80 ವರ್ಷದ ಹಿಂದಿನ ಚಿತ್ರದಲ್ಲಿ ಸ್ಮಾರ್ಟ್ ಫೋನ್ ಹಿಡಿದ ಅಮೆರಿಕನ್!

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 28: ಮೊಬೈಲ್ ಫೋನ್ ಎಂಬ ಮಾಯಾ ವಸ್ತು ಎಂಬತ್ತು ವರ್ಷದ ಹಿಂದೆಯೇ ಅಮೆರಿಕದಲ್ಲಿ ಇತ್ತೇ? ಅದಕ್ಕೆ ಪುರಾವೆಯೇನೋ ಎಂಬಂತೆ ಚಿತ್ರವೊಂದು ದೊರೆತಿದ್ದು, ಅದರಲ್ಲಿ ಅಮೆರಿಕನ್ ವೊಬ್ಬ ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದಂತೆ ಕಾಣುತ್ತಿದೆ. ಈ ಹಳೆಯ ಚಿತ್ರವನ್ನು ಆನ್ ಲೈನ್ ಮ್ಯಾಗಜಿನ್ 'ಮದರ್ ಬೋರ್ಡ್' ಗಮನಕ್ಕೆ ತಂದಿದೆ.

   Paint Your Cow's Horns, Decorate It To End Up In Jail New Rules

   ಗೂಗಲ್ ಆಂಡ್ರಾಯ್ಡ್ 8.0 ಆವೃತ್ತಿಗೆ 'ಒರಿಯೊ' ಬಿಸ್ಕೆಟ್ ಹೆಸರು

   ಉಂಬರ್ಟೋ ರೋಮಾನೋ ಎಂಬತ್ತು ವರ್ಷದ ಹಿಂದೆ ಬರೆದಿರುವ ಈ ಚಿತ್ರದ ಹೆಸರು 'ಮಿಸ್ಟರ್ ಪೈನ್ ಕೋನ್ ಅಂಡ್ ದ ಸೆಟ್ಲಿಂಗ್ ಸ್ಪ್ರಿಂಗ್ ಫೀಲ್ಡ್'. ಮಸಾಚ್ಯುಸೆಟ್ಸ್, ಸ್ಪಿಂಗ್ ಫೀಲ್ಡ್ ಅಂತ ಕರೆಸಿಕೊಳ್ಳುವ ಸ್ಥಳಗಳ ನಿರ್ಮಾತೃ ವಿಲಿಯಂ ಪೈನ್ ಕೋನ್. ಈ ಚಿತ್ರದಲ್ಲಿ ಪೈನ್ ಕೋನ್ ಗುಲಾಬಿ ಬಣ್ಣದ ಸೂಟ್ ಧರಿಸಿದ್ದಾನೆ.

   ಆತನ ಎಡಕ್ಕೆ ಕೂತಿರುವ ಬೆತ್ತಲೆದೆಯ ವ್ಯಕ್ತಿಯೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿರುವಂತಿದೆ. "ವ್ಯಕ್ತಿಯೊಬ್ಬ ಐಫೋನ್ ಹಿಡಿದುಕೊಂಡಿರುವ 1937ನೇ ಇಸವಿಯ ಈ ಚಿತ್ರವನ್ನು ನಾವೆಲ್ಲ ನೋಡಿದ್ದೇವೆಯೇ?" ಎಂಬ ಶೀರ್ಷಿಕೆಯನ್ನು ಮದರ್ ಬೋರ್ಡ್ ನಿಯತಕಾಲಿಕೆಯು ಈ ಲೇಖನಕ್ಕೆ ನೀಡಿದೆ.

   ಕಳೆದ ವರ್ಷ ಆಪಲ್ ನ ಸಿಇಒ ಟಿಮ್ ಕುಕ್ ಆಮ್ ಸ್ಟರ್ ಡ್ಯಾಮ್ ನ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು. ಆ ವೇಳೆ ಹದಿನೇಳನೇ ಶತಮಾನದ ಚಿತ್ರವೊಂದನ್ನು ನೋಡಿ ಅಚ್ಚರಿಗೆ ಒಳಗಾಗಿದ್ದರು. ಆ ಚಿತ್ರದಲ್ಲಿ ಮಹಿಳೆಯೊಬ್ಬರು ಐಫೋನ್ ನಂತೆ ಕಾಣುವಂಥದನ್ನು ಕೈಯಲ್ಲಿ ಹಿಡಿದಿದ್ದರು.

   ಆಗ ಟಿಮ್ ಕುಕ್ ಜತೆಗಿದ್ದ ನೀಲಿ ಕ್ರೋಸ್, ಐಫೋನ್ ಆವಿಷ್ಕಾರ ಆಗಿದ್ದು ಎಲ್ಲಿ ಮತ್ತು ಯಾವಾಗ ಎಂದು ಗೊತ್ತಾಯಿತಾ ಎಂಬುದಾಗಿ ಪ್ರಶ್ನಿಸಿದ್ದರು ಎಂದು ಯುನೈಟೆಡ್ ಕಿಂಗ್ ಡಮ್ ನ ಡೈಲಿ ಸ್ಟಾರ್ ವರದಿ ಮಾಡಿತ್ತು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The Internet is abuzz with talk of time travel, again, after online magazine Motherboard brought to attention an 80-year-old mural that shows a Native American holding what looks like a smartphone.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ