ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಹಸ್ತಾಂತರವಾಗಬೇಕಿದ್ದ ಆಗಸ್ಟಾವೆಸ್ಟ್‌ಲ್ಯಾಂಡ್ ಆರೋಪಿ ಪರಾರಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಆಗಸ್ಟಾವೆಸ್ಟ್‌ಲ್ಯಾಂಡ್‌ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಆರೋಪಿಯನ್ನು ದೇಶಕ್ಕೆ ಹಸ್ತಾಂತರಿಸಲು ಯುಎಇ ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು. ಆದರೆ ಈಗ ಆತ ಹಠಾತ್ತನೆ ಪರಾರಿಯಾಗಿದ್ದಾನೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ : 34 ಮಂದಿ ವಿರುದ್ಧ ಚಾರ್ಜ್ ಶೀಟ್ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ : 34 ಮಂದಿ ವಿರುದ್ಧ ಚಾರ್ಜ್ ಶೀಟ್

ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣದ ಪ್ರಮುಖ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಇಯ ನ್ಯಾಯಾಲಯ ಒಪ್ಪಿಗೆ ನೀಡಿ ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಹೊರಬೀಳುತ್ತಿದ್ದಂತೆಯೇ ಕ್ರಿಸ್ಟಿಯನ್ ಯುಎಇಯಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್ ಆಗಸ್ಟಾವೆಸ್ಟ್‌ಲ್ಯಾಂಡ್ ಹಗರಣ : ಭಾರತದ ವಶಕ್ಕೆ ಆರೋಪಿ ಮೈಕೆಲ್

3700 ಕೋಟಿಗಳ ಭಾರಿ ಹಗರಣ ಇದಾಗಿದ್ದು. ಹಗರಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದ ಮೂವರು ಮಧ್ಯವರ್ತಿಗಳನ್ನು ಕ್ರಿಸ್ಟಿಯನ್ ಮೈಕಲ್ ಪ್ರಮುಖ ಎನ್ನಲಾಗಿದೆ. ಆತನಿಗಾಗಿ ಸಿಬಿಐ ರೆಡ್‌ ಕಾರ್ನರ್‌ ನೊಟೀಸ್ ಜಾರಿಗೊಳಿಸಿತ್ತು.

Agustawestland scandal middle man escaped from UAE after his extradition announced

ಯುಎಇಯು ಪೊಲೀಸರು ಈಗ ಕ್ರಿಸ್ಟಿಯನ್ ಮೈಕಲ್‌ಗಾಗಿ ಹುಡುಕಾಟ ನಡೆಸುವಂತಾಗಿದ್ದು. ಆಗಸ್ಟಾವೆಸ್ಟ್‌ಲಾಂಡ್ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐಗೆ ಇದು ಹಿನ್ನಡೆಯಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ಕ್ರಿಸ್ಟಿಯನ್ ಮೈಕಲ್ ಅತ್ಯಂತ ಪ್ರಮುಖ ಸಾಕ್ಷಿಯಾಗಿದ್ದು. ಪ್ರಕರಣದ ತನಿಖೆಗೆ ಆತನ ಅವಶ್ಯಕತೆ ಇದೆ.

English summary
Agustawestland accused Cristian Michel escaped from UAE after court order to extradite him to India. Michel allegedly bribed Indian politicians in getting the deal done during UPA govt in 2010.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X