Israel: ಇಸ್ರೇಲ್ ನಡೆಸಿದ ಒಂದೇ ದಾಳಿಗೆ 27 ಜನರು ಬಲಿ?
ಇಸ್ರೇಲ್ ಒಂದೇ ಸಮನೆ ದಾಳಿ ನಡೆಸುತ್ತಿದೆ, ಅದು ಗಾಜಾ ಪಟ್ಟಿಯೇ ಇರಲಿ ಅಥವಾ ತನ್ನ ಮತ್ತೊಬ್ಬ ಶತ್ರು ಲೆಬನಾನ್ ರಾಜಧಾನಿಯೇ ಇರಲಿ. ಇಸ್ರೇಲ್ ಮಾತ್ರ ಭೀಕರ ದಾಳಿಯನ್ನು ನಡೆಸುತ್ತಲೇ ಇದೆ. ಹೀಗಾಗಿ ಇದೀಗ ಇಸ್ರೇಲ್ ದಾಳಿಯಿಂದ ಗಾಜಾ ಪಟ್ಟಿ ಜನರು ಭಯದ ವಾತಾವರಣದಲ್ಲೇ ಬದುಕುವ ಪರಿಸ್ಥಿತಿ ಬಂದಿದೆ ಎಂದು ಆರೋಪ ಮಾಡಲಾಗುತ್ತಿದೆ. ಹೀಗೆ ಅಟ್ಯಾಕ್ ಮಾಡುವಾಗಲೇ, ಹಮಾಸ್ ಬಂಡುಕೋರರು ಅಡಗಿದ್ದಾರೆ ಎಂಬ ಮಾಹಿತಿಯನ್ನ ಪಡೆದ ಇಸ್ರೇಲ್ ಸೇನೆ ಕೊನೆಗೆ ಶಾಲೆ ಒಂದರ ಮೇಲೆಯೇ ದಾಳಿ ಮಾಡಿದೆ. ಹೀಗಾಗಿ ಅಲ್ಲಿ ಆಶ್ರಯ ಪಡೆದಿದ್ದ 27 ಜನರ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.
ಅಂದಹಾಗೆ ಗಾಜಾ ಪಟ್ಟಿ ಬಲಾಹ್‌ನಲ್ಲಿ ಇರುವ ಕೇಂದ್ರ ಪಟ್ಟಣದ ಶಾಲೆ ಮೇಲೆ ಈ ರೀತಿ ದಾಳಿ ನಡೆದಿದೆ ಎಂದು ಆರೋಪ ಮಾಡಲಾಗಿದೆ. ಇಸ್ರೇಲ್ ಹಿಂಗೆಲ್ಲಾ ದಾಳಿ ಮಾಡುತ್ತಿರುವ ಕಾರಣ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ. ಅಲ್ಲದೆ ಇನ್ನೊಂದು ಕಡೆ ಈ ದಾಳಿಯಲ್ಲಿ ಜೀವ ಬಿಟ್ಟಿರುವ 27 ಜನರ ಪೈಕಿ ಒಂದು ಮಗು ಮತ್ತು 7 ಮಹಿಳೆಯರು ಕೂಡ ಸೇರಿದ್ದಾರೆ ಎಂದು ಆರೋಪ ಮಾಡಲಾಗಿದೆ. ಗಾಜಾ ಪಟ್ಟಿ ವಿರುದ್ಧ ಕಳೆದ ಒಂದು ವರ್ಷದಿಂದ ಕೂಡ ಇದೇ ರೀತಿಯಾಗಿ ದಾಳಿ ನಡೆಸುತ್ತಿದೆ ಇಸ್ರೇಲ್ ಮಿಲಿಟರಿ, ಇದೇ ಕಾರಣಕ್ಕೆ ಅಲ್ಲೀಗ ಭಯದ ವಾತಾವರಣ ಕೂಡ ನಿರ್ಮಾಣ ಆಗಿದೆ. ಈಗಾಗಲೇ ಲಕ್ಷಾಂತರ ಜನರು ಗಾಜಾ ಪಟ್ಟಿ ಬಿಟ್ಟು ಹೋಗಿದ್ದಾರೆ.

ಯುದ್ಧ ನಿಲ್ಲಿಸಲು ಪ್ರಯತ್ನ?
ಗಾಜಾ ಪಟ್ಟಿ ಪ್ರದೇಶದಲ್ಲಿ ಶಾಂತಿ ನೆಲೆಸಿದರೆ ಮುಂದಿನ ದಿನಗಳಲ್ಲಿ ಇಡೀ ಮಧ್ಯ ಪ್ರಾಚ್ಯದ ವಾತಾವರಣ ತಣ್ಣಗೆ ಮಾಡಬಹುದು. ಇದೇ ಕಾರಣಕ್ಕೆ ಗಾಜಾ ಪಟ್ಟಿ ಪ್ರದೇಶದಲ್ಲಿ ಯುದ್ಧ ನಿಲ್ಲಿಸಲು ಪ್ರಯತ್ನ ಆರಂಭಿಸಲಾಗಿದೆ. ಆದರೂ ಅದು ಫಲ ನೀಡುತ್ತಿಲ್ಲ, ಅದರ ಬದಲು ಇಸ್ರೇಲ್ ಸೇನೆ ಮತ್ತಷ್ಟು ಜೋರಾಗಿ ದಾಳಿ ಮಾಡುತ್ತಿದೆ. ಇದು ಗಾಜಾ ಭಾಗದಲ್ಲಿ ಜನರಿಗೆ ಆತಂಕ ಮೂಡಿಸುತ್ತಿದೆ. ಹೇಗಾದರೂ ಮಾಡಿ ಈ ಯುದ್ಧ ನಿಲ್ಲಿಸಬೇಕು ಅಂತಾ ವಿಶ್ವಸಂಸ್ಥೆ ಕೂಡ ತನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ.
ಹಿಜ್ಬುಲ್ಲಾ ಮುಖಂಡರ ಜಾಗಗಳು ಪತ್ತೆ?
ಗಾಜಾ ಪಟ್ಟಿ ಮಾತ್ರವಲ್ಲ ಲೆಬನಾನ್ ವಿರುದ್ಧ ಕೂಡ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸುತ್ತಿದೆ. ಇಸ್ರೆಲ್ ಸೇನೆ ಇದೀಗ ಹಿಜ್ಬುಲ್ಲಾ ಮುಖಂಡರು ಅಂದರೆ, ಹಿಜ್ಬುಲ್ಲಾದ ಕಮಾಂಡರ್‌ಗಳು & ಮುಂಚೂಣಿ ನಾಯಕರನ್ನ ಟಾರ್ಗೆಟ್ ಮಾಡಿ ಈ ದಾಳಿ ನಡೆಸುತ್ತಿದೆ ಎನ್ನಲಾಗಿದೆ. ಹೀಗಿದ್ದರೂ ಲೆಬನಾನ್ ದೇಶದ ಅಪಾರ್ಟ್‌ಮೆಂಟ್ ಅಂದ್ರೆ ಜನರು ವಾಸ ಮಾಡುವ ಜಾಗಗಳ ಮೇಲೆಯೇ ಹೆಚ್ಚಿನ ಪ್ರಮಾಣದ ದಾಳಿ ನಡೆಯುತ್ತಿದೆ. ಹೀಗಾಗಿ ಸಾಮಾನ್ಯ ಜನರು ಸಾಯುತ್ತಿದ್ದು, ಈ ಹಿನ್ನೆಲೆಯಲ್ಲಿ ಇಸ್ರೇಲ್ ಸೇನೆ ತನ್ನ ದಾಳಿಯನ್ನು ನಿಲ್ಲಿಸಬೇಕು. ಸಾಮಾನ್ಯ ಜನರು ಅಲ್ಲಿಂದ ಹೋಗಲು ಅವಕಾಶ ಮಾಡಿಕೊಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಈ ಗೊಂದಲ ಹೆಚ್ಚಾದ ಹಿನ್ನೆಲೆ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ.












Click it and Unblock the Notifications