• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾವಿನ ಅಂದಾಜು ವರದಿ ನೋಡಿ ಸಮಾಧಾನಗೊಂಡ ಅಮೆರಿಕ?

|

ವಾಷಿಂಗ್ಟನ್, ಏಪ್ರಿಲ್ 9: ಚೀನಾ, ಇಟಲಿ, ಸ್ಪೇನ್ ಬಳಿಕ ಕೊರೊನಾ ಅಟ್ಟಹಾಸಕ್ಕೆ ನಲುಗಿಹೋಗಿರುವ ದೇಶ ಅಂದ್ರೆ ಅಮೆರಿಕ. ಆರಂಭದಲ್ಲಿ ನಿರ್ಲಕ್ಷ್ಯ ಮಾಡಿದ ಅಮೆರಿಕ ಈಗ ಬಹುದೊಡ್ಡ ಸಂಕಷ್ಟ ಎದುರಿಸುತ್ತಿದೆ. ಗಂಟೆ ಗಂಟೆಗೂ ಸೋಂಕಿತರ ಸಂಖ್ಯೆ ವೇಗವಾಗಿ ಸಾಗುತ್ತಿದೆ. ಜೊತೆಯಲ್ಲಿ ಸಾವಿನ ಸಂಖ್ಯೆಯೂ ಏರುತ್ತಲೇ ಇದೆ.

ಯುಎಸ್‌ನಲ್ಲಿ ಒಟ್ಟು 4,34,927 ಜನರಲ್ಲಿ ಕೊವಿಡ್ ಸೋಂಕು ಪತ್ತೆಯಾಗಿದೆ. ಅದರಲ್ಲಿ 14,788 ಜನರು ಬಲಿಯಾಗಿದ್ದಾರೆ. ನಿನ್ನೆ ಒಂದೇ ದಿನ 2000 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ. ಇನ್ನು ಅಮೆರಿಕದ ಕೇಂದ್ರಬಿಂದು ನ್ಯೂಯಾರ್ಕ್‌ ನಗರದಲ್ಲೂ ನಿನ್ನೆ ಒಂದೇ ದಿನ 779 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನ್ಯೂಯಾರ್ಕ್‌ ನಗರದ ನಾಶಕ್ಕೆ ಪಣ ತೊಟ್ಟಂತಿದೆ ಕೊರೊನಾ

ಕಳೆದ ಕೆಲವು ದಿನಗಳಿಂದ ಅಮೆರಿಕದಲ್ಲಿ ದಿನವೊಂದಕ್ಕೆ 2000 ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿದೆ. ಇದು ಹೀಗೆ ಮುಂದುವರಿದರೆ ಬಹಳ ದೊಡ್ಡ ನಷ್ಟಕ್ಕೆ ಯುಎಸ್‌ ದೇಶ ಸಿಲುಕಿಕೊಳ್ಳಲಿದೆ ಎನ್ನುತ್ತಿದ್ದಾರೆ ಎಕ್ಸ್‌ಪರ್ಟ್ಸ್‌.

ಹೀಗಿರುವಾಗ, ಅಮೆರಿಕದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಲಿದೆ ಎಂದು ತಜ್ಞರ ತಂಡ ಹೊಸದಾಗಿ ವರದಿ ನೀಡಿದೆ. ಆರಂಭದ ದಿನಗಳಲ್ಲಿ ಅಮೆರಿಕದಲ್ಲಿ ಸಾವಿನ ಸಂಖ್ಯೆ 1 ಲಕ್ಷ ಆಗುತ್ತೆ, 2.4 ಲಕ್ಷ ಆಗುತ್ತೆ ಎಂದು ಅಂದಾಜಿಸಲಾಗಿತ್ತು. ಆ ಬಳಿಕ 90 ಸಾವಿರ, 80 ಸಾವಿರ ಎಂದು ಉಲ್ಲೇಖಿಸಲಾಯಿತು. ಇದೀಗ, ಹೊಸ ವರದಿ ಪ್ರಕಾರ 61000 ಸಾವಿರ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕೊರೊನಾ ವಿರುದ್ಧ ಹೋರಾಟ: ಅಮೆರಿಕ, ಚೀನಾ ಒಗ್ಗಟ್ಟಿಗೆ WHO ಕರೆ

ಈ ಹಿಂದೆ ಟ್ರಂಪ್ ಕೂಡ ಇದೇ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಅಮೆರಿಕ ಕೊರೊನಾ ವೈರಸ್‌ ದಾಳಿಯನ್ನು ಸಮರ್ಪಕವಾಗಿ ಎದುರಿಸಲಿದೆ. ಈ ಸಾವಿನ ಅಂದಾಜು ಇನ್ನು ಕಡಿಮೆಯಾಗಲಿದೆ ಎಂದು ಹೇಳಿದ್ದರು. ಅದರಂತೆ ಅಂದಾಜು ಕಮ್ಮಿಯಾಗುತ್ತಿದೆ. ಆದರೆ, ಪ್ರಸ್ತುತ ಸಾವಿನ ಸರಾಸರಿ ಇಳಿಮುಖವಾಗುತ್ತಿಲ್ಲ.

English summary
'America might be reach 61000 COVID 19 death' saying models.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X