ಕಾಬೂಲ್ : ಅಮೆರಿಕದ ವಿವಿ ಮೇಲೆ ದಾಳಿ, 12 ಜನ ಸಾವು

Posted By:
Subscribe to Oneindia Kannada

ಕಾಬೂಲ್, ಆಗಸ್ಟ್ 24: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿರುವ ಅಮೆರಿಕನ್ ವಿಶ್ವವಿದ್ಯಾಲಯ ಮೇಲೆ ಬುಧವಾರ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಇನ್ನೂ ಹೊತ್ತುಕೊಂಡಿಲ್ಲ. ನೂರಾರು ಮಂದಿ ವಿಶ್ವವಿದ್ಯಾಲಯದ ಕಟ್ಟಡದಲ್ಲಿರುವ ಶಂಕೆ ವ್ಯಕ್ತವಾಗಿದೆ.

ವಿಶ್ವವಿದ್ಯಾಲಯದಲ್ಲಿ ನಡೆದ ದಾಳಿಯಲ್ಲಿ ಏಳು ಜನ ವಿದ್ಯಾರ್ಥಿಗಳು, 3 ಪೊಲೀಸರು ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 12 ಜನರು ಸಾವನ್ನಪ್ಪಿರುವ ಸಾಧ್ಯತೆ ಕಂಡು ಬಂದಿದೆ. 44 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯದ ಮಾಹಿತಿಯಂತೆ ಕಟ್ಟಡದೊಳಗೆ ಗುಂಡಿನ ಸದ್ದು ಇನ್ನೂ ಕೇಳಿ ಬರುತ್ತಿದ್ದು, ಒಬ್ಬರು ಸಾವನ್ನಪ್ಪಿದ್ದು, 14 ಜನರಿಗೆ ಗಾಯಗಳಾಗಿವೆ.

American University in Kabul, Afghanistan attacked

ಸಿಬಿಎಸ್ ನ್ಯೂಸ್ ನ ವರದಿಯಂತೆ ಅಮೆರಿಕ ಮೂಲದ ಅನೇಕ ಪ್ರೊಫೆಸರ್ ಗಳು, ಸ್ಥಳೀಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಬಂಧಿತರಾಗಿದ್ದಾರೆ.

ಪುಲಿಟ್ಜರ್ ಪ್ರಶಸ್ತಿ ವಿಜೇತ ಅಸೋಸಿಯೇಟ್ ಪ್ರೆಸ್ ಫೋಟೋಗ್ರಾಫರ್ ಮಸೊದ್ ಹೊಸೈನಿ ಸೇರಿದಂತೆ ಹಲವಾರು ಮಂದಿ ತುರ್ತು ನಿರ್ಗಮನ ಬಾಗಿಲಿನಿಂದ ತಪ್ಪಿಸಿಕೊಂಡಿದ್ದಾರೆ.

2012 ರಲ್ಲಿ ಸ್ಥಾಪನೆಗೊಂಡ ಮೊದಲ ಖಾಸಗಿ ವಿಶ್ವವಿದ್ಯಾಲಯ ಇದಾಗಿದ್ದು, ಉನ್ನತ ಶಿಕ್ಷಣ ಪಡೆಯಲು ಸುಮಾರು 1,300 ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
American University in Kabul, Afghanistan attacked.The American University of Afghanistan is Afghanistan's first private, not-for-profit institution of higher education, and as of 2012 had an enrollment of roughly 1,300.
Please Wait while comments are loading...