• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವಿರುದ್ಧ ಹೋರಾಟ; ಭಾರತಕ್ಕೆ 20 ಕೋಟಿ ಕೊಟ್ಟ ಅಮೆರಿಕಾ

|

ವಾಶಿಂಗ್ ಟನ್, ಏಪ್ರಿಲ್.06: ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಪಣ ತೊಟ್ಟಿರುವ ಭಾರತಕ್ಕೆ ಅಮೆರಿಕಾ ಆರ್ಥಿಕ ನೆರವು ನೀಡಲು ಮುಂದಾಗಿದೆ. ಭಾರತದಲ್ಲಿ ಉತ್ಪಾದಿಸುವ ಔಷಧಿ ನೀಡುವಂತೆ ಕೋರಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತಾಗಿ ಭಾರತಕ್ಕೆ ಹಣವನ್ನು ಬಿಡುಗಡೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಕಳೆದ ಮಾರ್ಚ್.28ರಂದು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಂತಾರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ಭಾರತಕ್ಕೆ 20 ಕೋಟಿ 30 ಲಕ್ಷ ರೂಪಾಯಿ (2.9 ಮಿಲಿಯನ್ ಡಾಲರ್) ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಿತ್ತು.

ಸ್ಫೂರ್ತಿಯ ಕಥೆ: ಬೆಂಗಳೂರು ಮೂಲದ ಮಹಿಳೆ ಕೊರೊನಾದಿಂದ ಪಾರುಸ್ಫೂರ್ತಿಯ ಕಥೆ: ಬೆಂಗಳೂರು ಮೂಲದ ಮಹಿಳೆ ಕೊರೊನಾದಿಂದ ಪಾರು

ಭಾರತದಲ್ಲಿನ ಆರೋಗ್ಯ ವಲಯದ ಅಭಿವೃದ್ಧಿಗಾಗಿ 740 ಕೋಟಿ (1.4 ಬಿಲಿಯನ್ ಡಾಲರ್) ಹಣವನ್ನು ಅಮೆರಿಕಾ ನೀಡಿದ್ದು, ಕಳೆದ 20 ವರ್ಷಗಳಲ್ಲಿ ಭಾರತಕ್ಕೆ 1,400 ಕೋಟಿ ರೂಪಾಯಿ (3 ಬಿಲಿಯನ್ ಡಾಲರ್) ಹಣವನ್ನು ಅಮೆರಿಕ ನೀಡಿದೆ ಎಂದು ತಿಳಿದು ಬಂದಿದೆ.

ಕೊರೊನಾ ವೈರಸ್ ಹರಡುವಿಕೆಗೆ ಬ್ರೇಕ್ ಹಾಕಲು ಕ್ರಮ

ಕೊರೊನಾ ವೈರಸ್ ಹರಡುವಿಕೆಗೆ ಬ್ರೇಕ್ ಹಾಕಲು ಕ್ರಮ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕಬೇಕಿದ್ದು ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಈ ಪೈಕಿ 16 ಕೋಟಿ 80 ಲಕ್ಷ (2.4 ಮಿಲಿಯನ್ ಡಾಲರ್) ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಈ ಹಣವನ್ನು ಉಪಯೋಗಿಸಿಕೊಳ್ಳಬಹುದಾಗಿದೆ.

ಅಂತಾರಾಷ್ಟ್ರೀಯ ಸಹಕಾರದಿಂದ ಕೊರೊನಾಗೆ ಕಡಿವಾಣ

ಅಂತಾರಾಷ್ಟ್ರೀಯ ಸಹಕಾರದಿಂದ ಕೊರೊನಾಗೆ ಕಡಿವಾಣ

ಜಾಗತಿಕ ವಲಯದಲ್ಲಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಗೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಸಹಕಾರ ಮುಖ್ಯವಾಗಿದೆ ಎಂದು ಅಮೆರಿಕಾ ರಾಯಭಾರಿ ಕೆನ್ನತ್ ಜಸ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ನಿವಾರಣಾ ಕೇಂದ್ರ ಹಾಗೂ ಆರೋಗ್ಯ ಮತ್ತು ಮಾನವ ಸೇವಾ ಇಲಾಖೆ ಅಧಿಕಾರಿಗಳು ಭಾರತದ ಆರೋಗ್ಯ ತನಿಖಾ ಸಂಸ್ಥೆಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡಲು ಉಭಯ ರಾಷ್ಟ್ರಗಳು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿವೆ ಎಂದು ಜಸ್ಟನ್ ತಿಳಿಸಿದ್ದಾರೆ.

21 ದಿನದ ಲಾಕ್ ಡೌನ್; ವಲಸೆ ಕಾರ್ಮಿಕರು ಸಂಕಷ್ಟದಲ್ಲಿ21 ದಿನದ ಲಾಕ್ ಡೌನ್; ವಲಸೆ ಕಾರ್ಮಿಕರು ಸಂಕಷ್ಟದಲ್ಲಿ

ಆರೋಗ್ಯ ಅಭಿವೃದ್ಧಿಗೆ ಅಮೆರಿಕಾ ಹೆಚ್ಚಿನ ಒತ್ತು

ಆರೋಗ್ಯ ಅಭಿವೃದ್ಧಿಗೆ ಅಮೆರಿಕಾ ಹೆಚ್ಚಿನ ಒತ್ತು

ಕಳೆದೊಂದು ದಶಕಗಳಲ್ಲಿ ಅಮೆರಿಕಾ ಆರೋಗ್ಯ ವಲಯದ ಅಭಿವೃದ್ಧಿಗೆ ಅತಿಹೆಚ್ಚು ಆದ್ಯತೆಯನ್ನು ನೀಡುತ್ತಿದೆ. ಕಳೆದ 2009ರಿಂದ ಈಚೆಗೆ 70 ಸಾವಿರ ಕೋಟಿ ರೂಪಾಯಿ ಹಣವನ್ನು ಆರೋಗ್ಯ ಅಭಿವೃದ್ಧಿಗಾಗಿ ಮೀಸಲು ಇಟ್ಟಿದೆ. 2019ರಲ್ಲಿ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಗೆ ಅಮೆರಿಕಾ 2,800 ಕೋಟಿ ರೂಪಾಯಿ ಹಣವನ್ನು ನೀಡಿತ್ತು.

ಅಮೆರಿಕಾದಿಂದ ನಿರಾಶ್ರಿತರ ನೆರವಿಗೆ ಕೋಟಿ ಕೋಟಿ ನೆರವು

ಅಮೆರಿಕಾದಿಂದ ನಿರಾಶ್ರಿತರ ನೆರವಿಗೆ ಕೋಟಿ ಕೋಟಿ ನೆರವು

ಕಳೆದ 2019ರಲ್ಲಿ ಅಂತಾರಾಷ್ಟ್ರೀಯ ನಿರಾಶ್ರಿತರ ಸಂಸ್ಥೆ(UNHCR)ಗೆ 1,190 ಕೋಟಿ ರೂಪಾಯಿ ಹಣವನ್ನು ಅಮೆರಿಕಾ ನೀಡಿತ್ತು. ಈ ಹಣವನ್ನು ಕೊರೊನಾ ವೈರಸ್ ನಿಂದ ಅಸಹಾಯಕರಾಗಿ ವಲಸೆ ಹೋಗುತ್ತಿರುವ ನಿರಾಶ್ರಿತರ ನೆರವಿಗೆ ಬಳಸಿಕೊಳ್ಳಲು ನೆರವಾಗುತ್ತದೆ.

ಅಂತಾರಾಷ್ಟ್ರೀಯ ಮಕ್ಕಳ ನಿಧಿಗೆ 4,900 ಕೋಟಿ

ಅಂತಾರಾಷ್ಟ್ರೀಯ ಮಕ್ಕಳ ನಿಧಿಗೆ 4,900 ಕೋಟಿ

ಕಳೆದ 2019ರಲ್ಲಿ ಅಮೆರಿಕಾವು ವಿಶ್ವಸಂಸ್ಥೆಯ ಮಕ್ಕಳ ನಿಧಿಗೆ 4,900 ಕೋಟಿ ರೂಪಾಯಿ ಹಣವನ್ನು ನೀಡಿತ್ತು. ಯುನೆಸೆಫ್ ನಲ್ಲಿ ಇರುವ ಅನುದಾನವನ್ನು ಮಕ್ಕಳಲ್ಲಿ ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವ ಹಾಗೂ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಜಾಗೃತಿಗೆ ಬಳಸುವ ಮೂಲಕ ಕೊರೊನಾ ವಿರುದ್ಧ ಹೋರಾಟ ನಡೆಸಬೇಕಿದೆ.

English summary
America Provide 20 Crores To India For Fight Against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X