಟನೆಗಳು ಸಂಭವಿಸುತ್ತಿವೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ಹಿಂದೆ ಕುಂದುಜ್‌ನಲ್ಲಿ ಶಿಯಾ ಮಸೀದಿಗಳಲ್ಲಿ ಸಾಕಷ್ಟು ಸ್ಫೋಟಗಳು ಸಂಭವಿಸಿವೆ. ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಕುಂದುಜ್ ಸ್ಥಳೀಯ ಆಸ್ಪತ್ರೆಗೆ ರಕ್ತದ ಅವಶ್ಯಕತೆ ಇದೆಯೇ ಎಂದು ಪರೀಕ್ಷಿಸಲು ತೆರಳಿದ್ದ ಉದ್ಯಮಿ ಅಲ್ಲಿನ ಭಯನಾಕ ದೃಶ್ಯಗಳನ್ನು ವಿವರಿಸಿದ್ದಾರೆ.

ತಾಲಿಬಾನ್ ಉಗ್ರರು ಆಫ್ಘಾನಿಸ್ತಾನ ಕೈವಶ ಮಾಡಿದ ಬಳಿಕ ಜನ ಆತಂಕದಿಂದ ದಿನ ದೂಡುತ್ತಿದ್ದಾರೆ. ಗುಂಡಿನ ಶಬ್ದ, ಮಿಸೈಲ್ ಮೊರೆತ ಹಾಗೂ ಬಾಂಬ್ ಶಬ್ದಗಳೇ ಪ್ರತಿ ದಿನ ಅಲರಾಂ ಆಗಿದೆ. ಇದೀಗ ಕಾಬೂಲ್‌ನಲ್ಲಿರುವ ಈದ್ಗಾ ಮಸೀದಿ ಮುಂಭಾಗದ ಬಾಗಿಲ ಬಳಿ ಬಾಂಬ್ ಸ್ಫೋಟಿಸಲಾಗಿತ್ತು. ಪರಿಣಾಮ ಹಲವರು ಸಾವನ್ನಪ್ಪಿದ್ದರು.

ಮುಜಾಹಿದ್ ತಾಯಿ ಪವಿತ್ರ ಪ್ರಾರ್ಥನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಈದ್ಗಾ ಮಸೀದಿಯಲ್ಲಿಸೇರಿದ್ದರು. ಮಸೀದಿ ಮೌಲ್ವಿ ಪ್ರಾರ್ಥನೆಗೆ ಎಲ್ಲರನ್ನು ಆಹ್ವಾನಿಸಿದ್ದರು. ಹೀಗಾಗಿ ಹೆಚ್ಚಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡಿದೆ.

ಮಕ್ಕಳು, ಮಹಿಳೆಯರು ಸೇರಿ ಹಲವರು ಸಾವನ್ನಪ್ಪಿದ್ದರು.ಬಾಂಬ್ ಸ್ಫೋಟಗೊಂಡಿರುವ ಕುರಿತು ತಾಲಿಬಾನ್ ಮಾಧ್ಯಮ ವಕ್ತಾರ ಜಬೀಉಲ್ಲಾ ಮುಜಾಹಿದ್ ಸ್ಪಷ್ಟಪಡಿಸಿದ್ದರು.

ಸ್ಫೋಟದ ಬೆನ್ನಲ್ಲೇ ಮಸೀದಿ ರಸ್ತೆಯನ್ನು ಬ್ಲಾಕ್ ಮಾಡಲಾಗಿದೆ. ಇತ್ತ ಗಾಯಗೊಂಡವರನ್ನು ಸ್ಥಳೀಯರು ಆಸ್ಪತ್ರೆ ದಾಖಲಿಸುವ ಕೆಲಸ ಮಾಡಿದ್ದರು. ಯಾವುದೇ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತುಕೊಂಡಿರಲಿಲ್ಲ.

ತಾಲಿಬಾನ್ ಉಗ್ರರಿಗೆ ಆಡಳಿತ ಸವಾಲಾಗುತ್ತಿದೆ. ಕಾರಣ ತಾಲಿಬಾನ್ ಉಗ್ರರು ಆಫ್ಘಾನಿಸ್ತಾನ ಕೈವಶ ಮಾಡಿದ ಬಳಿಕ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಗೊಂಡು 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈ ಸ್ಫೋಟದಲ್ಲಿ 13 ಅಮೆರಿಕ ಯೋಧರು ಮೃತಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+