ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ಕ್ಲಾಸಿನ ಹುಡುಗ-ಹುಡುಗಿಯರ ಮಧ್ಯೆ ಪರದೆ; ಅಫ್ಘಾನ್ ವಿವಿಗಳಲ್ಲಿ ಇದೆಂಥಾ ದುಸ್ಥಿತಿ?

|
Google Oneindia Kannada News

ಕಾಬೂಲ್, ಸಪ್ಟೆಂಬರ್ 6: ಅಫ್ಘಾನಿಸ್ತಾನದಲ್ಲಿನ ಯುದ್ಧ ಸನ್ನಿವೇಶದ ನಡುವೆಯೂ ಸೋಮವಾರದಿಂದ ಖಾಸಗಿ ವಿಶ್ವವಿದ್ಯಾಲಯಗಳು ಪುನಾರಂಭಗೊಂಡಿವೆ. ತಾಲಿಬಾನ್‌ನೊಂದಿಗೆ ಖಾಸಗಿ ವಿವಿಗಳು ಕಾರ್ಯಾರಂಭ ಮಾಡಿದ್ದು, ವಿಶೇಷವಾಗಿ ಮಕ್ಕಳು ಮತ್ತು ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ.

ಮಾನವೀಯತೆ ಆಧಾರದಲ್ಲಿ ಮಹಿಳೆಯರ ಶಿಕ್ಷಣಕ್ಕೂ ಅವಕಾಶ ನೀಡಿರುವ ತಾಲಿಬಾನ್ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಯಾವ ರೀತಿಯ ಸಮವಸ್ತ್ರವನ್ನು ಧರಿಸಬೇಕು, ಕಾಲೇಜುಗಳಿಗೆ ತೆರಳಿದ ವೇಳೆ ವಿದ್ಯಾರ್ಥಿನಿಯರು ಎಲ್ಲಿ ಮತ್ತು ಯಾವ ರೀತಿಯಾಗಿ ಕುಳಿತುಕೊಳ್ಳಬೇಕು, ವಿದ್ಯಾರ್ಥಿನಿಯರಿಗೆ ಯಾರು ಬೋಧನೆ ಮಾಡಬೇಕು ಎಂಬ ಎಲ್ಲ ಹಂತಗಳಲ್ಲೂ ನಿರ್ಬಂಧಗಳನ್ನು ವಿಧಿಸಲಾಗಿದೆ.

ಅದೇ ಭಯ: ಅಫ್ಘಾನಿಸ್ತಾನದಲ್ಲಿ ಮನೆ ಬಿಟ್ಟು ಹೊರಗೆ ಬರುವಂತಿಲ್ಲ ಮಹಿಳೆಯರು! ಅದೇ ಭಯ: ಅಫ್ಘಾನಿಸ್ತಾನದಲ್ಲಿ ಮನೆ ಬಿಟ್ಟು ಹೊರಗೆ ಬರುವಂತಿಲ್ಲ ಮಹಿಳೆಯರು!

ಅಫ್ಘಾನಿಸ್ತಾನದಲ್ಲಿ ಪುನಾರಂಭಗೊಂಡ ವಿಶ್ವವಿದ್ಯಾಲಯಗಳ ತರಗತಿಗಳಲ್ಲಿ ಯಾವ ರೀತಿ ಬದಲಾವಣೆಗಳು ಆಗಿವೆ ಎಂಬುದನ್ನು ಸಾರಿ ಹೇಳುವಂತಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. "ಆಮಾಜ್ ನ್ಯೂಸ್" ಮಾಡಿರುವ ಟ್ವೀಟ್ ಸಂದೇಶದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಮಧ್ಯದಲ್ಲಿ ಪರದೆಗಳನ್ನು ಹಾಕಿರುವುದು ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಎನ್ನುವಂತಿದೆ. ಪ್ರಸ್ತುತ ಕಾಲೇಜುಗಳಲ್ಲಿ ಜಾರಿಗೊಳಿಸಿರುವ ನಿಯಮಗಳು ಮತ್ತು ಭವಿಷ್ಯದಲ್ಲಿ ತಾಲಿಬಾನ್ ಅನುಷ್ಠಾನಗೊಳಿಸಲಿರುವ ಷರಿಯಾ ಕಾನೂನುಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಪರದ ಆಚೆ-ಈಚೆ ನೋಡುವಂತಿಲ್ಲ!

ಪರದ ಆಚೆ-ಈಚೆ ನೋಡುವಂತಿಲ್ಲ!

ಅಫ್ಘಾನಿಸ್ತಾನದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ಪುನಾರಂಭಗೊಳಿಸುವಂತೆ ಕಳೆದ ಶನಿವಾರ ತಾಲಿಬಾನ್ ಆದೇಶ ಹೊರಡಿಸಿತ್ತು. ಈ ಬಗ್ಗೆ ನೀಡಿರುವ ಆದೇಶದಲ್ಲಿ ವಿದ್ಯಾರ್ಥಿನಿಗಳು ಯಾವ ರೀತಿ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಉಲ್ಲೇಖಿಸಲಾಗಿತ್ತು. ಅದರಿಂತೆ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ತಮ್ಮ ಮುಖ ಕಾಣಿಸದಂತೆ ಸಂಪೂರ್ಣವಾಗಿ(ನಿಖಾಬ್ ಧರಿಸುವುದು ಕಡ್ಡಾಯ) ಮುಚ್ಚಿಕೊಳ್ಳುವುದು. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವುದು ಇಲ್ಲದಿದ್ದರೆ, ಒಂದೇ ಕೊಠಡಿಯಲ್ಲಿ ಇಬ್ಬರ ಮಧ್ಯೆ ಪರದೆಗಳನ್ನು ಹಾಕಿರುವ ಫೋಟೋಗಳು ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದನ್ನು ಸಾರಿ ಹೇಳುತ್ತಿವೆ.

ಕಡ್ಡಾಯವಾಗಿ ಬುರ್ಖಾ ಧರಿಸುವ ಬಗ್ಗೆ ಉಲ್ಲೇಖವಿಲ್ಲ

ಕಡ್ಡಾಯವಾಗಿ ಬುರ್ಖಾ ಧರಿಸುವ ಬಗ್ಗೆ ಉಲ್ಲೇಖವಿಲ್ಲ

ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಕಡ್ಡಾಯವಾಗಿ ಬುರ್ಖಾ ಧರಿಸಬೇಕು ಎಂಬುದರ ಬಗ್ಗೆ ಇದುವರೆಗೂ ಯಾವುದೇ ಆದೇಶವನ್ನು ಹೊರಡಿಸಿಲ್ಲ. ಆದರೆ ನಿಖಾಬ್ ಅನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಕಣ್ಣುಗಳನ್ನು ಹೊರತುಪಡಿಸಿದಂತೆ ಸಂಪೂರ್ಣ ಮುಖ ಕಾಣದ ರೀತಿಯಲ್ಲಿ ಬಟ್ಟೆಯನ್ನು ಧರಿಸಬೇಕು.

ವಿದ್ಯಾರ್ಥಿನಿಯರಿಗೆ ಯಾರು ಬೋಧಿಸಬೇಕು ಎಂಬ ಆದೇಶ

ವಿದ್ಯಾರ್ಥಿನಿಯರಿಗೆ ಯಾರು ಬೋಧಿಸಬೇಕು ಎಂಬ ಆದೇಶ

ಯಾವುದೇ ಸರ್ಕಾರಿ ಅಥವಾ ಖಾಸಗಿ ವಿಶ್ವವಿದ್ಯಾಲಯವೇ ಆಗಿರಲಿ. ಅಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಮಹಿಳಾ ಶಿಕ್ಷಕರೇ ಬೋಧನೆ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಉತ್ತಮ ಚಾರಿತ್ರ್ಯವನ್ನು ಹೊಂದಿರುವ ವೃದ್ಧರು ಬೋಧನೆ ಮಾಡಲು ಅವಕಾಶವಿದೆ. ವಿದ್ಯಾರ್ಥಿನಿಯರಿಗೆ ಬೋಧಿಸುವುದಕ್ಕಾಗಿ ಮಹಿಳಾ ಶಿಕ್ಷಕಿಯರನ್ನೇ ನೇಮಿಸಿಕೊಳ್ಳುವಂತೆ ವಿಶ್ವವಿದ್ಯಾಲಯಗಳಿಗೆ ತಾಲಿಬಾನ್ ಆದೇಶದಲ್ಲಿ ಸೂಚನೆ ನೀಡಲಾಗಿದೆ.

ಯುವಕ ಮತ್ತು ಯವತಿಯರಿಗೆ ಪ್ರತ್ಯೇಕ ಪ್ರವೇಶ, ನಿರ್ಗಮನ ದ್ವಾರ

ಯುವಕ ಮತ್ತು ಯವತಿಯರಿಗೆ ಪ್ರತ್ಯೇಕ ಪ್ರವೇಶ, ನಿರ್ಗಮನ ದ್ವಾರ

ಕಾಲೇಜುಗಳಲ್ಲಿ ಕೊಠಡಿ ಪ್ರವೇಶಿಸುವುದಕ್ಕೆ ಮತ್ತು ನಿರ್ಗಮಿಸುವುದಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ದ್ವಾರಗಳು ಇರಬೇಕು. ಯುವಕರು ಮತ್ತು ಯುವತಿಯರು ಒಟ್ಟಾಗಿ ಸೇರುವುದನ್ನು ತಡೆಯುವ ಉದ್ದೇಶದಿಂದ ಯುವಕರಿಗಿಂತ ಐದು ನಿಮಿಷ ಮೊದಲೇ ಯುವತಿಯರು ಕೊಠಡಿಗಳಿಂದ ಹೊರಹೋಗಬೇಕು. ತದನಂತರ ಯುವಕರು ಕಾಲೇಜಿನಿಂದ ಹೊರಗೆ ಹೋಗುವವರೆಗೆ ಕಾಯುವ ಕೊಠಡಿಗಳಲ್ಲಿ ಇರಬೇಕು.

"ಇದು ತೀರಾ ಕಷ್ಟಕರ ಯೋಜನೆಯಾಗಿದೆ. ಹುಡುಗಿಯರು ಮತ್ತು ಹುಡುಗರನ್ನು ಪ್ರತ್ಯೇಕವಾಗಿರಿಸಲು ನಮ್ಮಲ್ಲಿ ಸಾಕಷ್ಟು ಮಹಿಳಾ ಬೋಧಕರು ಅಥವಾ ತರಗತಿಗಳು ಇಲ್ಲ. ಆದರೆ ಅವರು ಹೆಣ್ಣುಮಕ್ಕಳಿಗೆ ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೆ ಹೋಗಲು ಅವಕಾಶ ನೀಡುತ್ತಿರುವುದೇ ಒಂದು ವಿಷಯವಾಗಿದೆ," ಎಂದು ಖಾಸಗಿ ವಿಶ್ವವಿದ್ಯಾಲಯದ ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕರೊಬ್ಬರು ಹೇಳಿರುವುದಾಗಿ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಫ್ಘಾನಿಸ್ತಾನದಲ್ಲಿ ಈಗಾಗಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಹುಡುಗರು ಮತ್ತು ಹುಡುಗಿಯರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಿ ಬೋಧನೆ ಮಾಡಲಾಗುತ್ತಿದೆ.

ಅಫ್ಘಾನ್ ನೆಲದಲ್ಲಿ ಮಹಿಳೆಯರಿಗೆ ಮತ್ತೆ ಅಪಾಯ

ಅಫ್ಘಾನ್ ನೆಲದಲ್ಲಿ ಮಹಿಳೆಯರಿಗೆ ಮತ್ತೆ ಅಪಾಯ

ಅಫ್ಘಾನಿಸ್ತಾನದ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ವಿಶೇಷ ಪಾತ್ರವನ್ನು ನೀಡಬೇಕು ಎಂಬ ಬಗ್ಗೆ ತಾಲಿಬಾನ್ ಯೋಜಿಸುವುದಿಲ್ಲ. ದೇಶಾದ್ಯಂತ ಪ್ರಮುಖ ಮಹಿಳೆಯರು ತಮ್ಮ ಸುರಕ್ಷತೆ ಭಯದಲ್ಲೇ ಹೆದರಿ ಕುಳಿತುಕೊಂಡಿದ್ದಾರೆ. 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಕಠಿಣ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಇನ್ನು ಕೆಲವೊಮ್ಮೆ ಕ್ರೂರವಾಗಿ ಜಾರಿಗೊಳಿಸಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಮಹಿಳೆಯರು ಕೆಲಸಕ್ಕೆ ಹೋಗುವಂತಿಲ್ಲ ಹಾಗೂ ಹುಡುಗಿಯರಿಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದಕ್ಕೆ ಯಾವುದೇ ರೀತಿ ಅನುಮತಿ ಇರುವುದಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಒಬ್ಬ ಪುರುಷ ಸಂಬಂಧಿಯ ಜೊತೆಗಿರಬೇಕು. ಈ ನಿಯಮ ಉಲ್ಲಂಘಿಸಿದರೆ ತಾಲಿಬಾನ್ ಧಾರ್ಮಿಕ ಪೊಲೀಸರಿಂದ ಅವಮಾನ ಮತ್ತು ಸಾರ್ವಜನಿಕವಾಗಿ ಏಟು ನೀಡಲಾಗುತ್ತದೆ.

ಜನರಲ್ಲಿ ಭಯ ಹುಟ್ಟಿಸಿರುವ ಷರಿಯಾ ಕಾನೂನು

ಜನರಲ್ಲಿ ಭಯ ಹುಟ್ಟಿಸಿರುವ ಷರಿಯಾ ಕಾನೂನು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿತ್ತು. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತಿತ್ತು. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತಿತ್ತು.

ಅಸಲಿಗೆ ಷರಿಯಾ ಕಾನೂನು ಎಂದರೇನು?

ಅಸಲಿಗೆ ಷರಿಯಾ ಕಾನೂನು ಎಂದರೇನು?

ಷರಿಯಾ ಕಾನೂನು ಎಂಬುದರ ಅರ್ಥ? ಇಸ್ಲಾಮಿಕ್ ಕಾನೂನುಗಳಿಗೆ ಸಮಾನಾರ್ಥವಾಗಿ ಈ ಷರಿಯಾ ಕಾನೂನುಗಳನ್ನು ಗುರುತಿಸಲಾಗುತ್ತದೆ. ಷರಿಯಾ ನಿಜವಾಗಿಯೂ ಲಿಖಿತ ನಿಯಮಗಳ ಸಂಹಿತೆಯಲ್ಲ, ಬದಲಾಗಿ ಹಲವು ಮೂಲಗಳಿಂದ ಪಡೆದ ನಿಯಮಗಳ ಒಂದು ಅಂಗವಾಗಿದೆ. ಅವುಗಳ ಪೈಕಿ ಪ್ರಮುಖವಾಗಿರುವುದೇ ಕುರಾನ್. ಇದರ ಹೊರತಾಗಿ ಇಸ್ಲಾಂನ ಪವಿತ್ರ ಗ್ರಂಥಗಳು, ಹಾಗೂ ಹದೀಸ್ ಎಂದು ಕರೆಯಲ್ಪಡುವ ಪ್ರವಾದಿ ಮೊಹಮ್ಮದ್ ಅವರ ಜೀವನ, ಬೋಧನೆಗಳು ಮತ್ತು ಅಭ್ಯಾಸಗಳನ್ನು ಸಾರಿ ಹೇಳುವ ಸಾಕ್ಷ್ಯಚಿತ್ರಗಳಿವೆ. ಅರೇಬಿಕ್ 'ಷರಿಯಾ' ಕಟ್ಟುನಿಟ್ಟಾದ ಕಾನೂನು ಸಂಹಿತೆಗಿಂತ ಅನುಸರಿಸಬೇಕಾದ ಮಾರ್ಗಗಳನ್ನು ಸೂಚಿಸುತ್ತದೆ. ಇದು ಧರ್ಮವನ್ನು ಹೇಗೆ ಪಾಲಿಸುವುದು, ನಡವಳಿಕೆ ಮತ್ತು ನಿಯಮಗಳ ಜೊತೆಗೆ ಕಾನೂನು ವಿಷಯಗಳನ್ನೂ ಒಳಗೊಂಡಿರುತ್ತದೆ. ಇದರ ಹೊರತಾಗಿ ಷರಿಯಾ ಕಾನೂನುಗಳು ಹೇಗೆ ರೂಪಗೊಂಡವು ಎಂಬುದನ್ನು ನಿರ್ಧರಿಸುವುದಕ್ಕೆ ಇನ್ನೂ ಎರಡು ಅಂಶಗಳಿವೆ. "ಒಂದು ವಿಶ್ಲೇಷಣೆ ಆಧಾರಿತ 'ಕಿಯಾಸ್' ಆದರೆ, ಎರಡು ನ್ಯಾಯಸಮ್ಮತವಾದ 'ಇಜ್ಮಾ' ಆಗಿದೆ.

ಷರಿಯಾ ಕಾನೂನನ್ನು ತಾಲಿಬಾನ್ ಏಕೆ ಪಾಲನೆ ಮಾಡುತ್ತೆ?

ಷರಿಯಾ ಕಾನೂನನ್ನು ತಾಲಿಬಾನ್ ಏಕೆ ಪಾಲನೆ ಮಾಡುತ್ತೆ?

ಅಫ್ಘಾನಿಸ್ತಾನದಲ್ಲಿ ಹೆಚ್ಚಿನ ತಾಲಿಬಾನಿಗಳು ಪಶ್ತೂನ್ ಜನಾಂಗಕ್ಕೆ ಸೇರಿದ್ದು, ಇಸ್ಲಾಂನ ಸುನ್ನಿ ಅನುಯಾಯಿಗಳಾಗಿದ್ದಾರೆ. ತಾಲಿಬಾನ್ ಸಂಘಟನೆಯ ಬಹುಪಾಲು ಉನ್ನತ ಸ್ಥಾನಗಳಲ್ಲಿ ಇದೇ ಸುನ್ನಿ ಜನಾಂಗದ ನಾಯಕರಿದ್ದಾರೆ. ಇದರ ಮಧ್ಯೆ ಅಫ್ಘಾನಿಸ್ತಾನದಲ್ಲಿ ಜಾರಿಗೊಳಿಸಲು ಹೊರಟಿರುವ ಷರಿಯಾ ಕಾನೂನುಗಳಿಂದ ಹಜಾರಸ್ ಮತ್ತು ಶಿಯಾಗಳಂತಹ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಗಳು ಹುಟ್ಟುಕೊಳ್ಳುತ್ತವೆ. ಅಲ್ಲದೆ, ಇಸ್ಲಾಮಿಕ್ ಪಾದ್ರಿಗಳ ಮಟ್ಟದಲ್ಲಿ ಮಹಿಳೆಯರು ಇಲ್ಲದೇ ಕಾನೂನು ಮತ್ತು ರಾಜಕೀಯ ಕ್ರಮದಲ್ಲಿ ಹಿತಾಸಕ್ತಿಗಳಿಗೆ ಸ್ಥಾನ ಸಿಗುವುದಿಲ್ಲ ಎಂಬ ಭಯವನ್ನು ಸೃಷ್ಟಿಸುತ್ತದೆ.

English summary
Afghanistan Universities Reopen: Curtains Strict Rules For Female Students from Taliban.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X