ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ ನಡುವೆ ಮತ್ತೊಂದು ವೈರಸ್ಸಿಗೆ ವ್ಯಕ್ತಿ ಬಲಿ

|
Google Oneindia Kannada News

ಬೀಜಿಂಗ್‌, ಮಾರ್ಚ್ 24: ಕೊರೊನಾವೈರಸ್ ಸೋಂಕು ತಗುಲಿ ಕೊವಿಡ್19ಗೆ ವಿಶ್ವದೆಲ್ಲೆಡೆ ಸಾವಿರಾರು ಮಂದಿ ಮೃತರಾಗುತ್ತಿದ್ದಾರೆ. ಈ ನಡುವೆ ಚೀನಾದಲ್ಲಿ ಮತ್ತೊಂದು ವೈರಸ್ ತನ್ನ ಮೊದಲ ಬಲಿ ಪಡೆದುಕೊಂಡಿದೆ. ಚೀನಾದ ಯುನ್ನಾನ್ ಪ್ರಾಂತ್ಯದ ವ್ಯಕ್ತಿಯೊಬ್ಬ ಬಸ್ ನಲ್ಲಿ ಪ್ರಯಾಣಿಸುವಾಗ ಮೃತರಾಗಿದ್ದಾರೆ. ಆತ ಈ ವೈರಸ್ ನಿಂದ ಪೀಡಿತನಾಗಿದ್ದ ಎಂದು ತಿಳಿದು ಬಂದಿದೆ. ಹ್ಯಾಂಟವೈರಸ್(Hantavirus) ಎಂದು ಕರೆಯಲಾಗುವ ಈ ವೈರಸ್ ಸೋಂಕು, ಆ ಬಸ್ ನಲ್ಲಿದ್ದ ಇತರೆ ಪ್ರಯಾಣಿಕರಿಗೆ ಹರಡಿರುವ ಶಂಕೆ ವ್ಯಕ್ತವಾಗಿದೆ.

ಕೊರೊನಾವೈರಸ್ ನಂತೆ ಹ್ಯಾಂಟ ವೈರಸ್‌ ಕೂಡಾ ಮನುಷ್ಯರ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರುತ್ತದೆ. ಯುನ್ನಾನ್ ಪ್ರಾಂತ್ಯದ ವ್ಯಕ್ತಿ ಸೋಮವಾರದಂದು ಕೆಲಸ ನಿಮಿತ್ತ ಶಂಡಾಂಗ್‌ ಪ್ರಾಂತ್ಯಕ್ಕೆ ಬಸ್‌ನಲ್ಲಿ ತೆರಳುತ್ತಿದ್ದಾಗ ಮೃತರಾಗಿದ್ದಾರೆ. ಬಸ್ ನಲ್ಲಿ ಇನ್ನು 32 ಮಂದಿ ಇದ್ದರು ಎಲ್ಲರಲ್ಲೂ ವೈರಸ್ ಸೋಂಕು ಇರುವ ಶಂಕೆಯಿದೆ ಎಂದು ಚೀನಾದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ.

ಈ ಸುದ್ದಿ ಹೊರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಂಟವೈರಸ್‌ ಅಂದರೇನು? ಇದರಿಂದ ಏನು ತೊಂದರೆ? ಏನು ಮುಂಜಾಗ್ರತೆ ವಹಿಸಬೇಕು? ಲಸಿಕೆ ಇದೆಯೇ? ಎಂಬ ಪ್ರಶ್ನೆಗಳೊಂದಿಗೆ ಹುಡುಕಾಟ ಶುರುವಾಗಿದೆ.

Hantavirus kills one in Yunnan Province China

ಹ್ಯಾಂಟವೈರಸ್ ಸಾಮಾನ್ಯವಾಗಿ ಇಲಿಗಳಿಂದ ಹರಡುತ್ತದೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದರೆ ಇಲಿಗಳ ಮಲ, ಮೂತ್ರ, ಲಾಲಾರಸ ಸ್ಪರ್ಷಿಸಿ ನಂತರ ಕಣ್ಣು, ಮೂಗು, ಬಾಯಿ ಸ್ಪರ್ಶಿಸಿದರೆ ಆ ವ್ಯಕ್ತಿಗಳಿಗೆ ಈ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅರ್ಜೆಂಟೀನಾ, ಚಿಲಿಯಲ್ಲಿ ಒಂದೆರಡು ಅಪರೂಪದ ಪ್ರಕರಣಗಳನ್ನು ಬಿಟ್ಟರೆ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಕ್ಷೀಣ.

ಈ ವೈರಾಣು ತಗುಲಿದರೆ ಆರಂಭದಲ್ಲಿ ಜ್ವರ, ತಲೆನೋವು, ಸ್ನಾಯುಗಳಲ್ಲಿ ನೋವು, ಹೊಟ್ಟೆನೋವು, ತಲೆತಿರುಗುವಿಕೆ, ಶೀತ ಮತ್ತು ವಾಕರಿಕೆ, ವಾಂತಿ, ಅತಿಸಾರದಂಥ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಂತರದ ದಿನಗಳಲ್ಲಿ ಶ್ವಾಸಕೋಶಗಳಿಗೆ ನೀರು ತುಂಬಿಕೊಳ್ಳುವುದು, ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಈ ವೇಳೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.

English summary
A person from Yunnan Province died while on his way back to Shandong Province for work on a chartered bus on Monday. He was tested positive for #hantavirus. Other 32 people on bus were tested reports Global Times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X