'ವಿಶ್ವದ ದೊಡ್ಡಣ್ಣ'ನಿಗೆ ಆವಾಜ್ ಹಾಕಿದ ಉಗ್ರಗಾಮಿ ಸಂಘಟನೆಗಳು!
ನ್ಯೂಯಾರ್ಕ್, ಜನವರಿ.02: ವಿನಾಶಕಾಲೇ ವಿಪರೀತ ಬುದ್ಧಿ ಎನ್ನುತ್ತಾರಲ್ಲ. ಪಾಕಿಸ್ತಾನ ಇದೀಗ ಅದೇ ರೀತಿ ವರ್ತಿಸುತ್ತಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾಗೆ ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಬೆದರಿಕೆ ಒಡ್ಡಿವೆ ಎಂಬ ಆಘಾತಕಾರಿ ವಿಚಾರ ಹೊರ ಬಿದ್ದಿದೆ.
ಪಾಕಿಸ್ತಾನ್ ಮೇಲಿನ ವಿಮಾನ ಸಂಚಾರಕ್ಕೆ ಸ್ವತಃ ಅಮೆರಿಕ ತಡೆ ಹಿಡಿದಿದೆ. ಉಗ್ರಗಾಮಿ ಸಂಘಟನೆಗಳು ಅಮೆರಿಕಾದ ವಿಮಾನಗಳ ಮೇಲೆ ದಾಳಿ ನಡೆಸುವ ಬೆದರಿಕೆಯೊಡ್ಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
ಜಮ್ಮುವಿನಲ್ಲಿ ಉಗ್ರರ ದಾಳಿ; ಇಬ್ಬರು ಯೋಧರು ಹುತಾತ್ಮ
ಪಾಕಿಸ್ತಾನ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಗೆಯ ವಿಮಾನಗಳ ಸಂಚಾರವನ್ನು ನಿಲ್ಲಿಸುವಂತೆ ಸ್ವತಃ ಅಮೆರಿಕಾದ ವಿಮಾನಯಾನ ಸಂಸ್ಥೆ ಆದೇಶ ಹೊರಡಿಸಿದೆ. ಪಾಕಿಸ್ತಾನದಲ್ಲೂ ಕೂಡಾ ದೇಶಿ ಹಾಗೂ ವಿದೇಶ ವಿಮಾನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
ಪ್ರತೀಕಾರಕ್ಕೆ ಕಾಯುತ್ತಿದೆಯಾ ಉಗ್ರಗಾಮಿ ಸಂಘಟನೆ?
ಎರಡು ದಿನಗಳ ಹಿಂದೆಯಷ್ಟೇ ಬಾಗ್ದಾದ್ ನಲ್ಲಿರುವ ಅಮೆರಿಕಾ ರಾಯಭಾರಿ ಕಚೇರಿ ಎದುರಿನಲ್ಲಿ ನೆರೆದ ಸಾವಿರಾರು ಪ್ರತಿಭಟನಾಕಾರರು ಅಮೆರಿಕ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಮೆರಿಕಾ ವಾಯುಸೇನೆ ಕಾರ್ಯಾಚರಣೆ ನಡೆಸಿ 24ಕ್ಕೂ ಹೆಚ್ಚು ಇರಾನ್ ಪರ ಹೋರಾಟಗಾರರನ್ನು ಹತ್ಯೆಗೈದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ಡಿಸೆಂಬರ್.29ರ ಬಾನುವಾರ ಅಮೆರಿಕಾದ ವಾಯುಪಡೆ ಕಾರ್ಯಾಚರಣೆ ನಡೆಸಿ ಹಿಜ್ಬುಲ್ ಬ್ರಿಗೇಡ್ ನ ಕತಾಬ್ ಹಿಜ್ಬುಲ್ಲಾ ನನ್ನು ಕೊಂದು ಹಾಕಲಾಗಿತ್ತು. ಈ ಘಟನೆ ಬಳಿಕ ಇರಾಕ್ ನಲ್ಲಿ ಅಮೆರಿಕಾ ವಿರುದ್ಧ ಕೆಲವು ಉಗ್ರಗಾಮಿ ಸಂಘಟನೆಗಳು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದವು.