ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರುವೆ ಇಟ್ಕೊಂಡ್ರೆ ತಂಪು ತಂಪು ಕೂಲ್!

By Mahesh
|
Google Oneindia Kannada News

ನ್ಯೂಯಾರ್ಕ್, ಆ.4: ಇರಲಾರದೆ ಇರುವೆ ಬಿಟ್ಕೊಂಡ್ರೆ ಎಲ್ಲೆಲ್ಲೋ ಉರಿ ಎಂಬ ಮಾತಿದೆ. ಆದರೆ, ಇರುವೆಗಳನ್ನು ಇಟ್ಕೊಂಡ್ರೆ ತಂಪು ತಂಪು ಕೂಲ್ ಕೂಲ್, ಜಾಗತಿಕ ತಾಪಮಾನ ತಗ್ಗಿಸಲು ಇರುವೆ ಪ್ರಬಲ ಅಸ್ತ್ರ ಎಂದು ಸಂಶೋಧಕರು ಹೇಳಿದ್ದಾರೆ.

ವಾತಾವರಣದಿಂದ ಇಂಗಾಲದ ಡೈಆಕ್ಸೈಡನ್ನು ಹೀರಲು ನೆರವಾಗುವ ಮೂಲಕ ಇರುವೆಗಳು ಭೂಮಿಯನ್ನು ತಂಪುಗೊಳಿಸುತ್ತವೆ ಎಂದು ಹೊಸ ಅಧ್ಯಯನದಿಂದ ತಿಳಿದು ಬಂದಿದೆ. ಮಣ್ಣಿನ ಮೇಲೆ ಇರುವೆಗಳ ಪ್ರಭಾವದ ಕುರಿತು ನಡೆಸಲಾದ ಸುದೀರ್ಘ ಪ್ರಯೋಗವೊಂದರಲ್ಲಿ ಇರುವೆಗಳ ಸಂಖ್ಯೆ ಹೆಚ್ಚಿದಂತೆ ಅವು ಭೂಮಿಯನ್ನು ತಂಪುಗೊಳಿಸುತ್ತವೆ ಎಂಬ ಅಂಶ ಬೆಳಕಿಗೆ ಬಂದಿದೆ.

ಇರುವೆಗಳು ವಾತಾವರಣವನ್ನು ಬದಲಾಯಿಸುತ್ತವೆ ಎಂದ ಈ ಅಧ್ಯಯನ ತಂಡದ ಮುಖ್ಯಸ್ಥ, ಟೆಂಪೆಯ ಅರಿರೊನಾ ಸ್ಟೇಟ್ ಯೂನಿವರ್ಸಿಟಿಯ ಲೇಖಕರೂ ಆಗಿರುವ ರೊನಾಲ್ಡ್ ಡೋರ್ನ್ ಹೇಳಿದ್ದಾರೆ.

Can ants save Earth from global warming?

ಕೆಲವು ಇರುವೆ ತಳಿಗಳು ಕ್ಯಾಲ್ಸಿಯಂ ಕಾರ್ಬೊನೇಟನ್ನು (ಸುಣ್ಣದ ಕಲ್ಲು) ಸ್ರವಿಸುವುದಕ್ಕಾಗಿ ಖನಿಜಗಳನ್ನು ತೇವಗೊಳಿಸುತ್ತವೆ. ಈ ಪ್ರಕ್ರಿಯೆಯಲ್ಲಿ ವಾತಾವರಣದಿಂದ ಅತ್ಯಲ್ಪ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಹಿಡಿದಿಡಲ್ಪಡುತ್ತದೆ ಎಂದು ರೊನಾಲ್ಡ್ ತಿಳಿಸಿದ್ದಾರೆ.

ಇರುವೆಗಳ ಈ ಸುಣ್ಣದ ಕಲ್ಲಿನ ಕಾರ್ಖಾನೆ, ಸಾಗರಗಳಲ್ಲಿ ನಡೆಯುವ ಭಾರೀ ಪ್ರಮಾಣದ ಭೂಮಿ ತಂಪುಗೊಳಿಸುವ ಪ್ರಕ್ರಿಯೆಯ ಕಿರು ಮಾದರಿಯಾಗಿದೆ ಎಂದು 'ಲೈವ್‌ಸೈನ್ಸ್' ವರದಿ ಮಾಡಿದೆ. ಬಸಾಲ್ಟ್ ಮರಳಿನ ವಿಭಜನೆಯನ್ನು ಮಾಡುವ ಮೂಲಕ ಇರುವೆಗಳು ಶಕ್ತಿಶಾಲಿ ಹವಾಮಾನ ಏಜೆಂಟ್‌ಗಳಾಗಿ ಕೆಲಸ ಮಾಡುತ್ತವೆಂಬುದನ್ನು ಡೋರ್ನ್ ಕಂಡು ಹಿಡಿದಿದ್ದಾರೆ.

ಬರಿ ನೆಲದಲ್ಲಿರುವ ಮರಳು ವಿಭಜನೆಯಾಗುವುದಕ್ಕಿಂತ 50 ರಿಂದ 300 ಪಟ್ಟು ವೇಗದಲ್ಲಿ ಇರುವೆಗಳು ಖನಿಜಗಳನ್ನು ಒಡೆಯುತ್ತವೆ. ಇರುವೆಗಳು ಖನಿಜಗಳಿಂದ ಕ್ಯಾಲ್ಸಿಯಂ ಹಾಗೂ ಮೆಗ್ನೀಷಿಯಂಗಳನ್ನು ಹೊತ್ತು ಅವುಗಳನ್ನು ಸುಣ್ಣದ ಕಲ್ಲು ತಯಾರಿಸಲು ಬಳಸುತ್ತವೆಂದು ಡೋರ್ನ್ ಹೇಳಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಕೀಟಗಳು ಹಸಿರುಮನೆ ಅನಿಲವಾದ ಕಾರ್ಬನ್‌ ಡೈಆಕ್ಸೈಡನ್ನು ಬಂಡೆಗಳಲ್ಲಿ ಹಿಡಿದಿರುತ್ತವೆ ಎಂದು ಹೇಳಿದೆ. ಇರುವೆಗಳು ಮರಳಿನ ಕಣಗಳನ್ನು ನೆಕ್ಕಿ ಅವುಗಳನ್ನು ತಮ್ಮ ಗೂಡಿನ ಗೋಡೆಗೆ ಅಂಟಿಸುವಾಗ ಈ ಬದಲಾವಣೆ ಸಂಭವಿಸುತ್ತಿರಬಹುದು. ಆದರೆ, ಈ ಪ್ರಕ್ರಿಯೆ ನಿಜವಾಗಿಯೂ ಒಂದು ವೈಜ್ಞಾನಿಕ ನಿಗೂಢ ಎಂದು ಡೋರ್ನ್ ತಿಳಿಸಿದ್ದಾರೆ. ಇರುವೆಗಿರುವ ಬಲದ ಮಹತ್ವ ಈಗ ವಿಜ್ಞಾನಿಗಳಿಗೆ ಅರಿವಾಗಿದೆ. (ಪಿಟಿಐ)

English summary
Ants may be cooling the Earth by helping trap carbon dioxide from the environment, a new study has claimed. "Ants are changing the environment," said lead study author Ronald Dorn, from the Arizona State University in Tempe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X