ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗವಾಗಿ ಕರಗುತ್ತಿರುವ ವಿಶ್ವದ ಅತಿದೊಡ್ಡ ಮಂಜುಗಡ್ಡೆ: ಸಕಲ ಜೀವರಾಶಿಗಿದೆ ಅಪಾಯ!

|
Google Oneindia Kannada News

ನ್ಯೂಯಾರ್ಕ್ ಆಗಸ್ಟ್ 11: ಜಾಗತಿಕ ತಾಪಮಾನ ಏರಿಕೆಯಿಂದಾಗುವ ಹವಾಮಾನ ಬದಲಾವಣೆ ಜಗತ್ತಿಗೆ ಸವಾಲಿನ ವಿಷಯವಾಗಿದೆ. ಈ ನಡುವೆ ಭಯಾನಕ ಮಾಹಿತಿಯೊಂದು ಹೊರಬಿದ್ದಿದೆ. ಬುಧವಾರ ಉಪಗ್ರಹ ವಿಶ್ಲೇಷಣೆ ಅಂಟಾರ್ಕ್ಟಿಕಾದ ಕರಾವಳಿ ಹಿಮನದಿಗಳಲ್ಲಿ ಅತ್ಯಂತ ವೇಗವಾಗಿ ಮಂಜುಗಡ್ಡೆಗಳು ಕರಗುತ್ತಿರುವುದನ್ನು ತೋರಿಸಿದೆ. ಕಳೆದ 25 ವರ್ಷಗಳಲ್ಲಿ ಅಂಟಾರ್ಕ್ಟಿಕಾದಲ್ಲಿರುವ ವಿಶ್ವದ ಅತಿದೊಡ್ಡ ಮಂಜುಗಡ್ಡೆ ವೇಗವಾಗಿ ಕರಗುತ್ತಿದೆ. ಇದು ಹಿಂದಿನ ಅಂದಾಜುಗಳಿಗಿಂತ ದ್ವಿಗುಣಗೊಂಡಿದೆ.

ಈ ಬೃಹತ್ ಮಂಜುಗಡ್ಡೆ ಕರಗುವಿಕೆಯನ್ನು ತಡೆಯಲು ಭೂಮಿಯ ತಾಪಮಾನ, ಹವಾಮಾನ ಮತ್ತು ಪರಿಸರವನ್ನು ಸಮತೋಲನಗೊಳಿಸುವ ಮುಖ್ಯವಾಗಿದೆ. ದುಃಖಕರವೆಂದರೆ ಭೂಮಿಯ ಉಷ್ಣತೆಯ ಹೆಚ್ಚಳದಿಂದ ಅವುಗಳ ಕರಗುವಿಕೆ ವೇಗಗೊಂಡಿದೆ. ಇದಕ್ಕೆ ಬಹುದೊಡ್ಡ ಕಾರಣ ಮಾನವನ ದುರಾಸೆ. ಅವನು ತನ್ನ ಮಹತ್ವಾಕಾಂಕ್ಷೆಯನ್ನು ಪೂರೈಸಲು ಪ್ರಕೃತಿಯ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದ್ದಾನೆ. ಈ ಬಿಕ್ಕಟ್ಟಿನ ಫಲಿತಾಂಶವು ನಮ್ಮ ನಾಗರಿಕತೆಯ ವಿನಾಶದ ರೂಪದಲ್ಲಿ ಕಾಣಿಸಿಕೊಳ್ಳಬಹುದು.

ಪ್ರಾಣಿಗಳ ಅಸ್ತಿತ್ವದಲ್ಲಿ ಅಪಾಯ

ಪ್ರಾಣಿಗಳ ಅಸ್ತಿತ್ವದಲ್ಲಿ ಅಪಾಯ

ಲಾಸ್ ಏಂಜಲೀಸ್‌ನಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ಸಂಶೋಧಕರ ನೇತೃತ್ವದ ಮತ್ತು ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಹೊಸ ಕಳವಳವನ್ನು ಹುಟ್ಟುಹಾಕಿದೆ. ಅದೇನೆಂದರೆ ಹವಾಮಾನ ಬದಲಾವಣೆಯಿಂದಾಗಿ ವಿಶ್ವದ ಹವಾನಿಯಂತ್ರಣ ಎಂದು ಕರೆಯಲ್ಪಡುವ ಅಂಟಾರ್ಕ್ಟಿಕಾದಲ್ಲಿ ಮಂಜುಗಡ್ಡೆಯ ದಪ್ಪದ ಹಾಳೆ ವೇಗವಾಗಿ ಕರಗುತ್ತಿದೆ. ಇದು ಜಗತ್ತಿನಲ್ಲಿ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಶಾಖದಿಂದ ಸಮುದ್ರ ಮಟ್ಟವು ಹಠಾತ್ ಏರಿಕೆಯಿಂದಾಗಿ, ಸುನಾಮಿ ಮತ್ತು ಚಂಡಮಾರುತದ ಅಪಾಯವಿರುತ್ತದೆ. ಇದರಿಂದಾಗಿ ಭೂಮಿಯ ಮೇಲೆ ವಾಸಿಸುವ ಪ್ರಾಣಿಗಳ ಅಸ್ತಿತ್ವವು ಅಪಾಯದಲ್ಲಿದೆ.

12 ಟ್ರಿಲಿಯನ್ ಟನ್‌ಗಳಷ್ಟು ಕರಗಿದ ಮಂಜುಗಡ್ಡೆ

12 ಟ್ರಿಲಿಯನ್ ಟನ್‌ಗಳಷ್ಟು ಕರಗಿದ ಮಂಜುಗಡ್ಡೆ

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಅಂಟಾರ್ಕ್ಟಿಕಾ ಹೆಚ್ಚು ಹಾನಿಗೊಳಗಾಗಿದೆ. ಒಂದು ವಿಶ್ಲೇಷಣೆ ಅಂಟಾರ್ಕ್ಟಿಕಾದ ದಟ್ಟವಾದ ಮಂಜುಗಡ್ಡೆಗಳ (ಐಸ್ ಶೆಲ್ಫ್) ದ್ರವ್ಯರಾಶಿಯು 1997 ರಿಂದ 12 ಟ್ರಿಲಿಯನ್ ಟನ್ಗಳಷ್ಟು ಕಡಿಮೆಯಾಗಿದೆ. ಇದು ಹಿಂದಿನ ಅಂದಾಜಿಗಿಂತ ಎರಡು ಪಟ್ಟು ಹೆಚ್ಚು. ಅಂಟಾರ್ಕ್ಟಿಕಾದಲ್ಲಿ ನೀರೊಳಗಿನ ಮಂಜುಗಡ್ಡೆಯ ಕರಗುವಿಕೆಯ ಪ್ರಮಾಣವು ಪ್ರತಿ 20 ವರ್ಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತದೆ. ಜೊತೆಗಿದು ಶೀಘ್ರದಲ್ಲೇ ಸಮುದ್ರ ಮಟ್ಟ ಏರಿಕೆಯ ಅತಿದೊಡ್ಡ ಮೂಲವಾಗಬಹುದು.

ವಿಶ್ವದ ಅತಿದೊಡ್ಡ ಹಿಮನದಿಯ ಒಳಭಾಗದಿಂದ ಪಡೆದ ಮೊದಲ ಸಂಪೂರ್ಣ ನಕ್ಷೆಯಿಂದ ಅನೇಕ ಹೊಸ ಸಂಗತಿಗಳು ಹೊರಹೊಮ್ಮಿವೆ. ಪ್ರಪಂಚದ ಇತರ ಹಿಮನದಿಗಳು ಕರಗಿ ಶುದ್ಧ ನೀರಿನ ಪ್ರಮುಖ ಮೂಲಗಳನ್ನು ಸೇರುತ್ತಿದೆ. ಒಂದೆಡೆ ಏರುತ್ತಿರುವ ಸಮುದ್ರ ಮಟ್ಟ ಮತ್ತೊಂದೆಡೆ ಶುದ್ಧ ನೀರಿನ ಕೊರತೆ ಮನುಷ್ಯನ ಭವಿಷ್ಯದ ಗಂಭೀರ ಪ್ರಶ್ನಾರ್ಥಕ ಚಿಹ್ನೆಗಳಾಗಿವೆ.

37,00 ಚದರ ಕಿಮೀ.ರಷ್ಟು ಕರಗಿದೆ ಮಂಜು

37,00 ಚದರ ಕಿಮೀ.ರಷ್ಟು ಕರಗಿದೆ ಮಂಜು

ಅಧ್ಯಯನದ ಪ್ರಮುಖ ಲೇಖಕ JPL ವಿಜ್ಞಾನಿ ಚಾಡ್ ಗ್ರೀನ್ ಪ್ರಕಾರ, ಕಳೆದ ಕಾಲು ಶತಮಾನದಲ್ಲಿ ಅಂಟಾರ್ಕ್ಟಿಕಾದ ಮಂಜುಗಡ್ಡೆಯು 37,00 ಚದರ ಕಿಮೀ ((14,300 ಚದರ ಮೈಲಿ) ರಷ್ಟು ಕುಗ್ಗಿದೆ. ಈ ಖಂಡದಲ್ಲಿನ ಹಿಮದ ಹಾಳೆಗಳ ಗಾತ್ರದ ಬಗ್ಗೆ ಹೇಳುವುದಾದರೆ, ಇದು ಸ್ವಿಟ್ಜರ್ಲೆಂಡ್‌ನ ಸಂಪೂರ್ಣ ಪ್ರದೇಶಕ್ಕೆ ಸಮನಾಗಿದೆ.

ಇದು ಸುಧಾರಿಸುವ ಸಮಯ

ಇದು ಸುಧಾರಿಸುವ ಸಮಯ

ಸ್ಯಾಟಲೈಟ್ ಆಲ್ಟಿಮೀಟರ್‌ಗಳಿಂದ ಮಂಜುಗಡ್ಡೆಯ ಚಿತ್ರಗಳ ಬದಲಾವಣೆಯ ಪ್ರಕಾರ, NASA ವರದಿ ಮಾಡಿದಂತೆ, ಆದಾಗ್ಯೂ ಇತ್ತೀಚಿನ ದಶಕಗಳಲ್ಲಿ ಬಿಸಿಯಾಗುತ್ತಿರುವ ಸಾಗರಗಳು ಕೆಳಗಿನಿಂದ ಐಸ್ ಶೆಲ್ಫ್ ನ್ನು ದುರ್ಬಲಗೊಳಿಸಿವೆ. 2002 ರಿಂದ 2020 ರವರೆಗೆ ಪ್ರತಿ ವರ್ಷ ಸರಾಸರಿ 149 ಮಿಲಿಯನ್ ಟನ್ಗಳಷ್ಟು ಮಂಜುಗಡ್ಡೆಯ ದಪ್ಪ ಪದರಗಳ ನಷ್ಟವಾಗಿದೆ. ಈ ವರದಿಗಳನ್ನು ನೋಡಿದರೆ, ಮುಂಬರುವ ದಿನಗಳಲ್ಲಿ ಪ್ರಕೃತಿ ವಿನಾಶದ ಹೊಸ ಸ್ಕ್ರಿಪ್ಟ್ ಬರೆಯಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ನಾವು ಈ ಸಮಯಕ್ಕೆ ಸುಧಾರಿಸದಿದ್ದರೆ, ಪ್ರಕೃತಿಯು ನಮಗೆ ಸುಧಾರಿಸಲು ಅವಕಾಶವನ್ನು ನೀಡುವುದಿಲ್ಲ ಮತ್ತು ನಂತರ ಮಾನವ ನಾಗರಿಕತೆಯು ಭೂಮಿಯಿಂದ ನಾಶವಾಗುತ್ತದೆ.

Recommended Video

ಭ್ರಷ್ಟರ ಬೇಟೆಯಾಡೋಕೆ ಮತ್ತೆ ರೆಡಿಯಾದ ಲೋಕಾಯುಕ್ತ: ಹಾಗಾದ್ರೆ ACB ಕತೆಯೇನು? | Oneindia Kannada

English summary
The world's largest ice cap in Antarctica has been melting rapidly over the past 25 years. It is said that it could end human existence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X