ಉಗ್ರರಿಂದ ಮುಕ್ತಗೊಂಡ ಮೊಸುಲ್, 39 ಭಾರತೀಯರು ಎಲ್ಲಿ?

By: ವಿಕಾಸ್ ನಂಜಪ್ಪ
Subscribe to Oneindia Kannada

ಮೊಸುಲ್, ಜುಲೈ 10:ಮೊಸುಲ್ ನಲ್ಲಿ ಇಸ್ಲಾಮಿಕ್ ಸ್ಟೇಟ್‌ ಉಗ್ರರ ವಿರುದ್ಧ ಜಯ ಸಾಧಿಸಲಾಗಿದ್ದು, ನಗರವು ಉಗ್ರರ ಹಿಡಿತದಿಂದ ಸ್ವತಂತ್ರಗೊಂಡಿದೆ ಎಂದು ಇರಾಕ್ ಅಧಿಕೃತವಾಗಿ ಪ್ರಕಟಿಸಿದೆ. ಆದರೆ, 2014ರಲ್ಲಿ ಇರಾಕಿ ಉಗ್ರರಿಂದ ಅಪಹರಿಸಲ್ಪಟ್ಟಿದ್ದ 39ಕ್ಕೂ ಅಧಿಕ ಭಾರತೀಯರ ಸುಳಿವು ಇನ್ನೂ ಸಿಕ್ಕಿಲ್ಲ.

ಇರಾಕ್‌ ಪ್ರಧಾನಿ ಹೈದರ್ ಅಲ್-ಅಬಾದಿ ಅವರು ಮೊಸುಲ್ ಪಟ್ಟಣವನ್ನು ಐಎಸ್ಐಎಸ್ ಮುಕ್ತ ಎಂದು ಘೋಷಿಸಿದ್ದಾರೆ.ಇರಾಕಿ ಸೇನೆಯ ವಶಕ್ಕೆ ಮೊಸುಲ್ ಪಟ್ಟಣ ಬಂದಿರುವುದರಿಂದ 39 ಮಂದಿ ಭಾರತೀಯ ಮೂಲದವರ ಪತ್ತೆ ಸುಲಭವಾಗಲಿದೆ ಎಂಬ ಆಶಾಭಾವದಲ್ಲಿ ಅವರ ಕುಟುಂಬದವರಿದ್ದಾರೆ.

As Iraq takes back Mosul, no word on 39 abducted Indians as yet

ಅಪಹೃತರ ಪೈಕಿ ಹರ್ಜಿತ್ ಮಸಿಹ್ ಎಂಬಾತ, ಉಗ್ರರ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ನಂತರ ಮಾಧ್ಯಮಗಳ ಮುಂದೆ ಬಂದು, ಉಳಿದ ಅಪಹೃತರನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಹೇಳಿದ್ದ.

ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಗದ ಕಾರಣ, ಆತನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಜೂನ್ 16ರಂದು ಈ ಬಗ್ಗೆ ಪ್ರಕಟಣೆ ಹೊರಡಿಸಿದ ಭಾರತೀಯ ರಾಯಭಾರ ಕಚೇರಿ, ಅಪಹೃತರನ್ನು ಗುಂಡಿಕ್ಕಿ ಕೊಂದಿರುವ ಬಗ್ಗೆ ಮಾಹಿತಿ ಇಲ್ಲ ಎಂದಿದ್ದರು.

ಮೊಸುಲ್ ಪಟ್ಟಣದ ಚರ್ಚ್ ವೊಂದರಲ್ಲಿ ಭಾರತೀಯರು ನೆಲೆಸಿದ್ದಾರೆ ಎಂಬ ಮಾಹಿತಿಯನ್ನು ಇರಾಕಿ ಅಧಿಕಾರಿಗಳು ನೀಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಸಿಗಬೇಕಿದೆ ಎಂದು ರಾಯಭಾರ ಕಚೇರಿ ಅಧಿಕಾರಿ ಗೋಪಾಲ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The fall of Mosul from the hands of the Islamic State has brought hope to the families of the 39 Indians who were taken hostage in 2014. The three year battle for Mosul was finally won by the Iraq Army which claimed to take over the area from the ISIS.
Please Wait while comments are loading...