ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್ ಫೋನುಗಳ ಬಿಡುಗಡೆ

Posted By:
Subscribe to Oneindia Kannada

ಕ್ಯುಪೆರ್ಟಿನೊ (ಕ್ಯಾಲಿಫೋರ್ನಿಯಾ), ಸೆಪ್ಟೆಂಬರ್ 12: ತಂತ್ರಜ್ಞಾನ ಪ್ರಿಯರಿಗೆ ವಿಶ್ವದ ಪ್ರತಿಷ್ಠಿತ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಯಾದ ಆ್ಯಪಲ್ ಅಕ್ಷರಶಃ ತಂತ್ರಜ್ಞಾನದ ಹಬ್ಬದೂಟ ಉಣಬಡಿಸಿದೆ.

ತನ್ನ ಜನಪ್ರಿಯ ಫೋನ್ ಮಾಡೆಲ್ ಆದ ಐಫೋನ್ ಸರಣಿಯ ನೂತನ ಮಾದರಿಗಳನ್ನು ಹಾಗೂ ಆ್ಯಪಲ್ ವಾಚ್ ಸರಣಿಯ 3ನೇ ತಲೆಮಾರಿನ ವಾಚ್ ಗಳನ್ನು ಆ್ಯಪಲ್ ಕಂಪನಿಯು ಮಂಗಳವಾರ ಮಧ್ಯರಾತ್ರಿ ಬಿಡುಗಡೆ ಮಾಡಿತು.

ಕ್ಯಾಲಿಫೋರ್ನಿಯಾದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಆ್ಯಪಲ್ ಕ್ಯಾಂಪಸ್ ನಲ್ಲಿನ ಸ್ಟೀವ್ ಜಾಬ್ಸ್ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕಂಪನಿಯ ಮುಖ್ಯಸ್ಥ ಟಿಮ್ ಕುಕ್ ಅವರು ಐಫೋನ್ 8, ಐಫೋನ್ 8 ಪ್ಲಸ್, ಐಫೋನ್ ಎಕ್ಸ್, ಐವಾಚ್ 3ನೇ ಸೀರಿಸ್ ಹಾಗೂ ಐ ಟಿವಿಯನ್ನು ಬಿಡುಗಡೆ ಮಾಡಲಾಯಿತು.

At iPhone 8 and iPhone X Launch Event Apple Watch Series 3 Unveiled

ನೂತನ ಮಾದರಿಯ ಐಫೋನ್ ಗಳಲ್ಲಿ ಎಮೋಜಿಗಳ ಮೂಲಕ ಸಂದೇಶ ರೆಕಾರ್ಡ್ ಮಾಡಿ ಕಳುಹಿಸುವ, ಬಳಕೆದಾರರ ಮುಖವನ್ನು ಗುರುತಿಸಿ ಫೋನ್ ಆನ್ ಆಗುವಂಥ ವಿಶಿಷ್ಠ ಹಾಗೂ ಅಭೂತಪೂರ್ವ ತಂತ್ರಜ್ಞಾನಗಳುಳ್ಳ ಐಫೋನ್ ಗಳನ್ನು ಬಿಡುಗಡೆ ಮಾಡಲಾಯಿತು.

ಐಫೋನ್ ಎಕ್ಸ್ ಫೋನ್ ಅನ್ನು ಮೇಲಕ್ಕೆ ಎತ್ತಿ ಅದನ್ನೇ ದೃಷ್ಟಿಸಿ ನೋಡಿದರೆ, ಲಾಕ್ ಆಗುವ ಅದೇ ರೀತಿ ಪುನರಾವರ್ತಿಸಿದರೆ ಅನ್ ಲಾಕ್ ಆಗುವಂಥ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಹೊಸ ಮಾದರಿಯ ಫೋನ್ ಗಳಲ್ಲಿ ಹೋಂ ಬಟನ್ ಇರುವುದಿಲ್ಲವೆಂದು ಕಂಪನಿ ಇದೇ ವೇಳೆ ಬಹಿರಂಗಗೊಳಿಸಿದೆ. ಇದಲ್ಲದೆ, ಹಲವಾರು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಸ ಫೋನ್ ಗಳು ಹೊಂದಿವೆಯೆಂದು ಕಂಪನಿ ಹೇಳಿಕೊಂಡಿದೆ.

ಕಂಪನಿ ಹೇಳಿರುವ ಪ್ರಕಾರ, ಈವರೆಗೆ ಬಂದಿರುವ ಐ-ವಾಚ್ ಗಳಿಗಿಂತಲೂ ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿದ್ದು, 4ಜಿ ಮೊಬೈಲ್ ತರಂಗಗಳಿಗೆ ಸ್ಪಂದಿಸುವ LET ತಂತ್ರಜ್ಞಾನವನ್ನು ಹೊಂದಿದೆ.

ಅಲ್ಲದೆ, ಇದು ಆ್ಯಪಲ್ ನ ಇತರ ಯಾವುದೇ ಉತ್ಪನ್ನಗಳೊಂದಿಗೆ (ಉದಾಹರಣೆಗೆ ಏರ್ ಪ್ಯಾಡ್, ಐ ಫೋನ್) ಇದನ್ನು ಸುಲಭವಾಗಿ ಸಂಪರ್ಕಗೊಳಿಸಬಹುದಾಗಿದೆ. ಐ ಫೋನ್ ಗೆ ಬರುವ ಕರೆಗಳನ್ನು ಸ್ವೀಕರಿಸಲು, ಸಂದೇಶಗಳನ್ನು ಓದಲು ಅಥವಾ ಫೋನ್ ನಿಂದ ಇತರ ಯಾವುದೇ ಚಟುವಟಿಕೆಗಳನ್ನು ಮಾಡಲು ನೀವು ಐ- ಫೋನ್ ಬಳಿಗೆ ಹೋಗಲೇಬೇಕೆಂದೇನಿಲ್ಲ ಎಂದು ಕಂಪನಿ ಹೇಳಿದೆ.

At iPhone 8 and iPhone X Launch Event Apple Watch Series 3 Unveiled

Siri ಎಂಬ ತಂತ್ರಜ್ಞಾನದ ಸಹಾಯದಿಂದ ನಿಮ್ಮ ಐ-ಫೋನ್ ನಲ್ಲಿರುವ ಹಾಡುಗಳನ್ನು ಐ-ವಾಚ್ ನ ಮೂಲಕ ಪ್ಲೇ ಮಾಡಬಹುದಾಗಿದೆ. ಇವಿಷ್ಟೇ ಅಲ್ಲದೆ, ಇನ್ನೂ ಅನೇಕ ತಂತ್ರಜ್ಞಾನಗಳು ಈ ಹೊಸ ಆ್ಯಪಲ್ ವಾಚ್ ನಲ್ಲಿ ಇವೆ ಎಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Apple releases, the Apple Watch Series 3 that comes with LTE support, ending the dependence of the wearable on the paired iPhone. iPhone 8, iPhone X Launched at the same event.ಐಫೋನ್ 8, ಐಫೋನ್ ಎಕ್ಸ್ ಬಿಡುಗಡೆ ಸಮಾರಂಭದಲ್ಲಿ ಆ್ಯಪಲ್ ವಾಚ್ ಸೀರೀಸ್ 3 ಬಿಡುಗಡೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ