ಭಾರತೀಯನ ಮೇಲಿನ ಹಲ್ಲೆ ಸತ್ಯ ಬಿಚ್ಚಿಡುವ ವಿಡಿಯೋ
ವಾಷಿಂಗ್ಟನ್, ಫೆ. 13 : ಕೆಲ ದಿನಗಳ ಹಿಂದೆ ಗುಜರಾತ್ ಮೂಲದ ಸುರೇಶ್ ಭಾಯಿ ಪಟೇಲ್(57) ಎಂಬುವರ ಮೇಲೆ ಹಲ್ಲೆ ಮಾಡಿದ್ದ ಅಲಬಾಮಾ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದ್ದು ಹಲ್ಲೆ ನಡೆಯುತ್ತಿರುವ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಹರಿಯಬಿಡಲಾಗಿದೆ.[ಚುಡಾಯಿಸಿದ್ದನ್ನು ಪ್ರಶ್ನಿಸಿದ ಮಣಿಪುರ ವಿದ್ಯಾರ್ಥಿಗೆ ಥಳಿತ]
ಅಮಾನುಷ ಹಲ್ಲೆಯ ವಿರುದ್ಧ ಭಾರತದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ವ್ಯಕ್ತವಾಗಿತ್ತು. ಫೆಬ್ರವರಿ 6ರಂದು ವಾಕಿಂಗ್ ಹೋಗುತ್ತಿದ್ದ ಪಟೇಲ್ ಅವರನ್ನು ಪೊಲೀಸರು ತಡೆದು ಪ್ರಶ್ನಿಸಿದ್ದರು. ಆದರೆ ಇಂಗ್ಲಿಷ್ ಗೊತ್ತಿಲ್ಲದ ಪಟೇಲ್ ಉತ್ತರ ನೀಡಲು ತಡಬಡಾಯಿಸಿದ್ದರು. ಇದನ್ನೇ ಕಾರಣವಾಗಿಸಿಕೊಂಡ ಪೊಲೀಸರು ಅಮಾನುಷವಾಗಿ ಹಲ್ಲೆ ಮಾಡಿದ್ದರು.

ಪಟೇಲ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ ಪೊಲೀಸ್ ಸಿಬ್ಬಂದಿ ಎರಿಕ್ ಪಾರ್ಕರ್ ಅವರನ್ನು ತನಿಖೆ ಆರಂಭ ಮಾಡುವಾಗಲೇ ಅಮಾನತಿನಲ್ಲಿಡಲಾಗಿದ್ದು ಬಳಿಕ ಅವರನ್ನು ನಂತರ ಎಫ್ ಬಿಐ ಬಂಧಿಸಿದೆ.
ಪೊಲೀಸರ ಹಲ್ಲೆಯಿಂದ ಜರ್ಜರಿತರಾದ ಪಟೇಲ್ ಪಾರ್ಶ್ವವಾಯು ಸೆಳೆತಕ್ಕೆ ಒಳಗಾಗಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಟೇಲ್ ಅವರು ಅಮೆರಿಕದ ಶಾಶ್ವತ ನಿವಾಸಿ ಸ್ಥಾನಮಾನ ಹೊಂದಿದ್ದಾರೆ. ಮೊಮ್ಮಗಳನ್ನು ನೋಡಿಕೊಳ್ಳುವುದಕ್ಕೋಸ್ಕರ ಅಮೆರಿಕಕ್ಕೆ ತೆರಳಿದ್ದ ಅವರ ಮೇಲೆ ಹಲ್ಲೆ ನಡೆದಿತ್ತು.[ಮತ್ತೆ ಯುಎಸ್ ಪತ್ರಕರ್ತನ ರುಂಡ ಕತ್ತರಿಸಿದ ಉಗ್ರರು]
ಅಲಬಾಮಾ ಪೊಲೀಸರೇ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸಬೇಕು ಎಂದು ಪಟೇಲ್ ಹೆಂಡತಿ ಶಂಕುಂತಲಾ ಪಟೇಲ್ ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ಕ್ಷಮೆ ಯಾಚಿಸಿರುವ ಪಟೇಲ್ ಮ್ಯಾಡಿಸನ್ ಸಿಟಿಪೊಲೀಸ್ ಮುಖ್ಯಸ್ಥ ಲ್ಯಾರಿ ಮುನ್ಸೇ, ಪಟೇಲ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಅಮೆರಿಕ ಪೊಲೀಸರ ದೌರ್ಜನ್ಯ












Click it and Unblock the Notifications