ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂದಲು ಕತ್ತರಿಸಿ ಹಿಜಾಬ್‌ ವಿರುದ್ಧ ಪ್ರತಿಭಟಿಸಿದ ಮತ್ತೊಬ್ಬ ಇರಾನ್ ಮಹಿಳೆ: ಹಾರ್ನ್ ಮಾಡಿ ಜನರ ಬೆಂಬಲ

|
Google Oneindia Kannada News

ಇರಾನ್ ಮಹಿಳೆಯೊಬ್ಬರು ರಾಜಧಾನಿ ಟೆಹ್ರಾನ್‌ನಲ್ಲಿ ಸಾರ್ವಜನಿಕವಾಗಿ ತನ್ನ ಕೂದಲನ್ನು ಕತ್ತರಿಸುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವೇಳೆ ಮಹಿಳೆಗೆ ಜನ ಹಾರ್ನ್‌ ಮಾಡುವ ಮೂಲಕ ಬೆಂಬಲ ನೀಡಿದ್ದಾರೆ. 22 ವರ್ಷದ ಮಹ್ಸಾ ಅಮಿನಿಯ ಕಸ್ಟಡಿಯಲ್ ಸಾವಿನ ನಂತರ ಮಹಿಳೆಯು ತಮ್ಮ ಕೂದಲನ್ನು ಕತ್ತರಿಸುವ ಮತ್ತು ತಮ್ಮ ಹಿಜಾಬ್‌ಗಳಿಗೆ ಬೆಂಕಿ ಹಚ್ಚುವ ವಿಡಿಯೋ ಬಹಿರಂಗಗೊಂಡಿತ್ತು. ಅದಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ಇತರರನ್ನು ಅನುಸರಿಸುವಂತೆ ಮಾಡಿದೆ.

ಇರಾನ್‌ನ 22 ವರ್ಷದ ಮಹಿಳೆ ಮಹ್ಸಾ ಅಮಿನಿಯ ಹಿಜಾಬ್ ಧರಿಸದೆ ಬಂಧನಕ್ಕೊಳಗಾಗಿ ಸಾವನ್ನಪ್ಪಿದ ಬಳಿಕ ಇರಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಅಮಿನಿಯ ಕುಟುಂಬಸ್ಥರು ಘಟನೆಯನ್ನು ಖಂಡಿಸಿದ್ದು, ಮಹಿಳೆಯೊಬ್ಬಳು ತಮ್ಮ ಕೂದಲನ್ನು ಕತ್ತರಿಸಿ, ಹಿಜಾಬ್‌ ಅನ್ನು ಸುಟ್ಟು ಹಾಕಿ ಘಟನೆ ವಿರುದ್ಧ ಪ್ರತಿಭಟಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಂಡಿದ್ದು, ಕಡ್ಡಾಯ ಮುಸುಕಿನ ವಿರುದ್ಧ ಪ್ರತಿಭಟಿಸಲು ಮಹಿಳೆಯರು ಹಿಜಾಬ್‌ಗಳನ್ನು ಸುಡುವ ಹಾಗೂ ತಲೆ ಕೂದಲನ್ನು ಕತ್ತರಿಸುವ ವಿಡಿಯೋಗಳು ಬಹಿರಂಗಗೊಂಡಿವೆ.

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:

ವಿಡಿಯೋದಲ್ಲಿ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಕೂದಲನ್ನು ಕತ್ತಿರಿಸಿಕೊಂಡು ಹಿಜಾಬ್ ವಿರುದ್ಧ ಪ್ರತಿಭಟಿಸಿದ್ದಾಳೆ. ಮಹಿಳೆಗೆ ಬೆಂಬಲವಾಗಿ ಜನ ತಮ್ಮ ವಾಹನಗಳ ಹಾರ್ನ್‌ ಮಾಡಿರುವುದು ಕಂಡು ಬಂದಿದೆ.

Another Iranian woman who cut her hair and protested against the hijab

ಕಳೆದ ವಾರ ಟೆಹ್ರಾನ್‌ನಲ್ಲಿ ಬಂಧನಕ್ಕೊಳಗಾಗಿ ಕೋಮಾಕ್ಕೆ ಹೋಗಿದ್ದ ಮಹ್ಸಾ ಅಮಿನಿ ನಿಧನರಾದರು. ಮಾಧ್ಯಮ ವರದಿಗಳ ಪ್ರಕಾರ ಆಕೆ ಹಿಜಾಬ್ (ತಲೆ ಸ್ಕಾರ್ಫ್) ಧರಿಸದ ದೋಷದಿಂದ ನೈತಿಕತೆಯ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಬಳಿಕ ಆಕೆಗೆ ಹೃದಯಾಘಾತವಾಯಿತು. ಅಮಿನಿಯ ಸಾವು ಭಾರಿ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಸಾವಿರಾರು ಇರಾನಿನ ಮಹಿಳೆಯರು ರಾಜಧಾನಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಕುರ್ದಿಸ್ತಾನ್ ಪ್ರದೇಶದ ಆಕೆಯ ಹುಟ್ಟೂರಾದ ಸಾಕೆಜ್‌ನಲ್ಲಿ ಅಮಿನಿಯ ಅಂತ್ಯಕ್ರಿಯೆಯಲ್ಲೂ ಪ್ರತಿಭಟನೆಗಳು ಭುಗಿಲೆದ್ದವು. ಪೊಲೀಸರು ಸಾಕೆಜ್‌ನಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಿದ್ದರು.

ಕಟ್ಟುನಿಟ್ಟಾದ ಡ್ರೆಸ್ ಕೋಡ್

ಇರಾನ್‌ನ ಷರಿಯಾ ಅಥವಾ ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿ, ಏಳು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತಮ್ಮ ಉದ್ದವಾದ ಕೂದಲನ್ನು ಮತ್ತು ಮುಖವನ್ನು ಮುಚ್ಚುವಂತ ನಿರ್ಬಂಧಗಳಿವೆ. ಜುಲೈ 5 ರಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಹಿಜಾಬ್ ಕಾನೂನನ್ನು ಜಾರಿಗೊಳಿಸಲು ಆದೇಶಿಸಿದ ನಂತರ ಮಹಿಳೆಯರು ಹೇಗೆ ಬಟ್ಟೆ ಧರಿಸಬೇಕು ಎಂಬ ನಿರ್ಬಂಧಗಳಿವೆ. ಒಂದು ವೇಳೆ ಧರಿಸದ ನಡೆದುಕೊಳ್ಳದ ಅಪರಾಧಿಗಳು ಸಾರ್ವಜನಿಕ ಖಂಡನೆ, ದಂಡ ಅಥವಾ ಬಂಧನವನ್ನು ಎದುರಿಸುತ್ತಾರೆ.

English summary
An Iranian woman cuts her hair in public in the capital, Tehran, and people supported to the woman by honked the horn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X