ತಾಲಿಬಾನ್ ಉಗ್ರರಿಗೆ ಆರಂಭಿಕ ಹಿನ್ನಡೆ: ಕೈತಪ್ಪಿದ ಅಫ್ಘಾನ್ 3 ಜಿಲ್ಲೆಗಳು

ಕಾಬೂಲ್, ಆಗಸ್ಟ್ 21: ಅಫ್ಘಾನಿಸ್ತಾನದಲ್ಲಿ ತಮ್ಮ ಬಾವುಟ ಹಾರಿಸಲು ತಾಲಿಬಾನ್ ಪಡೆಗಳು ಯಶಸ್ವಿಯಾದ ನಂತರ, ದೇಶದೊಳಗೆ ಈ ಉಗ್ರ ಸಂಘಟನೆಯ ವಿರುದ್ದದ ಆಕ್ರೋಶ ಬುಗಿಲೇಳುತ್ತಿದೆ. ಜಲಾಲಬಾದ್ ಪ್ರಾಂತ್ಯಕ್ಕೆ ಸೀಮಿತವಾಗಿದ್ದ ತಾಲಿಬಾನ್ ವಿರುದ್ದದ ಆಕ್ರೋಶ ದೇಶದ ಇತರ ನಗರಗಳಿಗೂ ವ್ಯಾಪಿಸುತ್ತಿದೆ.

ದೇಶದ ಧ್ವಜವನ್ನು ಕಿತ್ತೊಗೆಯುತ್ತಿರುವ ತಾಲಿಬಾನ್ ಉಗ್ರರ ವಿರುದ್ದ ಮಹಿಳೆಯರೂ ಪ್ರತಿಭಟನೆಗೂ ಇಳಿದಿದ್ದಾರೆ. ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸಕ್ಕೆ ತಾಲಿಬಾನ್ ಪಡೆಗಳು ಮುಂದಾಗಿದ್ದು, ಹಲವಾರು ಸಾವುನೋವುಗಳು ಈಗಾಗಲೇ ವರದಿಯಾಗಿದೆ.

ಕೆಲವೊಂದು ನಗರಕ್ಕೆ ಮಾತ್ರ ಸೀಮಿತವಾಗಿದ್ದ ತಾಲಿಬಾನ್ ಗಳ ವಿರುದ್ದದ ಪ್ರತಿಭಟನೆ ಶುಕ್ರವಾರ (ಆ 20) ರಾಜಧಾನಿ ಕಾಬೂಲ್ ಸೇರಿದಂತೆ ಇತರ ನಗರಗಳಲ್ಲೂ ಹೆಚ್ಚಾಗುತ್ತಿರುವುದು, ತಾಲಿಬಾನ್ ಗಳಿಗೆ ಆಗುತ್ತಿರುವ ಆರಂಭಿಕ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಶುಕ್ರವಾರ ತಡರಾತ್ರಿ ನಡೆದ ಮತ್ತೊಂದು ಬೆಳವಣಿಗೆಯೊಂದರಲ್ಲಿ, ತಾಲಿಬಾನ್ ವಿರೋಧಿ ಪಡೆಗಳು (ಅಫ್ಘನ್ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಪಡೆಗಳು) ಮೂರು ಜಿಲ್ಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ. ಜೊತೆಗೆ, ಈ ಹೋರಾಟದಲ್ಲಿ ಹಲವು ತಾಲಿಬಾನ್ ಉಗ್ರರು ಹತರಾಗಿದ್ದಾರೆಂದು ವರದಿಯಾಗಿದೆ.

ಈ ನಡುವೆ, ಅಮೆರಿಕಾ ಜೊತೆಗೆ ಮಾಡಿಕೊಂಡಿರುವ ಒಪ್ಪಂದದಂತೆ ಯುಎಸ್ ತನ್ನ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವವರೆಗೂ ಅಂದರೆ ಆಗಸ್ಟ್ 30ರವರೆಗೂ ಯಾವುದೇ ರೀತಿ ಸರ್ಕಾರ ರಚನೆಯ ಪ್ರಕ್ರಿಯೆಗಳನ್ನು ತಾಲಿಬಾನ್ ನಡೆಸುವುದಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

 ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಪಡೆ ಮುಖ್ಯಸ್ಥ ಖೈರ್ ಮೊಹಮ್ಮದ್ ಅಂದ್ರಾಬಿ

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಪಡೆ ಮುಖ್ಯಸ್ಥ ಖೈರ್ ಮೊಹಮ್ಮದ್ ಅಂದ್ರಾಬಿ

ತಾಲಿಬಾನ್ ಉಗ್ರರ ವಶದಲ್ಲಿದ್ದ ಮೂರು ಜಿಲ್ಲೆಗಳು (ಪೊಲ್-ಇ-ಹೇಸರ್, ದೇ ಶಲಾ, ಬಾನು) ತಾಲಿಬಾನ್ ವಿರೋಧಿ ಬಣ ವಶಕ್ಕೆ ಪಡೆದುಕೊಂಡಿದೆ ಎಂದು ಖೈರ್ ಮೊಹಮ್ಮದ್ ಅಂದ್ರಾಬಿ ಹೇಳಿಕೊಂಡಿದ್ದಾರೆ. ಖೈರ್ ಮೊಹಮ್ಮದ್ ನೇತೃತ್ವದಲ್ಲಿ ತಾಲಿಬಾನ್ ವಿರುದ್ದ ಹೋರಾಟ ನಡೆಸುತ್ತಿರುವ ಈ ಪಡೆಗಳು ಇನ್ನಷ್ಟು ಜಿಲ್ಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವತ್ತ ಮುನ್ನುಗ್ಗುತ್ತಿದೆ ಎಂದು ಮೊಹಮ್ಮದ್ ಹೇಳಿದ್ದಾರೆ.

ತಾಲಿಬಾನ್ ಉಗ್ರರಿಗೆ ಆರಂಭಿಕ ಹಿನ್ನಡೆ: ಕೈತಪ್ಪಿದ ಅಫ್ಘಾನ್ ಮೂರು ಜಿಲ್ಲೆಗಳು

ಸಾಮಾಜಿಕ ನ್ಯಾಯ ಕಾಪಾಡದ ತಾಲಿಬಾನ್ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿರುವ ಮೊಹಮ್ಮದ್, ಮುಂದಿನ ದಿನಗಳಲ್ಲಿ ಶಕ್ತಿಮೀರಿ ತಾಲಿಬಾನ್ ಅಟ್ಟಹಾಸವನ್ನು ಮೆಟ್ಟಿನಿಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಹೋರಾಟದಲ್ಲಿ ಹಲವು ತಾಲಿಬಾನ್ ಉಗ್ರರು ಹತರಾಗಿರುವುದನ್ನು ಅಫ್ಘನ್ ಅಧಿಕೃತ ಸುದ್ದಿವಾಹಿನಿ ಅಸ್ವಾಕಾ ಖಚಿತ ಪಡಿಸಿದೆ. ಇದು, ತಾಲಿಬಾನ್ ಉಗ್ರರಿಗೆ ಆದ ಹಿನ್ನಡೆ ಎಂದು ಹೇಳಲಾಗುತ್ತಿದೆ.

ಕಾಬೂಲ್ ನಗರದ ಉತ್ತರದಲ್ಲಿರುವ ಪೊಲ್-ಇ-ಹೇಸರ್ ಜಿಲ್ಲೆ

ಪಂಜಶಿರ್ ಕಣಿವೆ ಹತ್ತಿರವಾಗಿರುವ ಮತ್ತು ಕಾಬೂಲ್ ನಗರದ ಉತ್ತರದಲ್ಲಿರುವ ಪೊಲ್-ಇ-ಹೇಸರ್ ಜಿಲ್ಲೆಯನ್ನು ತಾಲಿಬಾನ್ ವಿರೋಧಿಗಳು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿರುವುದಕ್ಕೆ ಭಾರೀ ಜನಬೆಂಬಲ ವ್ಯಕ್ತವಾಗಿದೆ. ಜನರು ಅಫ್ಘಾನ್ ಬಾವುಟವನ್ನು ಹಾರಿಸುತ್ತಾ ತಮ್ಮ ಖುಷಿಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಈ ನಡುವೆ, ಕಂದಹಾರ್ ಮತ್ತು ಹೇರತ್ ನಗರದಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ತಾಲಿಬಾನ್ ಗಳು ಲಗ್ಗೆ ಇಟ್ಟಿದ್ದಾರೆ ಎನ್ನುವ ಸುದ್ದಿ ಸುಳ್ಳು ಎಂದು ಸ್ಥಳೀಯ ನೌಕರರು ಹೇಳಿದ್ದಾರೆ.

 ಹದಿನಾಲ್ಕು ಮಿಲಿಯನ್ ದೇಶವಾಸಿಗಳು ಆಹಾರದ ಆಹಾಕಾರ ಎದುರಿಸುವ ಸಾಧ್ಯತೆ

ಹದಿನಾಲ್ಕು ಮಿಲಿಯನ್ ದೇಶವಾಸಿಗಳು ಆಹಾರದ ಆಹಾಕಾರ ಎದುರಿಸುವ ಸಾಧ್ಯತೆ

ಒಂದು ಕಡೆ ಯುದ್ದ ಇನ್ನೊಂದು ಕಡೆ ಅನಾವೃಷ್ಟಿ, ಅಫ್ಘಾನಿಸ್ಥಾನ್ ದೇಶವನ್ನು ಮತ್ತಷ್ಟು ಗಂಭೀರ ಪರಿಸ್ಥಿತಿಗೆ ತಳ್ಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಸುಮಾರು ಹದಿನಾಲ್ಕು ಮಿಲಿಯನ್ ದೇಶವಾಸಿಗಳು ಆಹಾರದ ಆಹಾಕಾರ ಎದುರಿಸುವ ಸಾಧ್ಯತೆಯಿದೆ ಎನ್ನುವ ವಿಷಾದಕಾರಿ ಅಂಶವೊಂದು ವರದಿಯೊಂದರಲ್ಲಿ ಬಹಿರಂಗವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+