ರಸಾಯನಿಕ ದಾಳಿ ಬೆನ್ನಿಗೆ ಸಿರಿಯಾ ವಾಯು ನೆಲೆ ಮೇಲೆ ಮಿಸೈಲ್ ದಾಳಿ

Subscribe to Oneindia Kannada

ಡಮಾಸ್ಕಸ್, ಏಪ್ರಿಲ್ 9: ಸಿರಿಯಾದ ಪ್ರಮುಖ ವಾಯು ನೆಲೆ ತೈಫುರ್ ಅಥವಾ ಟಿ4 ಮೇಲೆ ಮಿಸೈಲ್ ದಾಳಿ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹೋಮ್ಸ್ ನಗರದ ಸಮೀಪದ ಈ ವಾಯುನೆಲೆ ಮೇಲೆ ದಾಳಿ ಮಾಡಿವರು ಯಾರು ಎಂಬುದು ತಿಳಿದು ಬಂದಿಲ್ಲ. ದಾಳಿಯಲ್ಲಿ ಹಲವು ಗಾಯಗೊಂಡಿರಬಹುದು ಅಥವಾ ಸಾವನ್ನಪ್ಪಿರಬಹುದು ಎಂದೂ ಮಾಧ್ಯಮಗಳು ಹೇಳಿವೆ.

ಸಿರಿಯಾದ ಬಷರ್ ಅಲ್ ಅಸದ್ ವಿರೋಧಿಗಳು ನೆಲೆ ನಿಂತಿರುವ ಡೂಮಾ ಪ್ರದೇಶದ ಮೇಲೆ ನಡೆದ ರಸಾಯನಿಕ ದಾಳಿ ವಿಚಾರ ಅಂತರಾಷ್ಟ್ರೀಯವಾಗಿ ಭಾರೀ ಆಕ್ರೋಶ ಹುಟ್ಟುಹಾಕಿತ್ತು. ಈ ದಾಳಿಯಲ್ಲಿ 70ಕ್ಕೂ ಹೆಚ್ಚು ಜನರು ಅಸುನೀಗಿದ್ದರು. ಇದಾದ ಬೆನ್ನಿಗೆ ಈ ದಾಳಿ ನಡೆದಿದ್ದು ಅಸದ್ ವಿರೋಧಿಗಳು ವಾಯುನೆಲೆ ಮೇಲೆ ದಾಳಿ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ.

ಸಿರಿಯಾದಲ್ಲಿ ಮತ್ತೆ ಭೀಕರ ರಸಾಯನಿಕ ದಾಳಿ, 70 ಬಲಿ

ರಸಾಯನಿಕ ದಾಳಿ ಬೆನ್ನಿಗೆ ಗುಡುಗಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ದಾಳಿಗೆ ಪ್ರತಿಯಾಗಿ 'ಪ್ರಾಣಿ' ಅಸದ್ ಮತ್ತು ಅವರನ್ನು ಬೆಂಬಲಿಸುತ್ತಿರುವ ರಷ್ಯಾ ಹಾಗೂ ಇರಾನ್ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

After chemical attack, Strikes hit Syrian airfield

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಕೂಡ ಈ ದಾಳಿಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದರು. ಮತ್ತು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಟ್ರಂಪ್ ಜತೆಗಿನ ಜಂಟಿ ಹೇಳಿಕೆಯಲ್ಲಿ ಅವರು ತಿಳಿಸಿದ್ದರು. ಇದಾದ ಬೆನ್ನಿಗೆ ಈ ದಾಳಿ ನಡೆದಿರುವುದರಿಂದ ಫ್ರಾನ್ಸ್ ಮತ್ತು ಅಮೆರಿಕಾವೇ ಈ ದಾಳಿ ನಡೆಸಿದೆ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Several people have died or were injured after a military airport in Syria came under missile attack, the country's state media reported.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ