ಟ್ರಂಪ್ ಐತಿಹಾಸಿಕ ನಿರ್ಧಾರ: 7 ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ರದ್ದು

Written By:
Subscribe to Oneindia Kannada

ವಾಷಿಂಗ್ಟನ್, ಜ 29: ಅಮೆರಿಕಾದಲ್ಲಿ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಏಳು ರಾಷ್ಟ್ರಗಳ ನಾಗರೀಕರಿಗೆ ಅಮೆರಿಕ ವೀಸಾವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.

ಉಗ್ರ ಚಟುವಟಿಕೆಯಿಂದ ತತ್ತರಿಸಿ ಹೋಗಿರುವ ಏಳು ಮುಸ್ಲಿಂ ರಾಷ್ಟ್ರಗಳ ನಾಗರೀಕರಿಗೆ ಮುಂದಿನ ಮೂರು ತಿಂಗಳು ಅಮೆರಿಕ ವೀಸಾ ನಿರ್ಬಂಧಿಸುವ ಕಡತಕ್ಕೆ ಟ್ರಂಪ್ ಸಹಿಹಾಕಿದ್ದಾರೆ.

ಮೂರು ತಿಂಗಳ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಬಂಧವನ್ನು ಸಡಿಲಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

Trump barred citizens of seven Muslim-majority countries from entering the US for at least the next 90 days

2016ರಲ್ಲಿ 75 ಸಾವಿರಕ್ಕೂ ಹೆಚ್ಚು ನಿರಾಶ್ರಿತರು ಅಮೆರಿಕಕ್ಕೆ ಪ್ರವೇಶಿಸಿದ್ದು, ಇದರಲ್ಲಿ ಅರ್ಥಕ್ಕಿಂತ ಹೆಚ್ಚು ಮುಸ್ಲಿಮರಾಗಿದ್ದಾರೆ. ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಯಾವುದೇ ವ್ಯಕ್ತಿಗಳನ್ನು ದೇಶ ಪ್ರವೇಶಿಸಲು ಬಿಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ, ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ಸಲುವಾಗಿ, ಮುಂದಿನ ದಿನಗಳಲ್ಲಿ ಮುಸ್ಲಿಂ ಪ್ರಾಭಲ್ಯವಿರುವ ದೇಶಗಳಿಗೂ ಅಮೆರಿಕಾ ವೀಸಾ ಸಿಗುವುದು ತ್ರಾಸದಾಯಕವಾಗಬಹುದು.

ಅಮೆರಿಕ ನಿರ್ಬಂಧ ಹೇರಿರುವ ಏಳು ರಾಷ್ಟ್ರಗಳೆಂದರೆ, ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೋಮಾಲಿಯಾ, ಯೆಮನ್ ಮತ್ತು ಇರಾಕ್. ಈ ಏಳು ರಾಷ್ಟ್ರಗಳ ಒಟ್ಟು ಜನಸಂಖ್ಯೆ 134 ಮಿಲಿಯನ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
America President Donald Trump barred citizens of seven Muslim-majority countries from entering the United States of America for at least the next 90 days.
Please Wait while comments are loading...