ತಜಿಕಿಸ್ತಾನಕ್ಕೆ ಹಾರಿದ್ದಾರೆ ಅಮ್ರುಲ್ಲಾ ಸಾಲೇಹ್ ಎಂದ ತಾಲಿಬಾನ್
ತಾಲಿಬಾನ್ ಪಂಜ್‌ಶೀರ್‌ನ್ನು ವಶಪಡಿಸಿಕೊಂಡ ಬಳಿಕ ಅಫ್ಘಾನ್ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಾಲೇಹ್ ತಜಿಕಿಸ್ತಾನಕ್ಕೆ ಹಾರಿದ್ದಾರೆ ಎಂದು ತಾಲಿಬಾನ್ ಹೇಳಿದೆ.
ಅಫ್ಘಾನಿಸ್ತಾನದ ಪಂಜಶೀರ್ ಪ್ರಾಂತ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ, ತಾಲಿಬಾನ್ ಪಡೆಗಳು ಪಂಜ್‌ಶಿರ್ ಪ್ರಾಂತ್ಯವನ್ನು ವಶಪಡಿಸಿಕೊಂಡಿವೆ ಎಂದು ಸೋಮವಾರ ಹೊಸ ಹೇಳಿಕೆಯಲ್ಲಿ ಹೇಳಿಕೊಂಡಿದೆ. ಇದು ದೇಶದ ಕೊನೆಯ ಪ್ರತಿರೋಧದ ಭದ್ರಕೋಟೆ ಆಗಿತ್ತು ಎಂಬುದು ಗಮನಾರ್ಹವಾಗಿದೆ.
ದೇಶದಲ್ಲಿ ಸಂಪೂರ್ಣ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಇತ್ತೀಚಿನ ಪ್ರಯತ್ನಗಳು ಫಲಿತಾಂಶಗಳನ್ನು ತಂದಿವೆ ಮತ್ತು ತಾಲಿಬಾನ್ ಪಡೆಗಳು ಪಂಜ್‌ಶಿರ್ ಪ್ರಾಂತ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸುದ್ದಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಪಂಜ್‌ಶೀರ್ ಪ್ರತಿರೋಧದ ವಕ್ತಾರ ಫಾಹೀಮ್ ದಷ್ಟಿ ಅವರು ಭಾನುವಾರ ತಾಲಿಬಾನ್ ಜೊತೆಗಿನ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾದ ಕೆಲವೇ ಗಂಟೆಗಳಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ಏತನ್ಮಧ್ಯೆ, ತಾಲಿಬಾನ್ ಪಡೆಗಳು ಪಂಜ್‌ಶೀರ್ ಪ್ರಾಂತ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಿದೆ. ಇಲ್ಲಿಯವರೆಗೆ, ಅಫ್ಘಾನಿಸ್ತಾನದ ಪಂಜ್‌ಶಿರ್ ಕಣಿವೆಯಲ್ಲಿ ಪಂಜ್‌ಶಿರ್ ರೆಸಿಸ್ಟೆನ್ಸ್ ಫೋರ್ಸ್ ನಿರಂತರವಾಗಿ ತಾಲಿಬಾನ್ ವಿರುದ್ಧ ಹೋರಾಡುತ್ತಿತ್ತು ಎಂದು ಟೊಲೋ ನ್ಯೂಸ್ ಟ್ವೀಟ್ ಮಾಡಿದೆ.
22 ದಿನಗಳ ಹಿಂದೆ 15 ನೇ ತಾರೀಖಿನಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತ್ತು ಮತ್ತು ಪಂಜಶೀರ್ ಕಣಿವೆ ಮಾತ್ರ ತಾಲಿಬಾನ್ ವಿರುದ್ಧ ತೊಡೆ ತಟ್ಟಿ ನಿಂತಿತ್ತು. ಪಂಜಶೀರ್ ವ್ಯಾಲಿ ತಾಲಿಬಾನ್ ವಿರುದ್ಧದ ಹೋರಾಟವನ್ನು ಇಲ್ಲಿಯವರೆಗೆ ಪ್ರತಿರೋಧ ಪಡೆ ಮುಂದುವರಿಸಿತ್ತು. ಆಗಸ್ಟ್ 15ರಂದು ಕಾಬೂಲ್ ಪತನದ ನಂತರ ಪಂಜ್‌ಶಿರ್ ಪ್ರಾಂತ್ಯವು ಪ್ರತಿರೋಧದ ಪಡೆಗಳ ನೇತೃತ್ವದ ಏಕೈಕ ಪ್ರತಿಭಟನಾ ಕೇಂದ್ರವಾಗಿತ್ತು.
ಪಂಜ್‌ಶೀರ್ ಪ್ರಾಂತ್ಯವು ಅಹ್ಮದ್ ಮಸೂದ್ ಮತ್ತು ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಾಲೇಹ್ ನೇತೃತ್ವದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ನ ಭದ್ರಕೋಟೆಯಾಗಿದೆ.
ಅಮರುಲ್ಲಾ ಸಾಲೇಹ್ ತಾಲಿಬಾನ್ ಒತ್ತಡ ಹಾಗೂ ಭೀತಿಯಿಂದ ತಜಕಿಸ್ತಾನಕ್ಕೆ ಹಾರಿದ್ದಾರೆ ಎಂದು ಪಂಜಶೀರ್ ಕಮಾಂಡೋ ಹೇಳಿದ್ದಾರೆ. ಪಂಜಶೀರ್ ಯೋಧರು ಆಫ್ಘಾನಿಸ್ತಾನದ ಜನರ ಹಕ್ಕು ರಕ್ಷಿಸಲಿದೆ. ತಾಲಿಬಾನ್ ಅಸಲಿ ಮುಖ ಹೊರಬರುತ್ತಿದೆ ಎಂದು ಪಂಜಶೀರ್ ಕಮಾಂಡೋ ಹೇಳಿದ್ದಾರೆ.ಪಂಜ್‌ಶೀರ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವಾಗಲೇ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್, 'ನಾನು ಎಂದಿಗೂ ತಾಲಿಬಾನ್‌ಗೆ ಶರಣಾಗತನಾಗುವುದಿಲ್ಲ. ಒಂದು ವೇಳೆ ಗಾಯಗೊಂಡು ಶರಣಾಗತನಾಗುವ ಪರಿಸ್ಥಿತಿ ಉದ್ಭವಿಸಿದರೆ ತನ್ನ ತಲೆಗೆ ಗುಂಡಿಟ್ಟು ಹತ್ಯೆ ಮಾಡಿಬಿಡು' ಎಂದು ತಮ್ಮ ಅಂಗರಕ್ಷಕನಿಗೆ ಸೂಚನೆ ನೀಡಿದ್ದಾರೆ.
ಕಾಬೂಲ್ ತಾಲಿಬಾನಿಗಳ ವಶವಾಗಿದ್ದು ಹೇಗೆ ಎಂಬ ಕುರಿತು ಡೈಲಿ ಮೇಲ್ ವೆಬ್‌ಸೈಟ್‌ನಲ್ಲಿ ಲೇಖನ ಬರೆದಿರುವ ಸಲೇಹ್, 'ಮಾಜಿ ಅಧ್ಯಕ್ಷ ಅಶ್ರಫ್ ಘನಿ ಮತ್ತು ಇತರ ಅಧಿಕಾರಿಗಳು ದೇಶಬಿಟ್ಟು ಪರಾರಿ ಆಗುವ ಮೂಲಕ ಜನತೆಗೆ ದ್ರೋಹ ಎಸಗಿದ್ದಾರೆ.
ಅವರು ವಿದೇಶಿ ಹೋಟೆಲ್ ಮತ್ತು ವಿಲ್ಲಾಗಳಲ್ಲಿ ಉಳಿದುಕೊಂಡಿದ್ದಾರೆ ಮತ್ತು ಅಫ್ಘಾನಿಸ್ತಾನ ಜನರ ಬಳಿ ದಂಗೆ ಏಳುವಂತೆ ಕರೆ ನೀಡಿದ್ದಾರೆ. ಆದರೆ, ಇದು ಹೇಡಿತನ ಕೃತ್ಯ. ನಾವು ದಂಗೆಯನ್ನು ಬಯಸಿದರೆ ದಂಗೆಯನ್ನು ಸ್ವತಃ ಮುನ್ನಡೆಸಬೇಕು' ಎಂದು ಹೇಳಿದ್ದಾರೆ.
ಇದೇ ವೇಳೆ ತಾವು ಕಾಬೂಲ್ ಅನ್ನು ಬಿಡುವಾಗಿನ ಸನ್ನಿವೇಶವನ್ನು ವಿವರಿಸಿರುವ ಸಲೇಹ್, ಕಾಬೂಲ್ ಬಿಡುವುದಕ್ಕೂ ಮುನ್ನ ನಾನು ಮುಖ್ಯ ಕಾವಲುಗಾರನನ್ನು ಕರೆದು, 'ನಾವು ಪಂಜ್‌ಶೀರ್‌ಗೆ ತೆರಳುತ್ತಿದ್ದೇವೆ. ನಮ್ಮ ದಾರಿಯನ್ನು ಈಗಾಗಲೇ ನಿರ್ಧರಿಸಿ ಆಗಿದೆ.
ಒಂದು ವೇಳೆ ನಾನೇನಾದರೂ ಗಾಯಗೊಂಡರೆ, ನನ್ನ ತಲೆಗೆ ಎರಡು ಬಾರಿ ಗುಂಡು ಹಾರಿಸು. ನಾನು ಎಂದಿಗೂ ತಾಲಿಬಾನಿಗಳಿಗೆ ಶರಣಾಗಲು ಬಯಸುವುದಿಲ್ಲ' ಎಂದು ತಿಳಿಸಿರುವುದಾಗಿಯೂ ತಮ್ಮ ಲೇಖನದಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications