ಪತ್ನಿಯೊಂದಿಗೆ ಸಂಬಂಧ ಆರೋಪ: ಕಾನ್‌ಸ್ಟೆಬಲ್ ಕಿವಿ, ತುಟಿ, ಕತ್ತರಿಸಿದ ಪಾಕ್ ವ್ಯಕ್ತಿ
ಲಾಹೋರ್ ಆಗಸ್ಟ್ 1: ಪತ್ನಿಗೆ ಬ್ಲಾಕ್‌ಮೇಲ್ ಮಾಡಿ ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ ಆರೋಪದ ಮೇಲೆ ಪಾಕ್ ವ್ಯಕ್ತಿಯೊಬ್ಬ ಪೊಲೀಸ್ ಪೇದೆಯೊಬ್ಬರ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸೋಮವಾರ ನಡೆದಿದೆ.
ಲಾಹೋರ್‌ನಿಂದ ಸುಮಾರು 200 ಕಿಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯಲ್ಲಿ ಭಾನುವಾರ ಮುಹಮ್ಮದ್ ಇಫ್ತಿಕರ್ ಎಂಬ ಪ್ರಮುಖ ಆರೋಪಿ ಈ ಕೃತ್ಯ ಎಸಗಿದ್ದಾನೆ. ಈತ ತನ್ನ ಸಹಚರರೊಂದಿಗೆ ಕಾನ್‌ಸ್ಟೆಬಲ್ ಖಾಸಿಂ ಹಯಾತ್ ಅವರ ಮೂಗು, ಕಿವಿ ಮತ್ತು ತುಟಿಗಳನ್ನು ಕತ್ತರಿಸಿದ್ದಾನೆ. ಇದಕ್ಕೂ ಮೊದಲು ಕಾನ್‌ಸ್ಟೆಬಲ್ ಖಾಸಿಂ ಹಯಾತ್ ಅವರಿಗೆ ತೀವ್ರ ಚಿತ್ರಹಿಂಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಹಯಾತ್ ತನ್ನ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಇಫ್ತಿಕರ್ ಶಂಕಿಸಿದ್ದನು. ಹೀಗಾಗಿ 12 ಸಹಚರರೊಂದಿಗೆ ಸೇರಿಕೊಂಡು ಹಯಾತ್ ಮನೆಗೆ ಹಿಂದಿರುಗುತ್ತಿದ್ದಾಗ ಆತನನ್ನು ಅಪಹರಿಸಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ತೀವ್ರ ಚಿತ್ರಹಿಂಸೆ ನೀಡಿದ್ದಾರೆ. ಆತನ ದೇಹದ ಭಾಗಗಳನ್ನು ಚೂಪಾದ ಆಯುಧಗಳಿಂದ ಕತ್ತರಿಸಿದ್ದಾನೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾನ್‌ಸ್ಟೆಬಲ್‌ನನ್ನು ಜಂಗ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ಕಳೆದ ತಿಂಗಳು, ಪಾಕಿಸ್ತಾನ ದಂಡ ಸಂಹಿತೆಯ (ಪಿಪಿಸಿ) ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ), 384 (ಸುಲಿಗೆ) ಮತ್ತು 292 (ಅಶ್ಲೀಲತೆ) ಅಡಿಯಲ್ಲಿ ಕಾನ್‌ಸ್ಟೆಬಲ್ ಹಯಾತ್ ವಿರುದ್ಧ ಇಫ್ತಿಕರ್ ಪ್ರಕರಣ ದಾಖಲಿಸಿದ್ದರು.
ಆದರೆ ಹಯಾತ್ ತನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾಗ ತನ್ನ ಹೆಂಡತಿಯನ್ನು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದ ಎಂದು ಇಫ್ತಿಕರ್ ಹೇಳಿಕೊಂಡಿದ್ದಾನೆ. ಇಫ್ತಿಕರ್ ತನ್ನ ಪತ್ನಿ ಹಯಾತ್ ನನ್ನು ಭೇಟಿಯಾದಾಗ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತಪಡಿಸಿದ್ದ ಮತ್ತು ಆತ ಕೃತ್ಯದ ವಿಡಿಯೋ ಮಾಡಿ ನಂತರ ಆಕೆಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದ ಎಂದು ಇಫ್ತಿಕರ್ ಆರೋಪಿಸಿದ್ದಾರೆ. ಇಫ್ತಿಕರ್ ಮತ್ತು ಆತನ ಸಹಚರರ ಪತ್ತೆಗೆ ದಾಳಿ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications