ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ರನ್ನು ಗೆಲ್ಲಿಸಿದ 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್'!

ಅಮೆರಿಕದಲ್ಲಿರುವ ಭಾರತೀಯರನ್ನು ಗುರಿಯಾಗಿಟ್ಟುಕೊಂಡು ಈ ಜಾಹೀರಾತನ್ನು ಆಡ್‌ಮಾರ್ಕ್ ಕಮ್ಯೂನಿಕೇಷನ್ಸ್ ರೂಪಿಸಿತ್ತು. ಹಿಂದಿಯಲ್ಲಿ 30 ಮತ್ತು 60 ಸೆಕೆಂಡುಗಳ ಜಾಹೀರಾತನ್ನು ಡೊನಾಲ್ಡ್ ಟ್ರಂಪ್ ಪ್ರಚಾರಕ್ಕಾಗಿ ಶ್ಯಾಮಲ್ ಮೋದಿ ರೂಪಿಸಿದ್ದರು.

By Prasad
|
Google Oneindia Kannada News

ಭಾರತದಲ್ಲಿ 2013ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 'ಅಬ್ ಕಿ ಬಾರ್ ಮೋದಿ ಸರ್ಕಾರ್' ಪ್ರಚಾರ ಭಾರೀ ಸದ್ದು ಮಾಡಿತ್ತು. ಮೋದಿ ಇತಿಹಾಸ ಸೃಷ್ಟಿಸಿದರು. ಅಮೆರಿಕದಲ್ಲಿ ಕೂಡ 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಎಂಬ ಪ್ರಚಾರ ಕೂಡ ಭಾರೀ ಸುದ್ದಿ ಮಾಡಿದೆ. ಡೊನಾಲ್ಡ್ ಟ್ರಂಪ್ ಕೂಡ ಇತಿಹಾಸ ಸೃಷ್ಟಿಸಿದ್ದಾರೆ.

ಈ ಪ್ರಚಾರದ ಹಿಂದಿರುವುದೂ ಭಾರತೀಯ ಮೂಲದ ಜಾಹೀರಾತು ಸಂಸ್ಥೆಯೇ. ದಕ್ಷಿಣ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಡ್‌ಮಾರ್ಕ್ ಕಮ್ಯೂನಿಕೇಷನ್ಸ್ 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಅಂದ್ರೆ ಈ ಬಾರಿ ಟ್ರಂಪ್ ಸರಕಾರ ಎಂಬ ಜಾಹೀರಾತಿನೊಂದಿಗೆ ಟ್ರಂಪ್ ಗೆಲುವಿಗೆ ಕೆಲಸ ಮಾಡಿರುವ ಸಂಸ್ಥೆ.

ಅಮೆರಿಕದಲ್ಲಿರುವ ಭಾರತೀಯರನ್ನು ಗುರಿಯಾಗಿಟ್ಟುಕೊಂಡು ಈ ವಿಶಿಷ್ಟವಾದ ಜಾಹೀರಾತನ್ನು ಆಡ್‌ಮಾರ್ಕ್ ಕಮ್ಯೂನಿಕೇಷನ್ಸ್ ರೂಪಿಸಿತ್ತು. ಸಂಸ್ಥೆಯ ಅಧ್ಯಕ್ಷ ಶ್ಯಾಮಲ್ ಮೋದಿ ಮತ್ತು ರಿಪಬ್ಲಿಕನ್ ಹಿಂದೂ ಮೈತ್ರಿಕೂಟ ಸೇರಿಕೊಂಡು ಹಿಂದಿಯಲ್ಲಿ 30 ಮತ್ತು 60 ಸೆಕೆಂಡುಗಳ ಎರಡು ಜಾಹೀರಾತನ್ನು ಟ್ರಂಪ್ ಪ್ರಚಾರಕ್ಕಾಗಿ ರೂಪಿಸಿದ್ದರು.

Ab Ki Baar Trump Sarkar ad campaign behind Trump victory

ಅಮೆರಿಕದಲ್ಲಿರುವ ಭಾರತೀಯರ ಮತಗಳನ್ನು ಸೆಳೆಯಲು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರು ನಡೆಸಿದ ಮೊದಲ ಪ್ರಯತ್ನ. ಅಮೆರಿಕದಲ್ಲಿ ಭಾರತೀಯರ ಮತಗಳು ಹೆಚ್ಚಾಗುತ್ತಿದ್ದು, ರಿಪಬ್ಲಿಕನ್ ಸಮೀತಿ ಮತ್ತು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಲಭಿಸಿದ್ದು ನಮಗೆ ಸಿಕ್ಕ ಗೌರವ ಎಂದು ಮೋದಿ ಹೇಳಿದ್ದಾರೆ.

ಎಡಿಸನ್ ನ ನ್ಯೂಜೆರ್ಸಿ ಕನ್ವೆನ್ಷನ್ ಅಂಡ್ ಎಕ್ಸ್‌ಪೋ ಕೇಂದ್ರದಲ್ಲಿ ನಡೆದ ರಿಪಬ್ಲಿಕನ್ ಹಿಂದೂ ಮೈತ್ರಿಕೂಟದ ಸಮಾವೇಶವನ್ನು ಆಯೋಜಿಸುವಲ್ಲಿ ಕೂಡ ಆಡ್‌ಮಾರ್ಕ್ ಕಮ್ಯೂನಿಕೇಷನ್ಸ್ ಪ್ರಮುಖ ಪಾತ್ರ ವಹಿಸಿತ್ತು. ಸುಮಾರು 10 ಸಾವಿರಕ್ಕೂ ಹೆಚ್ಚು ಭಾರತೀಯರು ಭಾಗಿಯಾಗಿದ್ದ ಈ ಸಮಾವೇಶದಲ್ಲಿ ಟ್ರಂಪ್ ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇದರಲ್ಲಿ ಪ್ರಭುದೇವ, ಮಲೈಕಾ ಆರೋರಾ ಖಾನ್ ಮುಂತಾದ ಬಾಲಿವುಡ್ ತಾರೆಗಳು ಜನರನ್ನು ರಂಜಿಸಿದ್ದರು.

"ಅಮೆರಿಕದ ಭಾರತೀಯರನ್ನು ತಲುಪಲು ಡೊನಾಲ್ಡ್ ಟ್ರಂಪ್ ಅವರು ಹಿಂದ್ಯಾರೂ ಮಾಡಿರದಂಥ ಪ್ರಯತ್ನ ಮಾಡಿದ್ದಾರೆ. ಭಾರತೀಯ-ಅಮೆರಿಕನ್ನರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೊಟ್ಟಮೊದಲ ಅಧ್ಯಕ್ಷೀಯ ಅಭ್ಯರ್ಥಿಯೂ ಟ್ರಂಪ್ ಆಗಿದ್ದಾರೆ. ಇಂಥ ಐತಿಹಾಸಿಕ ಘಟನೆಯಲ್ಲಿ ಭಾಗಿಯಾಗಿದ್ದರಿಂದ ನಾವೂ ಥ್ರಿಲ್ ಆಗಿದ್ದೇವೆ" ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ಸುದ್ದಿ ವಾಹಿನಿಗಳಾದ ಝೀ ಟಿವಿ, ಆಜ್ ತಕ್, ಝೀ ನ್ಯೂಸ್, ಟೈಮ್ಸ್ ನೌ, ನ್ಯೂಸ್ 18, ಸೋನಿ ಟಿವಿ, ಸ್ಟಾರ್ ಟಿವಿ, ಆಪ್ ಕಾ ಕಲರ್ಸ್, ಇಂಡಿಯಾ ಟುಡೇ, ಎನ್‌ಡಿಟಿವಿ 24X7 ಮತ್ತು ಕೆಲ ಖಾಸಗಿ ಚಾನಲ್ಲುಗಳಲ್ಲೂ ಜಾಹೀರಾತು ಬಿತ್ತರವಾಗಿತ್ತು. ಅಮೆರಿಕದ ಪ್ರಮುಖ ಚಾನಲ್ಲುಗಳಾದ ಎಬಿಸಿ ನ್ಯೂಸ್ ಮತ್ತು ಜಿಮ್ಮಿ ಕಿಮ್ಮೆಲ್ ಟಿವಿ ಶೋಗಳಲ್ಲೂ ಕಾಣಿಸಿಕೊಂಡಿತ್ತು.

ಒಂದು ಜಾಹೀರಾತು ಅಸಾಧ್ಯವನ್ನು ಸಾಧಿಸಿತ್ತು. ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿ ಸಾಕಷ್ಟು ವೀಕ್ಷಕರ ಗಮನವನ್ನು ಸೆಳೆದಿತ್ತು. ದಿ ಟೈಮ್ಸ್ ಆಫ್ ಇಂಡಿಯಾ, ದಿ ಇಂಡಿಯನ್ ಎಕ್ಸ್‌ಪ್ರೆಸ್, ಇಂಡಿಯಾ ಟುಡೇ, ಮಿಂಟ್, ಮೇಲ್ ಟುಡೇ ಸೇರಿದಂತೆ ಭಾರತೀಯ ಪತ್ರಿಕೆಗಳು ಕೂಡ ಡೊನಾಲ್ಡ್ ಟ್ರಂಪ್ ಅವರಿಗೆ ಭಾರೀ ಪ್ರಚಾರ ನೀಡಿದ್ದವು.

ಡೊನಾಲ್ಡ್ ಟ್ರಂಪ್ ಅವರಿಗೆ ಅಗತ್ಯವಾಗಿ ಬೇಕಿದ್ದ ಬೆಂಬಲವನ್ನು 'ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಜಾಹೀರಾತು ನೀಡಿತ್ತು. 2013ರಲ್ಲಿ ಭಾರತದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ನೀಡಿದ ಅಭೂತಪೂರ್ವ ಗೆಲವನ್ನೇ ಟ್ರಂಪ್ ಅವರಿಗೂ ನೀಡಿತು ಎಂದು ಶ್ಯಾಮಲ್ ಮೋದಿ ಅವರು ಸಂಸತದಿಂದ ಹೇಳುತ್ತಾರೆ.

English summary
AdMark Communications was responsible for the media placement and media buying strategy for the 'Ab Ki Baar Trump Sarkar' ad campaign that targeted the Indian American population in the US. The ad helped Donald Trump win the hearts of Indian Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X