ಐಸಿಸ್ ಸರ್ವನಾಶಕ್ಕೆ ಪಣತೊಟ್ಟ ವೀರ ಯೋಧ ಅಬು
ಐಸಿಸ್, ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ. ಇದೊಂದು ಉಗ್ರ ಸಂಘಟನೆ. ಇರಾಕ್, ಸಿರಿಯಾ ಮತ್ತು ಲಿಬಿಯಾ ದೇಶಗಳ ಮೇಲೆ ಯುದ್ಧ ಸಾರಿ, ಅಲ್ಲಿಯ ಜನರ ರಕ್ತದ ಜತೆ ಜಲ್ಲಾಟವಾಡಿ, ಆ ದೇಶಗಳ ಮೇಲೆ ಪ್ರಭುತ್ವ ಸಾರಿರುವ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇದು.
ಇಸಿಸ್ ಬಳಿ ಅತ್ಯಾಧುನಿಕ ತಂತ್ರಜ್ಞಾನದ ಯುದ್ಧೋಪಕರಣಗಳಿವೆ. ಬಲಾಢ್ಯ ಮಿಲಿಟರಿ ಶಕ್ತಿ ಇದೆ. ವಿಶ್ವದ ಮುಂದುವರೆದ ರಾಷ್ಟ್ರಗಳೆನಿಸಿರುವ ಅಮೆರಿಕಾ, ರಷ್ಯಾ ದಂಥ ರಾಷ್ಟಗಳಿಗೆ ಈ ಸಂಘಟನೆ ಒಂದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. [ಉಗ್ರರ ಕಣ್ಣು ದಕ್ಷಿಣ ಭಾರತದ ಮೇಲೆ ಏಕಿದೆ?]
ಇತ್ತೀಚೆಗೆ ಈ ಇಸಿಸ್ ಉಗ್ರ ಸಂಘಟನೆಯು ಪ್ಯಾರಿಸ್ ಮತ್ತು ಪಶ್ಚಿಮ ಆಫ್ರಿಕಾದ ಮಾಲಿ ಮೇಲೆ ದಾಳಿ ಮಾಡಿ, ರಕ್ತಪಾತ ನಡೆಸಿದೆ. ಇಂಥ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇರಾಕ್‌ನ ಓರ್ವ ಯೋಧನ ಹೆಸರು ಕೇಳಿದ್ರೆ ಸಾಕು ಬೆಚ್ಚಿ ಬೀಳುತ್ತದೆ. [ಉಗ್ರರಿಂದ ಬಚಾವಾದ ಶಿಕ್ಷಕ ವಿಜಯ್ ಹೇಳಿದ ಕಿಡ್ನಾಪ್ ಕಥೆ]

'ಡೆತ್ ಆಫ್ ಏಂಜೆಲ್'
ಯಾವಾಗಲೂ ಒಂದು ಕೈಯಲ್ಲಿ ಅತ್ಯಾಧುನಿಕ ಬಂದೂಕು ಮತ್ತೊಂದು ಕೈಯಲ್ಲಿ ಕೊಡಲಿ ಹಿಡಿದುಕೊಂಡು, ಸೈನಿಕನ ವೇಷ ಧರಿಸಿಕೊಂಡು ಇಸಿಸ್ ವಿರುದ್ಧ ಸಮರಕ್ಕೆ ಸಿದ್ಧವಾಗಿರುವ, 'ಡೆತ್ ಆಫ್ ಏಂಜೆಲ್'

ಹೆಸರು ಕೇಳಿದ್ರೆ ಸಾಕು ಇಸಿಸ್ ನಡುಗುತ್ತೆ
ಶಿಯಾ ಮುಸ್ಲಿಂ ಸಂಘಟನೆ "ದಿ ಇಮಾಮ್ ಅಲಿ ಬ್ರಿಗೇಡ್ ಸಂಘಟನೆ"ಯ ಮುಖ್ಯಸ್ಥ ಅಬು ಅಜ್ರೇಲ್ ಎನ್ನುವ ಯೋಧನ ಹೆಸರು ಕೇಳಿದ್ರೆ ಸಾಕು ಇಸಿಸ್ ನಡುಗಿ ಹೋಗುತ್ತೆ

ಇಸಿಸ್ ವಿರುದ್ಧ ಸಮರ ಸಾರಿದ್ದಾನೆ
ಈತ ತನ್ನದೇ ಆದ ಒಂದು ಸೈನ್ಯವನ್ನು ಕಟ್ಟಿ ಇಸಿಸ್ ವಿರುದ್ಧ ಸಮರ ಸಾರಿದ್ದಾನೆ. ಇರಾಕ್ ಮತ್ತು ಸಿರಿಯಾ ದೇಶಗಳಲ್ಲಿ ಇಸಿಸ್ ನಡೆಸುತ್ತಿರುವ ದುಷ್ಕೃತ್ಯಗಳಿಗೆ ನಾಂದಿ ಹಾಡಲು ಶಪಥ ತೊಟ್ಟಿದ್ದಾನೆ. ಈವರೆಗೂ ಈತ ಬರೋಬ್ಬರಿ 1,500 ಇಸಿಸ್ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಅಂಕಿ-ಅಂಶಗಳು ಹೇಳುತ್ತಿವೆ

ಅಬು ಅಜ್ರೇಲ್ ವೀಡಿಯೊ ಜನಪ್ರಿಅಯ್
ಕಳೆದ ಮಾರ್ಚ್ ನಲ್ಲಿ ಅಬು ಅಜ್ರೇಲ್ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಈ ವೀಡಿಯೊದಲ್ಲಿ ಇಸಿಸ್ ಸಂಘಟನೆಯ ಕೃತ್ಯಗಳ ಬಗ್ಗೆ ಹರಿಹಾಯ್ದಿದ್ದಾನೆ. ಈ ಎಲ್ಲಾ ಕಾರಣಗಳಿಗೆ ಇರಾಕ್‌ನ ಪ್ರಜೆಗಳು ಈತನನ್ನು ಪ್ರೀತಿಯಿಂದ ಇರಾಕಿ ರ್ಯಾಂಬೋ(Rambo) ಎನ್ನುತ್ತಾರೆ. ಅಷ್ಟೇ ಅಲ್ಲ ಈತನ ವ್ಯಕ್ತಿತ್ವಕ್ಕೆ ಮಾರು ಹೋಗಿರುವ ಎಷ್ಟೋ ಯುವಕರು ಈತನ ಸಂಘಟನೆ ಸೇರಲು ಬಯಸುತ್ತಿದ್ದಾರೆ.

ಅಬು ಅಜ್ರೇಲ್ ಸಂದೇಶಗಳು ಫೇಮಸ್
'ನಾನು ಎಂದೂ ಸಾವಿಗೆ ಹೆದರುವುದಿಲ್ಲ. ನಾನು ಸಾಯುವುದಕ್ಕೆ ಸಿದ್ದನಾಗಿದ್ದೆ. ನನ್ನ ಜೀವನದ ಗುರಿ ಏನಿದ್ದರು, ಅದು ಇಸಿಸ್ ಉಗ್ರ ಸಂಘಟನೆಯನ್ನು ಸರ್ವನಾಶಗೊಳಿಸುವುದು ಮಾತ್ರ' ಎನ್ನುತ್ತಾನೆ ಈ ಧೀರ ಯೋಧ. ಈತನ ಬಗ್ಗೆ ಫೇಸ್ ಬುಕ್ ಪುಟಗಳು ಹುಟ್ತಿಕೊಂಡಿದ್ದು, ಎಲ್ಲೆಡೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಅಬು ಅಜ್ರೇಲ್ ಸೈನ್ಯದ ಬಗ್ಗೆ ವಿಡಿಯೋ
ಇಸಿಸ್ ಗೆ ದುಃಸ್ವಪ್ನವಾಗಿರುವ ಅಬು ಅಜ್ರೇಲ್ ತನ್ನ ಗುರಿ ಹಾಗೂ ಸೈನ್ಯದ ಬಗ್ಗೆ ಪರಿಚಯ ಮಾಡುವ ವಿಡಿಯೋ ಇಲ್ಲಿದೆ












Click it and Unblock the Notifications