ಇರಾನ್ ನಂತರ ಕುವೈತ್ ನಲ್ಲೂ ಭೂಕಂಪದ ಅನುಭವ

ತೆಹರಾನ್, ನವೆಂಬರ್ 26 : ಪಶ್ಚಿಮ ಇರಾನ್ ನಲ್ಲಿ 6.3 ಪ್ರಮಾಣದ ಭೂಕಂಪದ ಅನುಭವದ ನಂತರ, ಇರಾನ್ -ಇರಾಕ್ ಗಡಿಭಾಗ ಹಾಗೂ ಕುವೈಟಿನ ಕರಾವಳಿ ಭಾಗದಲ್ಲಿ ಸೋಮವಾರದಂದು ಭೂಕಂಪದ ಅನುಭವ ಕಂಡು ಬಂದಿದೆ.

ಬಾಗ್ದಾದಿನಿಂದ 145 ಕಿ.ಮೀ ದೂರದಲ್ಲಿ ಭೂಕಂಪದ ತೀವ್ರತೆ ಕಂಡು ಬಂದಿದ್ದು, ಕುವೈತ್, ಮೆಹ್ಬೋಲ, ಸಾಲ್ಮಿಯಾ ಮುಂತಾದೆಡೆ ಲಘುವಾಗಿ ಭೂಮಿ ಕಂಪಿಸಿದೆ. ಇದನ್ನು ಭೂಕಂಪದ ನಂತರ ಆಗುವ aftereffect ಎನ್ನಲಾಗಿದ್ದು, ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಇರಾನ್ ಮತ್ತು ಇರಾಕ್ ಗಡಿ ಭಾಗದಲ್ಲಿ ಭಾನುವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

After effects earthquake leaves many injured Iran, Kuwait

ಭೂಕಂಪದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಆದರೆ, ಪ್ರಮುಖ ರಸ್ತೆಗಳು ಸುರಕ್ಷಿತವಾಗಿವೆ. ಕಳೆದ ವರ್ಷದ ನವೆಂಬರ್‌ನಲ್ಲಿಯೂ ಇಲ್ಲಿ ಭೂಕಂಪ ಸಂಭವಿಸಿತ್ತು. ಕೆರ್ಮನ್ಷಾಹ್ ಪ್ರಾಂತ್ಯದಲ್ಲಿ ಸಂಭವಿಸಿದ್ದ ಭೂಕಂಪ 600 ಜನರನ್ನು ಬಲಿತೆಗೆದುಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+