• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದ ಮಹಾನ್ ನಾಯಕ ಜಿನ್ನಾ ಹೆಸರು ಜಿನ್‌ಗೆ

|

ಇಸ್ಲಾಂನಲ್ಲಿ ನಿಷೇಧ ಇರುವ ಮದ್ಯದ ಬಾಟಲಿಗೆ ಇಸ್ಲಾಮಿಕ್ ದೇಶ ಪಾಕಿಸ್ತಾನದ ಮಹಾನ್ ನಾಯಕ ಮೊಹ್ಮದ್ ಅಲಿ ಜಿನ್ನಾರ ಹೆಸರನ್ನು ಇಟ್ಟಿರುವುದು ಈಗ ಚರ್ಚೆಗೆ ನಾಂದಿ ಹಾಡಿದೆ. ಜಿನ್ ಬಾಟಲಿಗೆ ಜಿನ್ನಾರ ಹೆಸರಿಟ್ಟು, ಅವರ ಬಗ್ಗೆ ಮಾಹಿತಿ ನೀಡಿರುವುದು ಸದ್ಯಕ್ಕೆ ವೈರಲ್ ಆಗಿದೆ.

ಪಾಕಿಸ್ತಾನ ಎಂಬ ದೇಶ ಜನ್ಮ ತಳೆಯಲು ಕಾರಣವಾದ ವ್ಯಕ್ತಿ ಮೊಹ್ಮದ್ ಅಲಿ ಜಿನ್ನಾ. ಅವರನ್ನು ಅಣಕಿಸುವ ರೀತಿಯಲ್ಲಿ "Ginnah" ಎಂದು ಮದ್ಯದ ಬಾಟಲಿಗೆ ಹೆಸರಿಡಲಾಗಿದೆ. ಅಂದಹಾಗೆ ಇಸ್ಲಾಂನಲ್ಲಿ ನಿಷೇಧ ಇರುವ ಪೂಲ್ ಬಿಲಿಯರ್ಡ್ಸ್, ಸಿಗಾರ್, ಹಂದಿಯ ಮಾಂಸ, ಸ್ಕಾಚ್, ವ್ಹಿಸ್ಕಿ ಮತ್ತು ಜಿನ್ ಎಲ್ಲವನ್ನೂ ಜಿನ್ನಾ "ಮಜಾ" ಮಾಡಿದ್ದರು ಎಂಬ ರೀತಿಯಲ್ಲಿ ಮದ್ಯದ ಬಾಟಲಿಗೆ ಹೆಸರಿಡಲಾಗಿದೆ.

ಜಿನ್ನಾ ಅವರ ಹೆಸರಿನಲ್ಲಿ ಇರುವ "Ginnah" ಹೆಸರಿನ ಜಿನ್ ಬಾಟಲಿಯ ಫೋಟೋವನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಆ ಬಾಟಲಿಯ ಮೇಲೆ ಲೇಬಲ್ ಇದ್ದು, ಅದರ ಮೇಲಿನ ಒಕ್ಕಣೆ ಹೀಗಿದೆ: ಸಂತುಷ್ಟ ಮನುಷ್ಯನ ಸ್ಮರಣೆಯಲ್ಲಿ ಯಾರೀತ: Ginnah. ಈ ಮದ್ಯದ ಬಾಟಲಿ ಬಗ್ಗೆ ಎಎನ್ ಐ ನಿಖರ ಮಾಹಿತಿ ನೀಡಿಲ್ಲ. ಆದರೆ ಹಲವು ಮಂದಿ ಟ್ವಿಟ್ಟರ್ ಬಳಕೆದಾರರು #Ginnah ಜತೆಗೆ ಪೋಸ್ಟ್ ಮಾಡಿದ್ದಾರೆ.

ಮೊಹ್ಮದ್ ಅಲಿ ಜಿನ್ನಾ ಜನಿಸಿದ್ದು ಡಿಸೆಂಬರ್ 25, 1876ರಲ್ಲಿ. ಅದು ಈಗಿನ ಪಾಕಿಸ್ತಾನದಲ್ಲಿ ಇರುವ ಕರಾಚಿಯಲ್ಲಿ. ಆಗ ಅದು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದ ಭಾರತದಲ್ಲಿತ್ತು. ಸ್ವತಂತ್ರ ಪಾಕಿಸ್ತಾನಕ್ಕಾಗಿ ಒತ್ತಾಯಿಸಿದ ಜಿನ್ನಾ, ಅಲ್ಲಿನ ಮೊದಲ ನಾಯಕರಾದರು. ಜತೆಗೆ ಕೈದ್-ಇ ಅಜಂ ಅಥವಾ ಪಾಕಿಸ್ತಾನದ ಮಹಾನ್ ನಾಯಕ ಎನಿಸಿಕೊಂಡರು.

"1947ರಲ್ಲಿ ಜಾತ್ಯತೀತ ರಾಷ್ಟ್ರವಾಗಿ ರೂಪುಗೊಂಡ ಪಾಕಿಸ್ತಾನದ ಸ್ಥಾಪಕ ಮೊಹ್ಮದ್ ಅಲಿ ಜಿನ್ನಾ," ಎಂದು ಬಾಟಲಿಯ ಹಿಂಭಾಗದಲ್ಲಿನ ಲೇಬಲ್ ನಲ್ಲಿ ಮಾಹಿತಿ ಇದೆ. ಇನ್ನು ಅದರಲ್ಲೇ ಇರುವ ಮಾಹಿತಿಯಂತೆ ಪಾಕಿಸ್ತಾನಿ ಜನರಲ್ ಜಿಯಾ-ಉಲ್- ಹಕ್ ನಿಂದ 1977ರಲ್ಲಿ ಪ್ರಧಾನಿ ಝುಲ್ಫೀಕರ್ ಅಲಿ ಭುಟ್ಟೋರನ್ನು ಪದಚ್ಯುತಗೊಳಿಸಲಾಯಿತು.

ಆ ನಂತರ ಮಿಲಿಟರಿ ಸರ್ವಾಧಿಕಾರಿ ತೆಕ್ಕೆಗೆ ಬಂದ ದೇಶಕ್ಕೆ ವಾಷಿಂಗ್ಟನ್ ಡಿಸಿ ಬೆಂಬಲ ಸಿಕ್ಕು, ಪಾಕಿಸ್ತಾನವೇ ಸಮಸ್ಯಾತ್ಮಕ ದೇಶವಾಯಿತು. ಕೆಲವು ಧಾರ್ಮಿಕ ಮೌಲ್ವಿಗಳ ಕೈಗೆ ಸಿಲುಕಿ, ಕೆಟ್ಟದಾಗಿ ರೂಪುಗೊಂಡಿತು ಎನ್ನಲಾಗಿದೆ.

"ಎಂ.ಎ. ಜಿನ್ನಾ ಎಂದಿಗೂ ಅದನ್ನು ಒಪ್ಪುತ್ತಿರಲಿಲ್ಲ. ಏಕೆಂದರೆ, ಆತ ಪೂಲ್ ಬಿಲಿಯರ್ಡ್ಸ್, ಸಿಗಾರ್, ಹಂದಿ ಮಾಂಸ ಮತ್ತು ಸ್ಕಾಚ್, ವ್ಹಿಸ್ಕಿ, ಜಿನ್ ಇಂಥವನ್ನು ಆನಂದಿಸುತ್ತಿದ್ದವರು," ಎಂದು ಮುದ್ರಿಸಲಾಗಿದೆ. "ಮತ್ತು" ಬರುವ ಪದಾರ್ಥಗಳನ್ನು ಹಾಗೂ ಜೂಜನ್ನು ಇಸ್ಲಾಮ್ ಧರ್ಮದಲ್ಲಿ ನಿಷೇಧಿಸಲಾಗಿದೆ. ಕುರ್ ಆನ್ ಮತ್ತು ಸುನ್ನಾದಲ್ಲಿ ಅವುಗಳನ್ನು "ಹರಾಮ್" ಎನ್ನುತ್ತಾರೆ.

ಪಾಕಿಸ್ತಾನಿ ಟ್ವಿಟ್ಟರ್ ಬಳಕೆದಾರರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. #"Ginnah"ವನ್ನು ರಾಷ್ಟ್ರೀಯ ಪಾನೀಯವನ್ನಾಗಿ ಮಾಡಿ ಎಂದು ಒಬ್ಬರು ಪೋಸ್ಟ್ ಮಾಡಿದ್ದರೆ, ಅಯ್ಯೋ! ನಮ್ಮ್ ದೇಶದ ರಾಷ್ಟ್ರಪಿತನ ಹೆಸರಿನಲ್ಲಿ ಜಿನ್ ಇದೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

English summary
A Twitter user posted photos of a bottle of gin named after Founding Father Muhammad Ali Jinnah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X