ಭೂಮಿ-ಚಂದ್ರನನ್ನು ಹಾದುಹೋಗಲಿದೆ ಪುಟ್ಟ ಕ್ಷುದ್ರಗ್ರಹ

Posted By:
Subscribe to Oneindia Kannada

ಕ್ಯಾಲಿಫೋರ್ನಿಯಾ, ಫೆಬ್ರವರಿ 9: ಪುಟ್ಟ ಕ್ಷುದ್ರಗ್ರಹವೊಂದು ಭೂಮಿ ಮತ್ತು ಚಂದ್ರನನ್ನು ಹಾದುಹೋಗಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ. ಫೆ.9ರ ಸಂಜೆ 5:30 (EST)ಕ್ಕೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ ಫೆ.10 ರ ಬೆಳಿಗ್ಗಿನ ಜಾವ 4:00 ಗಂಟೆಗೆ ಈ ಖಗೋಳ ವಿಸ್ಮಯ ನಡೆಯಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ.

ಈ ಕ್ಷುದ್ರಗ್ರಹ 50 ರಿಂದ 130 ಅಡಿ ಅಗಲವಿದ್ದು, ಭೂಮಿಯಿಂದ ಕೇವಲ 39,000 ಮೈಲಿ ದೂರದಿಂದ ಹಾದುಹೋಗಲಿದೆ.

ವಿಶ್ವದೆಲ್ಲೆಡೆ ವಿಜೃಂಭಿಸಿದ ಅದ್ಭುತ ಚಂದ್ರಗ್ರಹಣದ 9 ದೃಶ್ಯ

ಫೆ.6 ರಂದಷ್ಟೇ 2018 CC ಎಂಬ ಹೆಸರಿನ ಕ್ಷುದ್ರಗ್ರಹವೊಂದು ಭೂಮಿಯಿಂದ ಕೇವಲ 114000 ಅಡಿ ದೂರದಿಂದ ಹಾದುಹೋಗಿತ್ತು. ಇದು 50 ರಿಂದ 100 ಅಡಿ ಅಗಲವಿತ್ತು.

An asteroid will pass by Earth and Moon on friday

ಭಾರತೀಯ ಕಾಲಮಾನದ ಪ್ರಕಾರ ನಾಳೆ ಬೆಳಿಗ್ಗೆ ಕಾಣಿಸಿಕೊಳ್ಳಲಿರುವ ಕ್ಷುದ್ರಗ್ರಹದ ಹೆಸರು 2018 CB. ಇದು ಭೂಮಿಗೆ ಬಹಳ ಹತ್ತಿರದವರೆಗೂ ಆಗಮಿಸುತ್ತಿರುವುದರಿಂದ ವಿಶೇಷವಾದ್ದು ಅನ್ನಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An asteroid between 50 and 130 feet wide will fly by the Earth on Feb 9th, 5:30( IST Feb 10th 4am) on a path closer than the moon's, NASA said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ