ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಕಪ್ಪುರಂಧ್ರ ಪತ್ತೆ ಮಾಡಿದ ಅಮೆರಿಕದ ವಿಜ್ಞಾನಿ

|
Google Oneindia Kannada News

ವಾಷಿಂಗ್ ಟನ್, ಜನವರಿ, 09: ಭೌತ ವಿಜ್ಞಾನಿಗಳು ಹೊಸದೊಂದು ಸಂಶೋಧನೆಯನ್ನು ಮುಂದಿಟ್ಟಿದ್ದಾರೆ. ಅಪರೂಪ ಎಂಬುವುದರಲ್ಲಿ ಅಪರೂಪವಾದ ಕಪ್ಪು ರಂಧ್ರದ ಬಗೆಗಿನ ಅಗಾಧ ಮಾಹಿತಿಯನ್ನು ತೆರೆದಿರಿಸಿದ್ದಾರೆ.

ಇಲ್ಲಿಯವೆರೆಗೆ ಎರಡು ಕಪ್ಪು ರಂಧ್ರಗಳನ್ನು ಹೊಂದಿದ್ದ 12 ಗೆಲಾಕ್ಸಿಗಳನ್ನು ಪತ್ತೆ ಮಾಡಲಾಗಿತ್ತು. ಆದರೆ ಇದೀಗ ಕೊಲೊರೆಡೊ ವಿಶ್ವವಿದ್ಯಾಲಯದ ವಿಜ್ಞಾನಿ ಜೂಲಿ ಕಾಮ್ ಫಾರ್ಡ್ ಮುಂದಿಟ್ಟಿರುವ ಸಂಶೋಧನೆ ಹೊಸ ಕುತೂಹಲಕ್ಕೆ ಕಾರಣವಾಗಿದೆ.[ರಷ್ಯಾ ಮಂಗಗಳು ಮಂಗಳನ ಮೇಲೆ ಸಂಸಾರ ಮಾಡಲಿವೆ]

science

ಅಮೆರಿಕದ ಹಿರಿಯ ಭೌತ ವಿಜ್ಞಾನಿಗಳ ಸಭೆಯಲ್ಲಿ ಕೊಲೊರೆಡೊ ವಿಶ್ವವಿದ್ಯಾಲಯದ ಜೂಲಿ ಕಾಮ್ ಫಾರ್ಡ್ ತನ್ನ ವರದಿ ಮುಂದಿಟ್ಟಿದ್ದಾರೆ. ಗೆಲಾಕ್ಸಿಯೊಂದು ಎರಡು ಕಪ್ಪು ರಂಧ್ರಗಳನ್ನು ಹೊಂದಿದೆ ಎಂಬುದನ್ನು ತಿಳಿಸಿದ್ದಾರೆ.

ಈಗ ಕಂಡುಬಂದಿರುವ ಕಪ್ಪು ರಂಧ್ರಗಳು ಸುಮಾರು 1 ಬಿಲಿಯನ್ ಜ್ಯೋತಿರ್ ವರ್ಷ್ ಹಳೆಯವು ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಕಪ್ಪು ರಂಧ್ರಗಳು 1 ಮಿಲಿಯನ್ ನಿಂದ 1 ಬಿಲಿಯನ್ ಆಯಸ್ಸು ಹೊಂದಿರುತ್ತವೆ. ಆದರ ಈ ಕಪ್ಪು ರಂಧ್ರದ ಆಯಸ್ಸು ಆಶ್ಚರ್ಯ ಮೂಡಿಸಿದೆ ಎಂದು ಹೇಳಿದ್ದಾರೆ.[ಬಾಹ್ಯಾಕಾಶದಿಂದ ಕಂಡ ಭಾರತ-ಪಾಕಿಸ್ತಾನ ಗಡಿಭಾಗ]

science

2003 ರಲ್ಲಿ ಮೊಟ್ಟ ಮೊದಲ ಬಾರಿಗೆ ಎರಡು ಕಪ್ಪು ರಂಧ್ರಗಳಿರುವ ಗೆಲಾಕ್ಸಿಯನ್ನು ಪತ್ತೆ ಮಾಡಲಾಗಿತ್ತು. ಕೊಲೊರೆಡೊ ವಿಶ್ವವಿದ್ಯಾಲಯದ ವಿಜ್ಞಾನಿ ಜೂಲಿ ಕಾಮ್ ಫಾರ್ಡ್ ' ನಾನು ಈ ಬಗ್ಗೆ ಎಲ್ಲ ಮಾಹಿತಿಯನ್ನು ಪ್ರಪಂಚದ ಮುಂದೆ ಇಡುತ್ತಿದ್ದೇನೆ. ಹೊಸ ಕಪ್ಪು ರಂಧ್ರಕ್ಕೆ SDSS J1126+2944. ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾರೆ.(ಚಿತ್ರಗಳು: ಪಿಟಿಐ)

English summary
An astrophysicist has discovered something even rarer than a double-black hole galaxy: a skinny black hole. The University of Colorado at Boulder's Julie Comerford reported her findings at the American Astronomical Society's annual meeting in Kissimmee, Florida. To date, only 12 galaxies are known to exist with two black holes in their midst, Comerford said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X