• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈದ್ಯಕೀಯ ಪ್ರಯೋಗ: ಕೊರೊನಾವೈರಸ್ ಸೋಂಕಿಗೆ 'ಅಶ್ವಗಂಧ'ದಿಂದ ಔಷಧಿ!

|
Google Oneindia Kannada News

ನವದೆಹಲಿ, ಆಗಸ್ಟ್ 1: ಭಾರತೀಯ ಆಯುಷ್ ಸಚಿವಾಲಯವು ಯುಕೆದಲ್ಲಿರುವ ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರೊಪಿಕಲ್ ಮೆಡಿಸನ್(LSHTM) ಸಹಭಾಗಿತ್ವದಲ್ಲಿ ಅಶ್ವಗಂಧವನ್ನು ಬಳಸಿಕೊಂಡು ಕೊರೊನಾವೈರಸ್ ಸೋಂಕು ನಿವಾರಣೆಯ ಔಷಧಿ ಉತ್ಪಾದಿಸುವ ಬಗ್ಗೆ ಅಧ್ಯಯನವನ್ನು ನಡೆಸಲಾಗುತ್ತಿದೆ.

ಆಯುಷ್ ಸಚಿವಾಲಯದ ಸ್ವಾಯತ್ತ ಸಂಸ್ಥೆ ಆಗಿರುವ ಅಖಿಲ ಭಾರತ ಆಯುರ್ವೇದ ಸಂಸ್ಥೆಯು ಎಲ್ಎಸ್ ಹೆಚ್ ಟಿಎಂ ಜೊತೆಗೆ ಪರಸ್ಪರ ಸಹಕಾರ ನೀಡುವಂತೆ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು. ಈ ಪ್ರಕಾರ, ಯುನೈಟೆಡ್ ಕಿಂಗ್ ಡನ್ ನಗರಗಳಾದ ಲಿಸೆಸ್ಟರ್, ಬರ್ಮಿಂಗ್ ಹ್ಯಾಮ್ ಮತ್ತು ಲಂಡನ್ ಗಳಲ್ಲಿ 2000 ಜನರ ಮೇಲೆ ಈ ಅಶ್ವಗಂಧ ವೈದ್ಯಕೀಯ ಪ್ರಯೋಗ ನಡೆಸಲಾಗುತ್ತಿದೆ ಎಂದು ಆಯುಷ್ ಸಚಿವಾಲ ತಿಳಿಸಿದೆ.

ಭಾರತದಲ್ಲಿ ಕೊರೊನಾವೈರಸ್ ಏರಿಕೆ ಸೂಚನೆ ನೀಡುತ್ತಿದೆಯಾ ಆರ್-ಮೌಲ್ಯ!ಭಾರತದಲ್ಲಿ ಕೊರೊನಾವೈರಸ್ ಏರಿಕೆ ಸೂಚನೆ ನೀಡುತ್ತಿದೆಯಾ ಆರ್-ಮೌಲ್ಯ!

ಅಶ್ವಗಂಧ (ವಿಥಾನಿಯಾ ಸೊಮ್ನಿಫೆರಾ)ವನ್ನು ಸಾಮಾನ್ಯವಾಗಿ 'ಭಾರತೀಯ ಚಳಿಗಾಲದ ಚೆರ್ರಿ' ಎಂದು ಕರೆಯಲ್ಪಡುತ್ತದೆ. ಇದು ಸಾಂಪ್ರದಾಯಿಕ ಮೂಲಿಕೆಯಾಗಿದ್ದು, ಶಕ್ತಿಯನ್ನು ವೃದ್ಧಿಸುವ, ಒತ್ತಡ ನಿವಾರಿಸುವ ಹಾಗೂ ಪ್ರತಿಕಾಯ ವ್ಯವಸ್ಥೆಯನ್ನು ಬಲಪಡಿಸುವ ಸಾಮರ್ಥವನ್ನು ಹೊಂದಿದೆ. ಯುಕೆಯಲ್ಲಿ ಪೌಷ್ಟಿಕಾಂಶ ಹೆಚ್ಚಿಸುವುದಕ್ಕೆ ಪೂರಕವಾದ ಈ ಮೂಲಕೆಯನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

ಮೊದಲ ಬಾರಿ ಜಾಗತಿಕ ಸಂಸ್ಥೆ ಜೊತೆಗೆ ಅಧ್ಯಯನ:

ಭಾರತದ ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆಯಲ್ಲಿ ಈ ಹಿಂದೆ ಹಲವು ಮಹತ್ವದ ಅಧ್ಯಯನಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದೆ. ಅಶ್ವಗಂಧದ ಇತರೆ ಉಪಯೋಗಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಅಧ್ಯಯನಗಳನ್ನು ನಡೆಸಬೇಕಿದೆ. ಇದೇ ಮೊದಲ ಬಾರಿಗೆ ಜಾಗತಿಕ ಸಂಸ್ಥೆಯೊಂದರ ಜೊತೆಗೆ ಕೊವಿಡ್-19 ವಿರುದ್ಧ ಅಶ್ವಗಂಧ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಎರಡು ತಂಡಗಳನ್ನಾಗಿಸಿ ಚಿಕಿತ್ಸೆ ನೀಡುವುದು:

ಅಂತರಾಷ್ಟ್ರೀಯ ಯೋಜನೆಗಳ ಸಂಯೋಜಕರಾದ ಡಾ. ರಾಜಗೋಪಾಲನ್ ಹಾಗೂ ಸಹ-ತನಿಖಾಧಿಕಾರಿಯಾಗಿ ಡಾ ತನುಜಾ ಮನೋಜ್ ನೇಸರಿ ಅವರನ್ನು ಆಯ್ಕೆ ಮಾಡಲಾಗಿದೆ. ಎಲ್ಎಸ್ ಹೆಚ್ ಟಿಎಂ ಪ್ರಿನ್ಸಿಪಾಲ್ ಡಾ. ಸಂಜಯ್ ಕಿನ್ರಾ ಯೋಜನೆಯ ತನಿಖಾಧಿಕಾರಿಯಾಗಿದ್ದಾರೆ. ಎಐಐಎ ನಿರ್ದೇಶಕ ಹಾಗೂ ಸಹ ತನಿಖಾಧಿಕಾರಿ ಆಗಿರುವ ಡಾ ತನುಜಾ ಮನೋಜ್ ನೇಸರಿ ಪ್ರಕಾರ, "ಮೂರು ತಿಂಗಳವರೆಗೆ 1,000 ಭಾಗವಹಿಸುವವರ ಒಂದು ತಂಡಕ್ಕೆ ಅಶ್ವಗಂಧ (ಎಜಿ) ಮಾತ್ರೆಗಳನ್ನು ನೀಡಲಾಗುವುದು. ಎರಡನೇ ತಂಡದ 1,000 ಮಂದಿಗೆ ಪ್ಲಸೀಬೊವನ್ನು ನೀಡಲಾಗುವುದು. ಅಶ್ವಗಂಧಕ್ಕಿಂತ ಇದರ ನೋಟ ಮತ್ತು ರುಚಿ ಭಿನ್ನವಾಗಿರುವುದಿಲ್ಲ. ಡಬಲ್-ಬ್ಲೈಂಡ್ ಪ್ರಯೋಗದಲ್ಲಿ ಗುಂಪಿನ ಚಿಕಿತ್ಸೆಯ ಬಗ್ಗೆ ರೋಗಿಗಳು ಮತ್ತು ವೈದ್ಯರು ಇಬ್ಬರಿಗೂ ತಿಳಿದಿರುವುದಿಲ್ಲ," ಎಂದು ಹೇಳಿದ್ದಾರೆ.

ಒಂದು ದಿನಕ್ಕೆ ಎರಡು ಮಾತ್ರೆ:

"ವೈದ್ಯಕೀಯ ಪ್ರಯೋಗದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ಒಂದು ದಿನಕ್ಕೆ 500 ಎಂಜಿಯ ಎರಡು ಮಾತ್ರೆಗಳನ್ನು ಸೇವಿಸುತ್ತಾರೆ. ದೈನಂದಿನ ಆರೋಗ್ಯದಲ್ಲಿನ ಏರುಪೇರು, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ, ಯಾವುದೇ ರೀತಿ ರೋಗದ ಲಕ್ಷಣಗಳ ಬಗ್ಗೆ ಪ್ರತಿ ತಿಂಗಳು ವರದಿ ಪಡೆದುಕೊಳ್ಳಲಾಗುತ್ತದೆ. ಈ ಯೋಜನೆಗಾಗಿ ಎರಡು ರಾಷ್ಟ್ರಗಳ ನಡುವೆ 16 ತಿಂಗಳಿನಿಂದ ಚರ್ಚೆ ನಡೆದಿದ್ದು, 100ಕ್ಕೂ ಹೆಚ್ಚು ಬಾರಿ ಸಭೆ ನಡೆಸಲಾಗಿತ್ತು," ಎಂದು ಡಾ. ನೇಸರಿ ಹೇಳಿದ್ದಾರೆ.

ಕೇಂದ್ರದಿಂದ ಅಧ್ಯಯನಕ್ಕೆ ಅನುಮೋದನೆ:

ಈ ಅಧ್ಯಯನವನ್ನು ನಡೆಸುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಔಷಧಗಳು ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆಯಿಂದ ಅನುಮೋದನೆ ಪಡೆದುಕೊಳ್ಳಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಉತ್ತಮ ಚಿಕಿತ್ಸಾ ಪದ್ಧತಿಯ ಮಾರ್ಗಸೂಚಿಗಳ ಪ್ರಕಾರ, ಅಧ್ಯಯನ ಮತ್ತು ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಭಾರತದಲ್ಲಿ ಇತ್ತೀಚಿಗೆ ಅಶ್ವಗಂಧವನ್ನು ಹಲವು ರೀತಿ ಚಿಕಿತ್ಸೆಗೆ ಬಳಸುತ್ತಿರುವುದು ಹೆಚ್ಚಿದೆ. ಅಶ್ವಗಂಧ ಬಳಕೆಯಿಂದಾಗಿ ಮಾನಸಿಕ ಒತ್ತಡ, ಸ್ನಾಯು ಸೆಳೆತ ನಿವಾರಣೆ, ಆಯಾಸದ ಲಕ್ಷಣಗಳು ಗೋಚರಿಸುವ ರೋಗಿಗಳ ಚಿಕಿತ್ಸೆಗೆ ಮತ್ತು ಪ್ರತಿಕಾಯ ವ್ಯವಸ್ಥೆ ವೃದ್ಧಿಗೆ ಹೆಚ್ಚು ಪರಿಣಾಮಕಾರಿ ಮದ್ದು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ದೀರ್ಘಕಾಲದ ಆಯಾಸ, ನಿದ್ರಾಹೀನತೆ ಲಕ್ಷಣಕ್ಕೆ ಚಿಕಿತ್ಸೆ ನೀಡಲು ಅಶ್ವಗಂಧವನ್ನು ಬಳಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಾಣಿಗಳ ಮೇಲೆ ನಡೆಸಿದ ಸಂಯೋಜನಾ ಪ್ರಯೋಗದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪರಿಷ್ಕರಿಸುವ ಸಾಮರ್ಥ್ಯ ಅಶ್ವಗಂಧಕ್ಕಿದೆ. ಕೊರೊನಾವೈರಸ್ ಸೋಂಕಿನಿಂದ ದೀರ್ಘಕಾಲಿಕ ಉಪಶಪನ ಒದಗಿಸುವ ನಿಟ್ಟಿನಲ್ಲಿ ಅಶ್ವಗಂಧವು ಪರಿಣಾಮಕಾರಿ ಔಷಧಿಯಾಗಲಿದೆ ಎಂದು ಪ್ರಯೋಗಗಳು ಸೂಚಿಸಿವೆ. ಈ ಪ್ರಯೋಗದ ಯಶಸ್ಸಿನ ನಂತರ ಅಶ್ವಗಂಧವು ಕೊರೊನಾವೈರಸ್ ಚಿಕಿತ್ಸೆಗೆ ಸಾಬೀತುಪಡಿಸಲಾದ ಜಗತ್ತಿನ ಔಷಧಿ ಎನಿಸಲಿದೆ.

English summary
Ashwagandha’ for Promoting Recovery From Coronavirus; India And U K Conduct clinical trials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X