• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಬುದಾಬಿ ದೊರೆಯ ಅಂತಃಕರಣ ಕಲಕಿದ ಮುಗ್ದ ಬಾಲಕಿ!

|

ಅಬುದಾಬಿ, ಡಿಸೆಂಬರ್ 5; ಇತಿಹಾಸದಲ್ಲಿ ಅದೆಷ್ಟೋ ರಾಜರು ಮಹಾನ್ ಕ್ರೂರಿಗಳಾಗಿ, ಜನ ಪೀಡಕರಾಗಿ ಹೋಗಿದ್ದಾರೆ. ಹಾಗೆಯೇ ಮಹಾನ್ ಜನಪ್ರೇಮಿ, ಜನಾನುರಾಗಿಯಾಗಿಯೂ ಅನೇಕರು ಆಗಿ ಹೋಗಿದ್ದಾರೆ. ಪ್ರಜಾಪ್ರಭುತ್ವ ಬಂದ ನಂತರವೂ ಕೆಲ ದೇಶಗಳು ತಮ್ಮ ಜನರ ಕಷ್ಟ ಸುಖಗಳನ್ನು ನೋಡಿಕೊಳ್ಳುತ್ತಾ ರಾಜಪ್ರಭುತ್ವವನ್ನು ಇನ್ನೂ ಉಳಿಸಿಕೊಂಡಿವೆ.

ರಾಜಪ್ರಭುತ್ವ ಇರುವ ಪ್ರಮುಖ ದೇಶಗಳಲ್ಲಿ ಒಂದು ಯುನೈಟೆಡ್ ಅರಬ್ ಎಮಿರೈಟ್ಸ. ಇದರ ರಾಜಧಾನಿ ಅಬುದಾಬಿ. ಇ ದೇಶದ ದೊರೆ ಶೇಕ್ ಮಹಮ್ಮದ್ ಜಾಯೇದ್ ಒಂದು ಅಪರೂಪದ ಮಾನವೀಯ ಗುಣಕ್ಕೆ ಪ್ರಪಂಚದ ತುಂಬ ಈಗ ಸುದ್ದಿಯಾಗಿದ್ದಾರೆ. ವಿಶ್ವದ ಜನರು ಅವರ ಸರಳತೆನ್ನು ಕೊಂಡಾಡಿದ್ದಾರೆ.

ದೊರೆ ಮಾಡಿದ್ದೇನು?

ದೊರೆ ಮಾಡಿದ್ದೇನು?

ಯುಎಇ ದೊರೆ ಶೇಕ್ ಮಹಮ್ಮದ್ ಜಾಯೇದ್ ಅವರು ತಮ್ಮ ವಿದೇಶ ಪ್ರವಾಸದಿಂದ ಮರಳಿ ಅಬು ದಾಬಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಅರಮನೆಯಲ್ಲಿ ಮಕ್ಕಳಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಅರಮನೆ ಒಳಗೆ ನಡೆದುಕೊಂಡ ಬಂದ ಅವರನ್ನು ಮುಂಬಾಗಿಲಿನಲ್ಲಿ ಮಕ್ಕಳು ಸಂಭ್ರಮದಿಂದ ದ್ವಜ ಹಿಡಿದು ಸ್ವಾಗತಿಸಿತ್ತಿದ್ದರು. ಆಗ ದೊರೆ ಕೂಡ ಮಕ್ಕಳಿಗೆ ಹಸ್ತಲಾಘವ ಮಾಡಿ ಮುನ್ನಡೆಯುತ್ತಿದ್ದರು.

ಬೇಸರಗೊಂಡ ಬಾಲಕಿ!

ಬೇಸರಗೊಂಡ ಬಾಲಕಿ!

ಹೀಗೆ ದೊರೆ ಶೇಕ್ ಮಹಮ್ಮದ್ ಜಾಯೇದ್ ಅವರು ಮಕ್ಕಳಿಗೆ ಕೈ ಕುಲಕುತ್ತಾ ಹೋಗುತ್ತಿದ್ದಾಗ ದೊರೆಗೆ ಕೈ ಕುಲಕಬೇಕು ಎಂದು ಬಹಳ ಉತ್ಸಾಹದಿಂದ ಓಡಿ ಬಂದ ಐಶಾ ಅಲ್ ಮಜ್ರೋಯಿ ಎಂಬ ಪುಟ್ಟ ಬಾಲಕಿ ದೊರೆ ಕೈ ಕುಲಕಲು ಆಗದೇ ತೀವ್ರ ನಿರಾಶೆಗೊಂಡಳು. ಸಹಜವಾಗಿ ದೊರೆ ಇದನ್ನು ಗಮನಿಸದೇ ಶೇಕ್ ಮಹಮ್ಮದ್ ಜಾಯೇದ್ ಅವರು ಮುಂದೆ ಸಾಗಿಹೋದರು.

ವಿಡಿಯೋದಲ್ಲಿ ನೋಡಿದ ದೊರೆ

ವಿಡಿಯೋದಲ್ಲಿ ನೋಡಿದ ದೊರೆ

ಕಾರ್ಯಕ್ರಮ ಮುಗಿದ ನಂತರ ಯುಎಇ ನ ವಿದೇಶಾಂಗ ಸಚಿವ ಅಲ್ಲಿ ಉಂಟಾದ ಐಶಾಳ ಸಂಗತಿಯನ್ನು ವಿಡಿಯೋದಲ್ಲಿ ಸೆರೆ ಹಿಡಿದು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. ಇದನ್ನು ಗಮನಿಸಿದ ದೊರೆ ಶೇಕ್ ಮಹಮ್ಮದ್ ಜಾಯೇದ್ ಸುಮ್ಮನಿರಲಿಲ್ಲ. ಅವರು ಹಿಂದು ಮುಂದು ನೋಡದೇ ಐಶಾಳ ಮನೆಗೆ ಹೋಗಿ, ಐಶಾಳನ್ನು ಪ್ರೀತಿಯಿಂದ ಮಾತನಾಡಿಸಿ, ಅವಳ ಕೈ ಕುಲಕಿ, ಹಣೆಗೆ ಮುತ್ತಿಟ್ಟಿದ್ದಾರೆ. ಅವಳ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಜೊತೆಗೆ ಅವಳ ಕುಟುಂಬದವರ ಜೊತೆ ಕೆಲ ಸಮಯ ಕಳೆದು, ಅರಮೆನೆಯಲ್ಲಿ ನಡೆದ ಘಟನೆಗೆ ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ವೈರಲ್!

ಟ್ವಿಟ್ಟರ್ ನಲ್ಲಿ ವೈರಲ್!

ಐಶಾ ಅಲ್ ಮಜ್ರೋಯಿ ಹಾಗೂ ದೊರೆ ಶೇಕ್ ಮಹಮ್ಮದ್ ಜಾಯೇದ್ ನ ಅಪರೂಪದ ಕ್ಷಣಗಳನ್ನು ಕೊಂಡಾಡಿದ ಯುಯಿ ಹಾಗೂ ವಿಶ್ವದ ಅನೇಕ ಜನರು ದೊರೆಯ ಮಾನವೀಯತೆಯನ್ನು ಕೊಂಡಾಡಿದ್ದಾರೆ. ಅವರ ಆಯುಷ್ಯ ವೃದ್ಧಿಸಲಿ ಎಂದು ಹರಿಸಿದ್ದಾರೆ. ಅಲ್ಲದೇ ದೊರೆ ಅಪರೂಪದ ಪೋಟೊಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

English summary
UAE's King Abudabi King Shaik Mahammad Jayed and Baby Girl Photos goes viral on twitter. baby girl Isha gets special treat from king.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X