ಪಾಕಿಸ್ತಾನದಲ್ಲಿ ಕೋಳಿ ಮೇಲೆ ಅತ್ಯಾಚಾರ, ಬಾಲಕನ ಬಂಧಿಸಿದ ಪೊಲೀಸರು

Posted By:
Subscribe to Oneindia Kannada

ಇದೊಂದು ವಿಚಿತ್ರ ಪ್ರಕರಣ. ನಡೆದಿರುವುದು ಅಷ್ಟೇ ವಿಚಿತ್ರವಾದ ದೇಶ ಪಾಕಿಸ್ತಾನದಲ್ಲಿ. ಅಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ ಕೋಳಿಯೊಂದರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಹದಿನಾಲ್ಕು ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮಗು ಮೇಲೆ ಅತ್ಯಾಚಾರ ಮಾಡಿದ ಕೇರ್ ಟೇಕರ್ ಬಂಧನ

ಲಾಹೋರ್ ನಿಂದ ಇನ್ನೂರು ಕಿಲೋಮೀಟರ್ ದೂರದಲ್ಲಿರುವ ಜಲಪುರ್ ಭಟಿಯಾನ್ ನಲ್ಲಿ ಘಟನೆ ನಡೆದಿದ್ದು, ಹಫೀಜಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಮನ್ಸಾಬ್ ಹಸನ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನೆರೆಮನೆಯಾತ ಅನ್ಸರ್ ಹುಸೇನ್ ತನ್ನ ಕೋಳಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾನೆ.

A boy arrested in Pakistan on charges of sexually assaulting hen

" ಹುಸೇನ್ ನಿಂದ ಲೈಂಗಿಕ ದೌರ್ಜನ್ಯ ನಡೆದ ಮೇಲೆ ಕೋಳಿ ಮೃತಪಟ್ಟಿದೆ. ಈ ಘಟನೆಗೆ ನಸ್ರುಲ್ಲಾ ಮತ್ತು ತುಫೈಲ್ ಎಂಬಿಬ್ಬರು ಪ್ರತ್ಯಕ್ಷದರ್ಶಿಗಳಾಗಿದ್ದಾರೆ" ಎಂದು ಎಫ್ ಐಆರ್ ದಾಖಲಾಗಿದೆ.

ಹಿಂದಿನ ಜನ್ಮದಲ್ಲಿ ನೀನು ನನ್ನ ಪತ್ನಿಯೆಂದು ಸ್ವಾಮೀಜಿಯಿಂದ ಅತ್ಯಾಚಾರ!

ವೈದ್ಯಕೀಯ ಪರೀಕ್ಷೆಯಲ್ಲಿ ಕೋಳಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಾತ್ರಿಯಾಗಿದೆ. "ಹುಸೇನ್ ಕೂಡ ತಪ್ಪೊಪ್ಪಿಕೊಂಡಿದ್ದಾನೆ. ಲೈಂಗಿಕ ಹತಾಶೆಯಿಂದ ಹೀಗೆ ಮಾಡಿದ್ದಾಗಿ" ಆತ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದು, ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 14-year-old boy has been arrested on charges of sexually assaulting a hen in Pakistan’s Punjab province, a media report said Tuesday. Mansab Ali, a resident of Jalapur Bhatian police station Hafizabad, told police that his neighbour Ansar Hussain “abducted” his hen and “raped” it.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ