ಲಿಬಿಯಾ: 7 ವರ್ಷಗಳ ಬಳಿಕ ಮುಅಮ್ಮರ್ ಗಡಾಫಿ ಪುತ್ರನ ಬಿಡುಗಡೆ
ಲಿಬಿಯಾ, ಸೆಪ್ಟೆಂಬರ್ 06: ಸತತ ಏಳು ವರ್ಷಗಳ ಬಳಿಕ ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿ ಮೊಅಮ್ಮರ್ ಗಡಾಫಿ ಪುತ್ರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಗಡಾಳಿ ಸರ್ಕಾರದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಹಲವು ಮಂದಿ ಅಧಿಕಾರಿಗಳು ಇನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದು ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ.
2011ರಲ್ಲಿ ಲಿಬಿಯಾದಲ್ಲಿ ನಾಗರಿಕ ದಂಗೆಯೆದ್ದು ದೀರ್ಘಕಾಲದಿಂದ ಅಧಿಕಾರದಲ್ಲಿದ್ದ ಗದ್ದಾಫಿ ಪದಚ್ಯುತಗೊಳ್ಳಲು ಕಾರಣವಾಗಿತ್ತು. ನಂತರ ಗಡಾಫಿ ಹತ್ಯೆಯಾಗಿತ್ತು.

2011ರ ದಂಗೆ ಸಮಯದಲ್ಲಿ ಗಡಾಫಿ ಪುತ್ರ ಅಲ್ ಸಾದ್ ಗಡಾಫಿ ಬಂಡುಕೋರರು ಹಾಗೂ ಪ್ರತಿಭಟನಾಕಾರರ ವಿರುದ್ಧ ವಿಶೇಷ ಭದ್ರತಾಪಡೆ ಕಟ್ಟಿಕೊಂಡು ದಾಳಿಯಲ್ಲಿ ತೊಡಗಿದ್ದರು. ಗಟಾಫಿಗೆ 8 ಮಂದಿ ಮಕ್ಕಳು. ಅವರಲ್ಲಿ ಮೂವರು ಹತ್ಯೆಯಾಗಿದ್ದಾರೆ. ಇಬ್ಬರು ಇನ್ನೂ ಬಂಧನದಲ್ಲಿದ್ದಾರೆ. ಉಳಿದವರು ಅಲ್ಜೀರಿಯ ಮತ್ತು ಓಮನ್ ಆಶ್ರಯದಲ್ಲಿದ್ದಾರೆ.
ಲಿಬಿಯಾದ ವಿವಾದಾತ್ಮಕ ಸರ್ವಾಧಿಕಾರಿಯಾಗಿದ್ದ ದಿ. ಮುಅಮ್ಮರ್ ಪುತ್ರನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಿಸಿದೆ. ಗದಾಫಿ ಪುತ್ರ ಅಲ್ ಸಾದಿ ಗದ್ದಾಫಿ ಕಳೆದ 7 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.
ನ್ಯಾಯಾಲಯದ ಆದೇಶದ ಮೇರೆಗೆ ಈ ಬಿಡುಗಡೆ ನಡೆದಿರುವುದಾಗಿ ಲಿಬಿಯಾದ ಪ್ರಧಾನಿ ಅಬ್ದುಲ್ ಹಮೀದ್ ಟ್ವೀಟ್ ಮಾಡಿದ್ದಾರೆ. ಮಧ್ಯಂತರ ಸರ್ಕಾರದ ವಕ್ತಾರ ಮೊಹಮದ್ ಹಮೌದ್ ಈ ಬಗ್ಗೆ ಹೇಳಿಕೆ ನೀಡಿದ್ದು, ಅಲ್ ಸಾದಿ ಗದ್ದಾಫಿ ಟ್ರಿಪೋಲಿಯಲ್ಲಿನ ಅಲ್ ಹಡಬ ಬಂದೀಖಾನೆಯಿಂದ ಬಿಡುಗಡೆಯಾಗಿರುವುದನ್ನು ಖಚಿತ ಪಡಿಸಿದ್ದಾರೆ.
ತಂದೆಯ ಅಡಳಿತ ವಿರುದ್ದ ದಂಗೆ ಎದ್ದ ಅರೋಪದ ಮೇಲೆ ಏಳು ವರ್ಷಗಳ ಹಿಂದೆ ನೈಜೀರಿಯಾದಿಂದ ಗಡಿಪಾರಾಗಿ, ಟ್ರಿಪೋಲಿಯಲ್ಲಿ ಬಂಧಿಸಲ್ಪಟ್ಟ ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರ ಪುತ್ರ ಅಲ್-ಸಾದಿ ಗಡಾಫಿಯನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ರಾಜಧಾನಿ ಟ್ರಿಪೊಲಿಯ ಅಲ್-ಹದಬ ಜೈಲಿನಿಂದ ಅಲ್-ಸಾದಿ ಗಡಾಫಿಯನ್ನು ಬಿಡುಗಡೆ ಮಾಡಲಾಗಿದೆ. 2011ರ ದಂಗೆಯ ಸಂದರ್ಭ ಬಂಧಿಸಲ್ಪಟ್ಟಿರುವ ಗಡಾಫಿ ಆಡಳಿತದ ಅನೇಕ ಅಧಿಕಾರಿಗಳು ಇನ್ನೂ ಜೈಲಿನಲ್ಲಿದ್ದಾರೆ" ಎಂದು ಸರ್ಕಾರದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ವಕ್ತಾರ ಮೊಹಮ್ಮದ್ ಹಮೌದಾ ಮಾಹಿತಿ ನೀಡಿದ್ದಾರೆ.
ತನ್ನ ತಂದೆಯ ಆಡಳಿತದ ವಿರುದ್ಧದ ದಂಗೆಯ ಆರೋಪದ ಮೇಲೆ ಆಲ್-ಸಾದಿ ಗಡಾಫಿಯನ್ನು ಬಂಧಿಸಲಾಗಿತ್ತು. ಈ ಆರೋಪದಿಂದ ಮುಕ್ತಗೊಳಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬಿಡುಗಡೆಗೊಂಡ ಬಳಿಕ ಸಾದಿ ಗಡಾಫಿ ಅವರು ಟರ್ಕಿಗೆ ಪ್ರಯಾಣಿಸಿದರು ಎಂದು ವರದಿ ತಿಳಿಸಿದೆ.












Click it and Unblock the Notifications